ತನಿಖೆ ಬೇಡ, ನ್ಯಾಯ ಬೇಕು- ತಮಿಳುನಾಡಲ್ಲಿ ಮುಂದುವರಿದ ಗೊಂದಲ
* ಪಾಪ್ರಿ ಶ್ರೀ ರಾಮನ್
ಚೆನ್ನೈ : ಕೇಂದ್ರ ಸರ್ಕಾರ ಬೆಟ್ಟು ಮಾಡಿ ತೋರಿಸಿ, ಎಚ್ಚರಿಕೆ ಕೊಟ್ಟಿದ್ದರೂ ತಮಿಳುನಾಡಿನಲ್ಲಿ ಗೊಂದಲಗಳು ಮುಂದುವರೆದಿವೆ...
- ಜೂನ್ 30ರಂದು ನಡೆದ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಬಂಧನ ಪ್ರಕರಣದ ತನಿಖೆ ಬೇಡ, ಆದರೆ ಕಟುವಾಗಿ ವರ್ತಿಸಿರುವ ಪೊಲೀಸರ ವಿರುದ್ಧ ಕ್ರಮ ಬೇಕು ಎನ್ನುತ್ತಿದೆ ಡಿಎಂಕೆ. ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಜುಲೈ 7ರಂದು ತನಿಖೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.
- ಫೊರೆನ್ಸಿಕ್ ಪರಿಣತ ಪಿ.ಚಂದ್ರಶೇಖರ್ ಅವರ ಪ್ರಕಾರ ತಮಿಳುನಾಡು ಪೊಲೀಸರು ಬಹಿರಂಗ ಪಡಿಸಿರುವ ಕರುಣಾನಿಧಿ ಬಂಧನದ ವಿಡಿಯೋ ಕೆಸೆಟ್ಟು ಸಾಕಷ್ಟು ತಿದ್ದಿ ತೀಡಲಾಗಿರುವ ಪ್ರತಿ. ಸನ್ ಟಿವಿ ತೋರಿದ್ದ ಕೆಸೆಟ್ಟಿನ ಹುರುಳನ್ನು ಸುಳ್ಳಾಗಿಸುವುದೇ ಇದರ ಹಿಂದಿನ ಉದ್ದಿಶ್ಯ ಎಂಬುದು ಸ್ಪಷ್ಟ. ಬಂಧನಕ್ಕೊಳಗಾಗಿದ್ದ ಕೇಂದ್ರ ಸಚಿವ ಮುರಸೋಳಿ ಮಾರನ್ ಪುತ್ರ ಕಲಾನಿಧಿ ಮಾರನ್ ಒಡೆತನದ ಸನ್ ಟಿವಿ ಆ ಕೆಸೆಟ್ಟನ್ನು ತೋರಿದ್ದಾದರೂ ಯಾಕೆ ? ಹೇಗೆ?
- ಕರುಣಾನಿಧಿ, ಅವರ ಪುತ್ರ ಎಂ.ಕೆ.ಸ್ಟಾಲಿನ್, ಮುರಸೋಳಿ ಮಾರನ್ ಮತ್ತಿತರರಿಗೆ ಜಾಮೀನು ನೀಡಿರುವ ಚೆನ್ನೈ ಮುಖ್ಯ ನ್ಯಾಯಮೂರ್ತಿ ಅಶೋಕ್ ಕುಮಾರ್ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಈ ಕಾರಣಕ್ಕೆ ಅವರು ಹೆಚ್ಚು ಭದ್ರತೆ ಒದಗಿಸುವಂತೆ ಕೋರಿದ್ದಾರೆ.
- ನಾವು ತನಿಖೆಗೆ ಮುಗಿಯುವವರೆಗೆ ಕಾದು ಕೂರಲು ಸಿದ್ಧರಿಲ್ಲ. ಮಾನವೀಯ ಮೌಲ್ಯಗಳನ್ನು ಬದಿಗೊತ್ತಿ ಕ್ರೌರ್ಯ ಮೆರೆದಿರುವ ಪೊಲೀಸರ ವಿರುದ್ಧ ತಕ್ಷಣವೇ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಡಿಎಂಕೆ ಪಕ್ಷದ ಸಂಸತ್ ಸದಸ್ಯ ಎಸ್.ಗಣೇಶನ್ ಪ್ರಧಾನಿ ವಾಜಪೇಯಿ ಅವರಿಗೆ ಪತ್ರ ಬರೆದಿದ್ದಾರೆ.
- ಪ್ರಕರಣದ ತೀವ್ರತೆಯನ್ನು ಹಂತಹಂತವಾಗಿ ತಣ್ಣ ವಾಗಿಸುವ ಯತ್ನವೇ ತನಿಖೆ ಎನ್ನುತ್ತಾರೆ ಡಿಎಂಕೆ ವಕೀಲರಾದ ಆರ್.ಎಸ್.ಭಾರತಿ.
- ತನಿಖಾ ಸಮಿತಿ ವರದಿಯನ್ನೇ ಸಲ್ಲಿಸುವುದಿಲ್ಲ ಅಥವಾ ಜಾರಿಗೆ ತರುವಂಥ ಯಾವುದೇ ಶಿಫಾರಸ್ಸನ್ನೂ ಮಾಡುವುದಿಲ್ಲ ಎಂಬುದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಇಳಾ ಗಣೇಶನ್ ಅವರ ಅಭಿಪ್ರಾಯ.
- ಕ್ರೌರ್ಯ ತೋರಿರುವ ಪೊಲೀಸರನ್ನು ಅಮಾನತ್ತುಗೊಳಿಸುವಂತೆ ರಾಜ್ಯ ಬಿಜೆಪಿ ಘಟಕ ರಾಜ್ಯಪಾಲ ಸಿ.ರಂಗರಾಜನ್ ಅವರನ್ನು ಕೋರಲಿದೆ.
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications