Get Updates
Get notified of breaking news, exclusive insights, and must-see stories!

ಎಸ್‌ಟಿಎಫ್‌ ಮುಖ್ಯಸ್ಥರಾಗಿ ಥೇವರಂ ನೇಮಕಕ್ಕೆ ಹೈಕೋರ್ಟ್‌ ಮೊಹರು

ಚೆನ್ನೈ : ವೀರಪ್ಪನ್‌ ಶಿಕಾರಿಯಲ್ಲಿ ತೊಡಗಿರುವ ವಿಶೇಷ ಕಾರ್ಯಪಡೆಯ ಮುಖ್ಯಸ್ಥರನ್ನಾಗಿ ವಾಲ್ಟರ್‌ ಥೇವರಂ ಅವರ ನೇಮಕವನ್ನು ಚೆನ್ನೈ ಹೈಕೋರ್ಟ್‌ ಎತ್ತಿ ಹಿಡಿದಿದ್ದು , ಥೇವರಂ ನೇಮಕವನ್ನು ಪ್ರಶ್ನಿಸಿದ್ದ ಮೂರು ಅರ್ಜಿಗಳನ್ನು ವಜಾ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ಕೆ. ಜೈನ್‌ ಹಾಗೂ ನ್ಯಾಯಮೂರ್ತಿ ಪಿ. ತಂಗವೇಲು ಅವರಿದ್ದ ವಿಭಾಗೀಯ ಪೀಠ ಮಂಗಳವಾರ ಈ ಮಹತ್ವದ ತೀರ್ಪನ್ನು ನೀಡಿದ್ದು , ಥೇವರಂ ನೇಮಕದ ಬಗೆಗಿದ್ದ ಕಾನೂನು ಆತಂಕಗಳು ಹೈಕೋರ್ಟ್‌ ತೀರ್ಪಿನಿಂದ ಬಗೆಹರಿದಿವೆ. ಥೇವರಂ ಅವರ ನೇಮಕ ಭಾರತೀಯ ಪೊಲೀಸ್‌ ಸರ್ವೀಸ್‌ ನಿಯಮಗಳು ಅಥವಾ ಪೊಲೀಸ್‌ ಆ್ಯಕ್ಟ್‌ಗಳನ್ನು ಉಲ್ಲಂಘಿಸಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಥೇವರಂ ಅವರನ್ನು ಒಂದು ವರ್ಷ ಕಾಲಾವಧಿಗೆ ಮಾತ್ರ ನೇಮಿಸಿರುವುದನ್ನು ಪ್ರಸ್ತಾಪಿಸಿರುವ ನ್ಯಾಯಾಲಯ, ಥೇವರಂ ಓರ್ವ ಮಾರ್ಗದರ್ಶಿ ಮಾತ್ರ ಎಂದು ಹೇಳಿದೆ. ಥೇವರಂ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಐಜಿ ಹಾಗೂ ಇನ್ನಿತರೆ ಅಧಿಕಾರಿಗಳು ಥೇವರಂ ಅವರಿಗಿಂತ ಕೆಳ ದರ್ಜೆಯವರಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಎಲ್ಲ ಅಧಿಕಾರಿಗಳು ಕೇವಲ ತಮಿಳುನಾಡು ಡಿಜಿಪಿ ಅವರಿಗೆ ಮಾತ್ರ ಜವಾಬ್ದಾರರು ಎಂದು ತಿಳಿಸಿದೆ.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+