ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ : ಮಲ್ಲಪುರಂ ಜಿಲ್ಲೆಯ ಮನೆಮನೆಯಲ್ಲೂ ಮೊಬೈಲ್‌ ಫೋನ್‌

By Staff
|
Google Oneindia Kannada News

ಮಲ್ಲಪುರಂ : ಅತಿ ಹೆಚ್ಚು ಸಾಕ್ಷರರ ನಾಡಾದ ಕೇರಳ, ಅತಿ ಹೆಚ್ಚು ಮೊಬೈಲ್‌ ಫೋನ್‌ ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಕಾಲ ದೂರವೇನಿಲ್ಲ. ಕೇರಳದ ಮಲ್ಲಪುರಂ ಜಿಲ್ಲೆ ಈ ನಿಟ್ಟಿನಲ್ಲಿ ದಾಖಲೆಯ ಹೆಜ್ಜೆ ಇಟ್ಟಿದೆ. ಜಿಲ್ಲೆಯಲ್ಲಿರುವ ಪ್ರತಿ ಹತ್ತು ಜನರ ಪೈಕಿ 7 ಮಂದಿಯ ಬಳಿ ಮೊಬೈಲ್‌ ಫೋನ್‌ ಇದೆ.

ನಿಮಗೆ ಅಚ್ಚರಿ ಎನಿಸಿದರೂ, ಇದು ಸತ್ಯ. ಮಲ್ಲಪುರಂ ಜಿಲ್ಲೆಯ ಪ್ರತಿ ತಾಲೂಕಿನ, ಪ್ರತಿ ಗ್ರಾಮದ ಪ್ರತಿಯಾಂದು ಮನೆಯವರೂ ದೂರವಾಣಿ ಸೌಲಭ್ಯ ಒದಗಿಸುವಂತೆ ಕೋರಿ ವರ್ಷಗಳ ಹಿಂದೆಯೇ ದೂರವಾಣಿ ಇಲಾಖೆಗೆ ಅರ್ಜಿ ಹಾಕಿದ್ದಾರೆ. ಆದರೆ, ದೂರಸಂಪರ್ಕ ಇಲಾಖೆ ಈವರೆಗೆ ಕೇವಲ ಶೇ.25 ಮನೆಗಳಿಗೆ ಮಾತ್ರ ದೂರವಾಣಿ ಸೌಲಭ್ಯ ಕಲ್ಪಿಸಲು ಶಕ್ತವಾಗಿದೆ.

ಈ ಜಿಲ್ಲೆಯ ಜನತೆಯ ದೂರವಾಣಿ ಅಗತ್ಯವನ್ನು ಮನಗಂಡ ಎಸ್ಕೋಟೆಲ್‌ ಮೊಬೈಲ್‌ ಫೋನ್‌ ಕಂಪನಿಯು ಜಿಲ್ಲೆಯ ಪ್ರತಿಯಾಬ್ಬರಿಗೂ ಸಾಲದ ರೂಪದಲ್ಲಿ ಮೊಬೈಲ್‌ ಫೋನ್‌ ನೀಡುವ ವಿನೂತನ ಯೋಜನೆಯನ್ನು ಪ್ರಕಟಿಸಿತು. ಸಂಸ್ಥೆಯ ಯೋಜನೆ ಫಲನೀಡಿತು. ಪ್ರಥಮ ಹಂತದಲ್ಲೇ ಜಿಲ್ಲೆಯ 12 ಸಾವಿರಕ್ಕೂ ಹೆಚ್ಚು ಗ್ರಾಹಕರು ಮೊಬೈಲ್‌ ಫೋನ್‌ ಖರೀದಿಸಲು ಮುಂದಾದದರು.

ಸಾಲ ಯೋಜನೆಯಲ್ಲಿ ಮೊದಲು ಗ್ರಾಹಕರಿಂದ ಕೇವಲ ಕನಿಷ್ಠ ಮೊತ್ತವನ್ನು ಪಡೆದು, ಫೋನ್‌ ನೀಡಿ, ಆನಂತರ ಬಾಕಿ ಹಣವನ್ನು ಮನೆಮನೆಗೇ ಬಂದು ವಸೂಲಿ ಮಾಡಿಕೊಂಡು ಹೋಗುವುದಾಗಿ ಸಂಸ್ಥೆ ಸಾರಿತು. ಜನತೆ ಒಪ್ಪಿತು. ಸಂಸ್ಥೆ ಸೆಲ್‌ ಫೋನ್‌ ದರವನ್ನು 4,500 - 5000ಕ್ಕೆ ನಿಗದಿ ಮಾಡಿತು. ಕೈಗೆಟಕುವ ದರದಲ್ಲಿ ದೂರವಾಣಿ ಸಿಕ್ಕಾಗ ಜನ ಮುಗಿಬಿದ್ದರು.

ಸೆಲ್‌ ಫೋನ್‌ ಈ ರೀತಿಯ ಕ್ರಾಂತಿಯಲ್ಲಿ ತೊಡಗಿದ್ದನ್ನು ಕಂಡರೂ, ದೂರವಾಣಿ ಇಲಾಖೆ ಮಾತ್ರ ಇನ್ನೂ ನಿದ್ರಾವಸ್ಥೆಯಲ್ಲೇ ಇದೆ. ತನ್ನ ಬಳಿ ಇರುವ ಅರ್ಜಿಗಳನ್ನು ವಿಲೆ ಮಾಡಿ, ತತ್‌ಕ್ಷಣವೇ ದೂರವಾಣಿ ಸೌಲಭ್ಯ ಒದಗಿಸುವ ಚಿಂತೆಯೂ ಅದಕ್ಕಿದ್ದಂತಿಲ್ಲ. ಹೀಗಾಗಿ ಜನ ದೂರಸಂಪರ್ಕ ಇಲಾಖೆಯನ್ನು ಮರೆತರು, ಮೊಬೈಲ್‌ ಕಂಪನಿಯನ್ನು ಆದರಿಸಿದರು.

ಈಗ ಮಲ್ಲಪುರಂ ಜಿಲ್ಲೆಯ ಮನೆಮನೆಯಲ್ಲೂ ಮೊಬೈಲ್‌ ಫೋನ್‌ಗಳು ರಾರಾಜಿಸುತ್ತಿವೆ. ಎಸ್‌.ಟಿ.ಡಿ. ಬೂತ್‌ಗಳು, ಸಾರ್ವಜನಿಕ ದೂರವಾಣಿ ಕೇಂದ್ರಗಳು ಬಿಕೋ ಎನ್ನುತ್ತಿವೆ. ಹಲವು ಎಸ್‌.ಟಿ.ಡಿ. ಬೂತ್‌ಗಳು ಬಾಗಿಲೂ ಮುಚ್ಚಿವೆ. ದೂರಸಂಪರ್ಕ ಇಲಾಖೆ ಇನ್ನೂ ದಿವ್ಯ ನಿರ್ಲಕ್ಷ್ಯ ತಾಳದಿರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X