Get Updates
Get notified of breaking news, exclusive insights, and must-see stories!

49 ಪೌರ ಸಂಸ್ಥೆಗಳ ಚುನಾವಣೆ : ಕಾಂಗ್ರೆಸ್‌ ಮತ್ತೊಮ್ಮೆ ಜಯಭೇರಿ

ಬೆಂಗಳೂರು : ರಾಜ್ಯದ 49 ಪೌರಸಂಸ್ಥೆಗಳಿಗೆ ಎರಡನೇ ಹಂತದಲ್ಲಿ ನಡೆದ ಚುನಾವಣೆಯಲ್ಲೂ ಆಡಳಿತಾರೂಢ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಕಳೆದ ಮೇ ತಿಂಗಳಿನಲ್ಲಿ ನಡೆದಿದ್ದ ಮೊದಲ ಹಂತದ ಚುನಾವಣೆಯಲ್ಲೂ ಕಾಂಗ್ರೆಸ್‌ ದಿಗ್ವಿಜಯ ಸಾಧಿಸಿತ್ತು.

49 ಪೌರ ಸಂಸ್ಥೆಗಳ ಪೈಕಿ 2 ನಗರ ಸಭೆ ಹಾಗೂ 29 ಪಟ್ಟಣ ಪಂಚಾಯ್ತಿಗಳಲ್ಲಿ ಕಾಂಗ್ರೆಸ್‌ ನಿಚ್ಚಳ ಬಹುಮತ ಪಡೆದಿದೆ. ಭಾರತೀಯ ಜನತಾಪಕ್ಷ ಹಾಗೂ ಜನತಾದಳದ ಉಭಯ ಬಣಗಳು ಮತ್ತೊಮ್ಮೆ ಹೀನಾಯ ಸೋಲುಂಡಿವೆ. ಒಟ್ಟು 44 ಪಟ್ಟಣ ಪಂಚಾಯ್ತಿಗಳ ಪೈಕಿ 21ರಲ್ಲಿ ಸ್ಪಷ್ಟ ಬಹುಮತ ಗಳಿಸಿರುವ ಕಾಂಗ್ರೆಸ್‌ ಇನ್ನೂ ಹತ್ತು ಪಟ್ಟಣ ಪಂಚಾಯ್ತಿಗಳಲ್ಲಿ ಮುನ್ನಡೆ ಸಾಧಿಸಿದೆ.

ಬಿಜೆಪಿ 3, ಜನತಾದಳ ಸಂಯುಕ್ತ 2, ಪಕ್ಷೇತರರು 3ರಲ್ಲಿ ಸ್ಪಷ್ಟ ಬಹುಮತ ಗಳಿಸಿದ್ದರೆ, ಐದು ಪಟ್ಟಣ ಪಂಚಾಯ್ತಿಗಳಲ್ಲಿ ಯಾರಿಗೂ ಸ್ಪಷ್ಟ ಬಹುಮತ ದೊರೆತಿಲ್ಲ. ಅಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಪಕ್ಷಗಳ ಬಲಾಬಲ ಹಾಗೂ ಫಲಿತಾಂಶದ ವಿವರ ಹೀಗಿದೆ: ಒಟ್ಟು ಸ್ಥಾನಗಳು - 750, ಪ್ರಕಟಿತ ಫಲಿತಾಂಶ - 745, ಕಾಂಗ್ರೆಸ್‌ - 364, ಬಿಜೆಪಿ - 102, ಸಂಯುಕ್ತ ಜನತಾದಳ - 50, ಜಾತ್ಯತೀತ ಜನತಾದಳ - 85, ಸಿಪಿಐಎಂ - 4, ಸಿಪಿಐ -1, ಬಿಎಸ್‌.ಪಿ - 6, ಪಕ್ಷೇತರರು - 133.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+