Get Updates
Get notified of breaking news, exclusive insights, and must-see stories!

ಧುಮ್ಮಿಕ್ಕಿ ಹರಿಯುತ್ತಿದೆ ಜೋಗ!ನಿಂತಲ್ಲೇ ಮಡುಗಟ್ಟಿದೆ ಅಭಿವೃದ್ಧಿ!!

ಮತ್ತೆ ಭೋರ್ಗರೆಯುತ್ತಿದೆ ಜೋಗ ! ಹೊಸ ಉತ್ಸಾಹದೊಂದಿಗೆ, ಬಲ ಕೂಡಿಸಿಕೊಂಡ ಕವಲುಗಳೊಂದಿಗೆ, ಮುಂಗಾರು ಮರಳಿ ತಂದ ಯೌವ್ವನದೊಂದಿಗೆ!
ಅಬ್ಬರಿಸುವ, ಪುಟಿದೇಳುವ, ಅಪ್ಪಳಿಸಿ ತುಂತುರಾಗಿ ಚಿಲುಮೆಯಾಗುವ- ಅಬ್ಬಾ , ನೀರಿಗೆ ಎಷ್ಟೊಂದು ಮುಖಗಳು. 960 ಅಡಿಗಳಿಂದ ಭೂಮಿಗೆ ಧುಮ್ಮಿಕ್ಕುವ ಜೋಗದ ಸೊಗಸನ್ನು ನೋಡಿಯೇ ತಣಿಯಬೇಕು. ಅಂಥ ಆತ್ಮಸುಖವನ್ನು ಅನುಭವಿಸಿಯೇ, ‘ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್‌ ಗುಂಡಿ’ ಎಂದು ಮೂಗೂರು ಮಲ್ಲಪ್ಪ ಹಾಡಿರಬೇಕು.

ಈ ಬಾರಿ ಜೋಗದಲ್ಲಿ ನೀರ ತಾಂಡವ ಆರಂಭವಾಗಿದ್ದು ವಾಡಿಕೆಗಿಂತ ತುಸು ವಿಳಂಬವಾಗಿ. ಮುಂಗಾರ ಮುನಿಸಿನಿಂದ ಸಣಕಲಾಗಿದ್ದ ಜೋಗ ಸುಂದರಿ ಮೈ ತುಂಬಿಕೊಳ್ಳಲು ಜೂನ್‌ ಕೊನೆಯವರೆಗೂ ಕಾಯಬೇಕಾಯಿತು. ತಡವಾಗಿ ಆಗಮಿಸಿದ ಮುಂಗಾರಿನಿಂದ ಸೊರಗಿದ್ದ ಸುಂದರಿ ಈಗ ಮತ್ತೆ ವಿಜೃಂಭಿಸುತ್ತಿದ್ದಾಳೆ.

ನಿತ್ಯ ಹರಿದ್ವರ್ಣ ಕಾನನದ ನಡುವೆ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಿಂದ ಹರಿದು ಬರುವ ಶರಾವತಿ, ಜೋಗಿನಮಠದಲ್ಲಿ ಧುಮ್ಮಿಕ್ಕುವ ಪರಿಯ ಸಾಕ್ಷಾತ್ಕರಿಸಿಕೊಳ್ಳಲೂ ಪ್ರವಾಸಿಗರೂ ಉತ್ಸುಕತೆಯಿಂದ ಧಾವಿಸುತ್ತಿದ್ದಾರೆ. ಒಟ್ಟಿನಲ್ಲಿ - ಈಗ ಜೋಗ್‌ನದೇ ಮಾತು. ಅಲ್ಲೀಗ ‘ನೀರಹಬ್ಬ’! ಹಬ್ಬದಲ್ಲಿ ಪಾಲ್ಗೊಂಡವರೇ ಪುಣ್ಯವಂತರು.

ಇದು ಜೋಗದ ಅಭಿವೃದ್ಧಿಯೆಂಬ ದಶಕದ ಕಥೆಯು
ಕಳೆದ ಹತ್ತು ವರ್ಷಗಳಿಂದ ಪ್ರವಾಸೋದ್ಯಮ ತಾಣವನ್ನಾಗಿ ಜೋಗವನ್ನು ಅಭಿವೃದ್ಧಿಪಡಿಸುವ ಮಾತುಗಳನ್ನು ನಮ್ಮ ರಾಜಕಾರಣಿಗಳು ಆಡುತ್ತಲೇ ಬಂದಿದ್ದಾರೆ. ಮಾತುಗಳಾಡುವ ವ್ಯಕ್ತಿಗಳು ಬದಲಾಗಿದ್ದಾರೆ. ಜಲಪಾತದಲ್ಲೂ ಸಾಕಷ್ಟು ನೀರು ಹರಿದಿದೆ. ಅಭಿವೃದ್ಧಿಯ ಮಾತುಗಳು ಮಾತ್ರ ಪ್ರತಿ ವರ್ಷವೂ ಸಂಪ್ರದಾಯದಂತೆ ತಪ್ಪದೆ ನವೀಕೃತವಾಗುತ್ತಿವೆ ಅನ್ನುವುದು ಮಾತ್ರ ವಿಶೇಷ.

ಜೋಗದ ಅಭಿವೃದ್ಧಿಗೆ ಪ್ರಾಧಿಕಾರವನ್ನು ರಚಿಸುವುದೋ ಅಥವಾ ನಿಗಮವನ್ನು ರಚಿಸುವುದೋ ಅನ್ನುವ ವಿಷಯವನ್ನು ಸರ್ಕಾರ ಅಂತಿಮಗೊಳಿಸಿಲ್ಲ . ಶುಕ್ರವಾರ (ಜುಲೈ 6) ನಡೆದ ಸಂಪುಟ ಸಭೆಯಲ್ಲೂ ಈ ವಿಷಯ ಯಥಾ ಪ್ರಕಾರ ನಿರ್ಣಯ ರೂಪ ತಾಳಲಾಗದೆ ನೆನೆಗುದಿಯಲ್ಲಿಯೇ ಉಳಿದಿದೆ. ಅಲ್ಲಿಗೆ ಜೋಗದ ಅಭಿವೃದ್ಧಿ ಇದ್ದಲ್ಲೇ ಇದೆ ಎಂದಾಯಿತು.

ಜೋಗವನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ನಡೆದ ದಶಕದ ಪ್ರಯತ್ನಗಳನ್ನು ಹೆಸರಿಸುವುದಾದರೆ-

  • 1999 ರಲ್ಲಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರ ಸರ್ಕಾರದಿಂದ ಜೋಗ ಅಭಿವೃದ್ಧಿ ಪ್ರಾಧಿಕಾರದ ಪರಿಕಲ್ಪನೆ. ಉದ್ಯಾನವನ, ಜಲಪಾತದಲ್ಲಿ ರೋಪ್‌ವೇ, ಶರಾವತಿ ಹಿನ್ನೀರಿನಲ್ಲಿ ದೋಣಿ ವಿಹಾರ ಮುಂತಾಗಿ ಅಭಿವೃದ್ಧಿ ಯೋಜನೆಗಳ ಕನಸು. ಬಂಗಾರಪ್ಪ ಸರ್ಕಾರದಿಂದ ಕೋಟಿ ರುಪಾಯಿ ಬಿಡುಗಡೆ.
  • ಪ್ರವಾಸೋದ್ಯಮ ಇಲಾಖೆಯ ಪಿ.ಡಿ. ಖಾತೆಯಲ್ಲಿ ಬಂಗಾರಪ್ಪ ಬಿಡುಗಡೆ ಮಾಡಿದ ಕೋಟಿ ರುಪಾಯಿ ಚಿಕ್ಕಾಸೂ ಖರ್ಚಾಗದೆ ಇನ್ನೂ ಉಳಿದಿದೆ. ಬಡ್ಡಿ ಲೆಕ್ಕ ಹಾಕಿದರೆ ಹಣ ದುಪ್ಪಟ್ಟಾಗಿರಬಹುದು.
  • ಬಂಗಾರಪ್ಪನವರ ನಂತರದ ಸರ್ಕಾರಗಳಿಗೆ ಜೋಗ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಅನಾಸಕ್ತಿ , ನಿಗಮದ ಕನಸು ಕಾಣುವಲ್ಲಿ ಆಸಕ್ತಿ . ಕನಸಿನಲ್ಲೇ ಅಧಿಕಾರಾವಧಿ ಪೂರೈಕೆ.
  • ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರಿಗೂ ನಿಗಮದ ಬಗೆಗೇ ಒಲವು. ಬಂಡವಾಳ ಕ್ರೋಢೀಕರಣಕ್ಕೆ ನಿಗಮ ಸ್ಥಾಪನೆಯೇ ಒಳಿತೆಂಬ ಅಭಿಪ್ರಾಯ. ನಿಗಮ ಸ್ಥಾಪನೆಗೆ ಕರಡು ಸಿದ್ಧವಾಗಿದೆ. ಕಾನೂನು ಹಾಗೂ ಹಣಕಾಸು ಇಲಾಖೆಗಳೂ ಹ್ಞೂಂ ಅಂದಿವೆ. ಉಳಿದಿರುವುದು ಕ್ಯಾಬಿನೆಟ್‌ ಅಂಗೀಕಾರ ಮುದ್ರೆ ಮಾತ್ರ. ಆದರೆ, ಈ ಹಂತದಲ್ಲಿ ಸರ್ಕಾರ ಮತ್ತೊಮ್ಮೆ ನಿಗಮ- ಪ್ರಾಧಿಕಾರ ಚರ್ಚೆಯನ್ನು ಕೈಗೆತ್ತಿಕೊಂಡಿದೆ. ಅರ್ಥಾತ್‌ ಪರಿಸ್ಥಿತಿಯನ್ನು 10 ವರ್ಷಗಳ ಹಿಂದಕ್ಕೆ ಒಯ್ಯಲಾಗಿದೆ.
  • ಜೋಗದ ಅಭಿವೃದ್ಧಿಗೆ ನೆರವು ನೀಡಲು ಕೇಂದ್ರ ಉತ್ಸುಕವಾಗಿದ್ದು , ಅಭಿವೃದ್ಧಿ ಯೋಜನೆಯ ಬಗ್ಗೆ ರಾಜ್ಯ ಸರ್ಕಾರ ಸಮಗ್ರ ವರದಿ ನೀಡಿದಲ್ಲಿ ನೆರವು ಒದಗಿಸುವುದಾಗಿ ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಅನಂತಕುಮಾರ್‌ ಅನೇಕ ವೇದಿಕೆಗಳಲ್ಲಿ ಹೇಳಿದ್ದಾರೆ. ರಾಜ್ಯ ಈವರೆಗೂ ಕೇಂದ್ರದ ನೆರವು ಪಡೆಯುವ ಬಗ್ಗೆ ಪ್ರಾಮಾಣಿಕ ಪ್ರಯತ್ನಗಳ ನಡೆಸಿರುವ ಬಗ್ಗೆ ಯಾವ ವರದಿಯೂ ಇಲ್ಲ .
ಇದು ಜೋಗದ ಅಭಿವೃದ್ಧಿಯ ಕಥೆ.
ನಿಮಗೇನನ್ನಿಸುತ್ತೆ

ಮುಖಪುಟ / ನೋಡು ಬಾ ನಮ್ಮೂರ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+