ಇನ್ಫೋಸಿಸ್ : ಮೊದಲ ತ್ರೆೃಮಾಸಿಕದ ಲಾಭದಲ್ಲಿ ಶೇ.49 ಹೆಚ್ಚಳ
ಬೆಂಗಳೂರು : ಸಾಫ್ಟ್ವೇರ್ ದಿಗ್ಗಜ ಇನ್ಫೋಸಿಸ್ ಟೆಕ್ನಾಲಜೀಸ್, ಜೂನ್ಗೆ ಮುಗಿದ ವಿತ್ತ ತ್ರೆೃ ಮಾಸಿಕದಲ್ಲಿ ಕಳೆದ ವರ್ಷದ ಇದೇ ತ್ರೆೃಮಾಸಿಕಕ್ಕಿಂತ 49 ಪ್ರತಿಶತ ಹೆಚ್ಚು ಲಾಭ ದಾಖಲಿಸಿದೆ.
ಕಳೆದ ವಿತ್ತ ವರ್ಷದ ಮೊದಲ ತ್ರೆೃಮಾಸಿಕದಲ್ಲಿ ಕಂಪನಿಯ ಒಟ್ಟು ಲಾಭ 126.76 ಕೋಟಿ ರುಪಾಯಿಯಾಗಿತ್ತು. ಈ ವಿತ್ತ ವರ್ಷದ ಮೊದಲ ತ್ರೆೃಮಾಸಿಕದಲ್ಲಿ 190 ಕೋಟಿ ರುಪಾಯಿ (40.4 ದಶಲಕ್ಷ ಡಾಲರ್) ಲಾಭ ಮಾಡಿದೆ. ಕಂಪನಿಯ ಪೂರಾ ಆದಾಯದಲ್ಲಿ ಕಳೆದ ವಿತ್ತ ವರ್ಷದ ಮೊದಲ ತ್ರೆೃಮಾಸಿಕಕ್ಕಿಂತ (ಒಟ್ಟಾದಾಯ 370.64 ಕೋಟಿ ರುಪಾಯಿ) ಪ್ರಸಕ್ತ ವರ್ಷದ ಮೊದಲ ತ್ರೆೃಮಾಸಿಕದಲ್ಲಿ 68 ಪ್ರತಿಶತ ಹೆಚ್ಚಳವಾಗಿದೆ (ಒಟ್ಟಾದಾಯ 626 ಕೋಟಿ ರುಪಾಯಿ).
ಕಂಪನಿಯ ಸಾಮಾನ್ಯ ಚಟುವಟಿಕೆಗಳಿಂದ ಸಂದಿರುವ ಪ್ರತಿ ಶೇರಿನ ಆದಾಯ 28.72 ರುಪಾಯಿ. ಕಳೆದ ಸಾಲಿನ ತ್ರೆೃಮಾಸಿಕದಲ್ಲಿ ಇದು 18.34 ರುಪಾಯಿ ಆಗಿತ್ತು. ಪ್ರಸಕ್ತ ವಿತ್ತ ವರ್ಷದ ಮೊದಲ ತ್ರೆೃಮಾಸಿಕದಲ್ಲಿ ಕಂಪನಿ 26 ಹೊಸ ಗ್ರಾಹಕರನ್ನು ಕಂಡುಕೊಂಡಿದೆ. ಆ ಪೈಕಿ ಎಪಿಎಲ್, ಬರ್ಲಿಂಗ್ಟನ್ ನಾರ್ದರ್ನ್ ಹಾಗೂ ಸ್ಯಾಂಟಾ ಫೀ ರೈಲ್ವೆ ಕಂಪನಿ, ಪಿನ್ಯಾಕಲ್ ವೆಸ್ಟ್ ಕ್ಯಾಪಿಟಲ್ ಕಾರ್ಪೊರೇಷನ್, ವೇಲಿಯೋ, ಏರ್ಬಸ್ ಹಾಗೂ ದಿ ಲೆಕ್ಸಿಸ್ನೆಕ್ಸಿಸ್ ಗ್ರೂಪ್ಸ್ ಪ್ರಮುಖವಾದವು.
ಇದನ್ನು ಗಮನಿಸಿದಲ್ಲಿ ಅಮೆರಿಕೆಯ ಆರ್ಥಿಕ ಕುಂಠಿತದಿಂದ ನಮ್ಮ ದೇಶದ ಐಟಿ ಕಂಪನಿಗಳಿಗೆ ಅಂಥಾ ಹೊಡೆತವೇನೂ ಬಿದ್ದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಲ್ಲವೇ ?
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications