ಎಚ್ಚರ!ಬೆಂಗಳೂರಿನ ಪಂಚತಾರಾ ಹೊಟೇಲುಗಳಲ್ಲಿ ಠಕ್ಕರಿದ್ದಾರೆ
ಬೆಂಗಳೂರು : ಅಶೋಕ, ಗೇಟ್ ವೇ, ಲೀ ಮೆರಿಡಿಯನ್, ಏಟ್ರಿಯಾ... ನಗರದ ಈ ಪಂಚತಾರಾ ಹೊಟೇಲ್‌ಗಳಲ್ಲಿ ಕಳ್ಳತನ ವ್ಯಾಪಕವಾಗುತ್ತಿದೆ.
ಗುರುವಾರ ಲೀ ಮೆರಿಡಿಯನ್‌ನಲ್ಲಿ 3 ಲಕ್ಷ ರುಪಾಯಿ ನಗದು ಕಳುವಾಗಿದ್ದರೆ, ಶನಿವಾರ ಏಟ್ರಿಯಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಕೆಮೆರಾ ಮೊದಲಾದ 45 ಸಾವಿರ ರುಪಾಯಿ ಬೆಲೆಯ ವಸ್ತುಗಳು ಕಳುವಾಗಿವೆ. ಇತ್ತೀಚೆಗೆ ಸಾಕಷ್ಟು ಚುರುಕಾಗಿರುವ ನಗರದ ಪೊಲೀಸರಿಗೆ ಇದೊಂದು ಸವಾಲಾಗಿದೆ.
ನಗರದ ಬಿಎಂಟಿಸಿ ಬಸ್ಸುಗಳಿಗೆ ಇದ್ದಕ್ಕಿದ್ದಂತೆ ಪೊಲೀಸರು ನುಗ್ಗುತ್ತಾರೆ. ಹೆಂಗಸರಿಗಾಗಿ ಮೀಸಲಿರುವ ಸೀಟಲ್ಲಿ ಕುಳಿತಿದ್ದಿರೋ ಕೆಟ್ಟಿರಿ. ಜುಲ್ಮಾನೆ ಕಟ್ಟಬೇಕು. ಹಣ ಇಲ್ಲದಿದ್ದರೆ, ಪೊಲೀಸರ ಅತಿಥಿಯಾಗಬೇಕು. ಕಳೆದೊಂದು ವಾರದಲ್ಲಿ ಇಂಥಾ 440 ಗಂಡಸರನ್ನು ಪೊಲೀಸರು ಪತ್ತೆ ಮಾಡಿ, ದೂರು ದಾಖಲಿಸಿಕೊಂಡಿದ್ದಾರೆ.
ಬಸ್ಸುಗಳಲ್ಲಿ ಹೆಂಗಸರ್ಯಾರೂ ಇಲ್ಲದಿರುವಾಗ ಅವರಿಗೆ ಮೀಸಲಿರುವ ಸೀಟುಗಳಲ್ಲಿ ಕುಳಿತುಕೊಳ್ಳಬಹುದೆ ? ಕೆಲವು ಪೊಲೀಸರು ಇದಕ್ಕೂ ಅವಕಾಶ ಕೊಡುತ್ತಿಲ್ಲ. ಪ್ರಕರಣ ದಾಖಲು ಮಾಡಿಕೊಳ್ಳುವುದು ಅವರ ಉದ್ದಿಶ್ಯ ಅಲ್ಲ, ಕಾಸು ಮಾಡಿಕೊಳ್ಳುವುದೇ ಇದರ ಹಿಂದಿನ ಉದ್ದೇಶ ಎಂಬುದು ನಾಗರಿಕರ ದೂರು.
ಕಳೆದೊಂದು ವಾರದಲ್ಲಿ ಕ್ರೆೃಂ ಸಿಟಿಯಲ್ಲಿ ಪೊಲೀಸರು ಬಯಲು ಮಾಡಿರುವ ಪ್ರಕರಣಗಳ ಪಟ್ಟಿ ಇಂತಿದೆ...
- ಬೀದಿ ಕಾಮಣ್ಣರು- 206
- ಪರವಾನಿಗೆ ಉಲ್ಲಂಘಿಸಿ ಮದ್ಯ ಮಾರಾಟ ಮಾಡಿರುವ ಅಂಗಡಿಗಳು- 19
- ಭದ್ರತಾ ಪ್ರಕರಣಗಳು- 149
- ಈ ಹಿಂದೆ ಸಜೆಗೆ ಗುರಿಯಾಗಿ, ಜೈಲಿನಿಂದ ತಪ್ಪಿಸಿಕೊಂಡಿದ್ದ 49 ಆರೋಪಿಗಳ ಪತ್ತೆ
- ಜೂಜಾಟ ಪ್ರಕರಣಗಳು- 391
- ವೇಶ್ಯಾವಾಟಿಕೆ - 6
- ಕಲಬೆರಕೆ ವಗೈರೆ- 8
- (ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications