Get Updates
Get notified of breaking news, exclusive insights, and must-see stories!

ಈ ಬಾರಿ ಸಂಭ್ರಮ, ಸಡಗರದ ದಸರಾ ಆಚರಣೆ : ಸರ್ಕಾರದ ಸಮ್ಮತಿ

ಬೆಂಗಳೂರು : ಈ ವರ್ಷ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ವೈಭವದಿಂದ ಆಚರಿಸಲು ರಾಜ್ಯ ಸರಕಾರ ಸಮ್ಮತಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರದ ಸಮಗ್ರ ಅಭಿವೃದ್ಧಿಗೆ ದಸರಾ ಕೊಡುಗೆಯಾಗಿ 3 ಕೋಟಿ ರುಪಾಯಿಗಳ ವಿಶೇಷ ಅನುದಾನವನ್ನು ನೀಡಲೂ ಮುಂದಾಗಿದೆ.

ಕಳೆದ ವರ್ಷ ಡಾ. ರಾಜ್‌ಕುಮಾರ್‌ ಅಪಹರಣದ ಹಿನ್ನೆಲೆಯಲ್ಲಿ ಮೈಸೂರು ದಸರವನ್ನು ಅತ್ಯಂತ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ದಸರೆಯನ್ನು ವೈಭವದಿಂದ ಆಚರಿಸಬೇಕು ಎಂಬ ಮೈಸೂರು ನಿಯೋಗದ ಮನವಿಗೆ ಸರಕಾರ ಸಮ್ಮತಿ ಸೂಚಿಸಿದೆ.

ಈ ಸಂಬಂಧ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌ ನೇತೃತ್ವದಲ್ಲಿ ಮೈಸೂರು ಮೇಯರ್‌ ಬಿ.ಕೆ. ಪ್ರಕಾಶ್‌, ಉಪಮೇಯರ್‌ ಆರ್‌. ಪುಷ್ಪವಲ್ಲಿ ಅರವನ್ನೊಳಗೊಂಡ ನಿಯೋಗವು ಮುಖ್ಯಮಂತ್ರಿ ಕೃಷ್ಣ ಅವರನ್ನು ಭೇಟಿಮಾಡಿ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ 3 ಕೋಟಿ ರು.ಗಳ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿ ಸಮ್ಮತಿಸಿದರು.

ಮೈಸೂರಿನಲ್ಲಿ ಏಷಿಯಾ ಅಭಿವೃದ್ಧಿ ಬ್ಯಾಂಕ್‌ನಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕೂಡ ತ್ವರಿತಗತಿಯಲ್ಲಿ ಮುಗಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಕೃಷ್ಣ ನೀಡಿದರು. ಬೆಂಗಳೂರು ಕಾರ್ಯಪಡೆಯ ಮಾದರಿಯಲ್ಲಿ ಮೈಸೂರಿನಲ್ಲೂ ಒಂದು ಕಾರ್ಯಪಡೆ ರಚಿಸುವುದಾಗಿ ಮುಖ್ಯಮಂತ್ರಿ ನಿಯೋಗಕ್ಕೆ ಆಶ್ವಾಸನೆ ನೀಡಿದರು.

ಮೈಸೂರಿನ ನಿಯೋಗ ಈ ಬಾರಿ ವೈಭವಯುತವಾಗಿ ನಾಡಹಬ್ಬ ಆಚರಿಸಲು ಮಾಡಿಕೊಂಡ ಮನವಿಗೂ ಕೃಷ್ಣ ತಮ್ಮ ಒಪ್ಪಿಗೆ ಸೂಚಿಸಿದರು. ದಸರಾ ಮೆರವಣಿಗೆ ತೆರಳುವ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು ಪೂರೈಕೆ, ವಿದ್ಯುತ್‌ ವ್ಯವಸ್ಥೆಯನ್ನು ಈ ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದೂ ತಿಳಿಸಿದರು. ಶಾಸಕರಾದ ಎ. ಗುರುಸ್ವಾಮಿ, ಕಾಂಗ್ರೆಸ್‌ ಪಕ್ಷದ ನಗರ ಪಾಲಿಕೆ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ನಿಯೋಗದಲ್ಲಿದ್ದರು.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+