ಸತ್ಯ ಸಾಯಿಬಾಬಾ ಆರಾಧನೆ ನಿಲ್ಲಿಸಲು ತಮಿಳರಿಗೆ ಎಲ್ಟಿಟಿಇ ಕರೆ
ಶ್ರೀಲಂಕಾದಲ್ಲಿನ ತಮಿಳರ ಹೋರಾಟವನ್ನು ವಿರೋಧಿಸುತ್ತಿರುವ ಧಾರ್ಮಿಕ ನಾಯಕ ಸತ್ಯ ಸಾಯಿಬಾಬಾ ಆರಾಧನೆಯನ್ನು ನಿಲ್ಲಿಸುವಂತೆ ‘ಎಲ್ಟಿಟಿಇ’ ವಿಶ್ವಾದ್ಯಂತ ವಾಸವಾಗಿರುವ ತಮಿಳರಿಗೆ ಕರೆ ಕೊಟ್ಟಿದೆ.
ಸರ್ಕಲ್ ಡೈಜೆಸ್ಟ್ ಎನ್ನುವ ‘ಇ- ಮೇಲ್ ಸುದ್ದಿಪತ್ರ’ದ ಮೂಲಕ ಸಾಯಿಬಾಬಾ ಆರಾಧನೆ ನಿಲ್ಲಿಸುವಂತೆ ಎಲ್ಟಿಟಿಇ ತಮಿಳರಿಗೆ ಕರೆ ನೀಡಿದೆ ಎಂದು ಸುದ್ದಿಮಾಧ್ಯಮಗಳು ಪ್ರಕಟಿಸಿವೆ. ಶ್ರೀಲಂಕಾ ಸರ್ಕಾರದ ವಿರುದ್ಧ ನಡೆಯುತ್ತಿರುವ ತಮಿಳರ ಆಂದೋಲನ ವಿರೋಧಿಸುವಂತೆ ಸಾಯಿಬಾಬಾ ತನ್ನ ತಮಿಳು ಭಕ್ತರನ್ನು ಪ್ರಚೋದಿಸುತ್ತಿದ್ದಾರೆ ಎಂದು ಸುದ್ದಿಪತ್ರ ಹೇಳಿದೆ.
ತನ್ನ ಇತ್ತೀಚಿನ ಹಿಟ್ಲಿಸ್ಟ್ನಲ್ಲಿ ಸಾಯಿಬಾಬಾ ಅವರ ಹೆಸರನ್ನು ಸೇರಿಸಿಕೊಂಡಿರುವ ಎಲ್ಟಿಟಿಇ, ಸಿಂಹಳೀಯರೊಂದಿಗೆ ಶಾಂತಿಯಿಂದ ಬಾಳಿ ಎಂದು ಶ್ರೀಲಂಕಾ ತಮಿಳರಿಗೆ ಬೋಧಿಸುವ ಸಾಯಿ, ಬಹುಸಂಖ್ಯಾತ ಸಿಂಹಳೀಯರಿಗೆ ಇದೇ ಮಾತನ್ನು ಹೇಳುತ್ತಿಲ್ಲ ಎಂದು ಆಪಾದಿಸಿದೆ.
ಸಿಂಹಳೀಯ ಪ್ರಮುಖರಾದ ಶ್ರೀಲಂಕಾದ ಡೆಪ್ಯುಟಿ ರಕ್ಷಣಾ ಸಚಿವ ಅನುರುದ್ಧ ರಾಟ್ವಾಟ್ಟೆ , ಡಿಫೆನ್ಸ್ ಸ್ಟಾಫ್ ಜನರಲ್ ರೋಹನ್ ದಾಲುವಾಟ್ಟೆ ಹಾಗೂ ಸ್ಪೀಕರ್ ಅನುರ ಭಂಡಾರನಾಯಕೆ ಅವರುಗಳು ಸಾಯಿಬಾಬಾ ಮಿತ್ರರೆಂದು ಎಲ್ಟಿಟಿಇ ಹೆಸರಿಸಿದೆ.
ತಮಿಳು ಸ್ವಾತಂತ್ರ್ಯ ಹೋರಾಟಗಾರರನ್ನು ದಮನ ಮಾಡಲು ಪ್ರಯತ್ನಿಸುತ್ತಿರುವ ಸಾಯಿಬಾಬಾ ಅವರನ್ನು ತಮಿಳುವಿರೋಧಿ ಎಂದು ಪರಿಗಣಿಸಲು ಮನವಿ ಮಾಡಿರುವ ಎಲ್ಟಿಟಿಇ ತನ್ನ ಇ- ಮೇಲ್ ಸುದ್ದಿಪತ್ರದಲ್ಲಿ ‘ಕಾಲ ಮಿಂಚುವ ಮುನ್ನ , ನಿಮ್ಮ ಮೆದುಳನ್ನು ಬಳಸಿರಿ’ ಎಂದು ತಮಿಳರಿಗೆ ಕರೆ ಕೊಟ್ಟಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications