ಬೆಂಗಳೂರಿನಲ್ಲಿ ಇಂಟರ್ನೆಟ್ ಮೂಲಕ ವಿದ್ಯುತ್ ಬಿಲ್ ಪಾವತಿ
ಬೆಂಗಳೂರು : ಬೆಳಗಿನಿಂದ ಸಂಜೆವರೆಗೆ ದುಡಿದು ಬಂದು ಮನೆ ಬಾಗಿಲು ತೆರೆವಾಗಲೇ ಕರೆಂಟ್ ಬಿಲ್ ಕಣ್ಣಿಗೆ ಬೀಳುತ್ತದೆ. ಅವಧಿ ಮೀರುವ ಮುನ್ನ ಬಿಲ್ ಕಟ್ಟಲು ಇನ್ನು ಮೇಲೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಐಸಿಐಸಿಐ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಸೋ, ಇನ್ನು ಮುಂದೆ ಬೆಂಗಳೂರಿನಲ್ಲಿ ಇಂಟರ್ನೆಟ್ ಮೂಲಕ ಕರೆಂಟ್ ಬಿಲ್‌ಕಟ್ಟಬಹುದು.
ಐಸಿಐಸಿಐ ಬ್ಯಾಂಕ್‌ನ ಬಳಕೆದಾರರಿಗೆ ಈ ಸೇವೆ ಉಚಿತ. ಬೆಂಗಳೂರಿನಲ್ಲಿ ಸುಮಾರು ಒಂದುವರೆ ಲಕ್ಷ ಮಂದಿ ಐಸಿಐಸಿಐ ಬ್ಯಾಂಕ್ ಬಳಕೆದಾರರಿದ್ದು ಶೇ 60ರಷ್ಟು ಮಂದಿ ಇಂಟರ್‌ನೆಟ್ ಬಳಕೆದಾರರು.
ಬಿಲ್ ಚುಕ್ತಮಾಡುವ ಕೆಲಸವನ್ನಷ್ಟೇ ಬ್ಯಾಂಕ್ ಮಾಡುತ್ತದೆ. ಬಿಲ್‌ನಲ್ಲಿ ಯಾವುದೇ ವೆತ್ಯಾಸಗಳಿದ್ದರೆ ಅದನ್ನು ಕೆಪಿಟಿಸಿಎಲ್‌ನ ಪ್ರಾದೇಶಿಕ ಕಚೇರಿಯಲ್ಲಿ ಸರಿಪಡಿಸಿಕೊಳ್ಳಬಹುದು. ಇಂಟರ್‌ನೆಟ್ ಮೂಲಕ ಬಿಲ್ ಕಟ್ಟುವ ಈ ವ್ಯವಸ್ಥೆಯಿಂದಾಗಿ ವಿದ್ಯುತ್ ಬಳಕೆದಾರರಿಗೆ ಕೆಪಿಟಿಸಿಎಲ್‌ನ ಉದ್ಯೋಗಿಗಳಿಂದ ತೊಂದರೆಯಾಗುವುದು ತಪ್ಪುತ್ತದೆ ಎಂದು ಕೆಪಿಟಿಸಿಎಲ್‌ನ ಅಧ್ಯಕ್ಷ ವಿ.ಪಿ. ಬಳಿಗಾರ್ ಹೇಳುತ್ತಾರೆ. ಈ ವ್ಯವಸ್ಥೆ ಜುಲೈ ತಿಂಗಳಲ್ಲೇ ಜಾರಿಯಾಗಲಿದೆ.
ಈ ರೀತಿ ಈ- ಕಾಮರ್ಸ್ ಸೇವೆಗಳನ್ನು ನೀರು ಸರಬರಾಜು ವಿಭಾಗ, ಮಹಾನಗರ ಪಾಲಿಕೆ, ಟೆಲಿಕಾಂ, ಮತ್ತಿತರ ಕ್ಷೇತ್ರಗಳಿಗೂ ವಿಸ್ತರಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಐಸಿಐಸಿಐನ ಕಾರ್ಯ ನಿರ್ವಾಹಕ ಅಧಿಕಾರಿ ಕೆ. ವಿ. ಕಾಮತ್ ಹೇಳುತ್ತಾರೆ. ಪ್ರಾದೇಶಿಕ ಕಚೇರಿಗಳಲ್ಲಿಯೂ ಕಂಪ್ಯೂಟರೀಕರಣ ಕೆಲಸ ಮುಗಿದ ತಕ್ಷಣ ಈ ವ್ಯವಸ್ಥೆಯನ್ನು ಮೈಸೂರು, ಬೆಳಗಾವಿ, ಮಂಗಳೂರು ಮತ್ತು ಹುಬ್ಬಳ್ಳಿಗೂ ವಿಸ್ತರಿಸಲಾಗುವುದು. ಕೆಪಿಟಿಸಿಎಲ್‌ಗೆ 500 ಕೋಟಿ ರೂಪಾಯಿಗಳಷ್ಟು ಸಾಲ ನೀಡಲು ಐಸಿಐಸಿಐ ಬ್ಯಾಂಕ್ ಮುಂದಾಗಿರುವ ಬಗ್ಗೆಯೂ ವಿ.ಪಿ. ಬಳಿಗಾರ್ ಹೇಳಿದರು.
ನೀವು ಇಂಟರ್‌ನೆಟ್‌ನಲ್ಲಿ ಬಿಲ್ ಕಟ್ಟುತ್ತೀರಾ ?
ಈ ವ್ಯವಸ್ಥೆಯನ್ನು ನೀವು ಬಳಸುತ್ತಿರುವುದಾಗಿ ಕೆಪಿಟಿಸಿಎಲ್‌ಗೆ ಒಂದು ಪತ್ರ ಬರೆಯಿರಿ.
ವಿದ್ಯುತ್ ನಿಗಮ ಈ ಬಗ್ಗೆ ಬ್ಯಾಂಕ್‌ಗೆ ಮಾಹಿತಿ ನೀಡುತ್ತದೆ. ನಂತರ ನಿಮ್ಮ ಮನೆ ಕರೆಂಟ್ ಬಿಲ್ ಕಂಪ್ಯೂಟರ್ ಮೂಲಕ ಐಸಿಐಸಿಐ ಬ್ಯಾಂಕ್‌ಗೆ ವರ್ಗಾವಣೆಯಾಗುತ್ತದೆ.
ಐಸಿಐಸಿಐ ಬ್ಯಾಂಕ್ ಮೂಲಕ ಬಿಲ್ ಕಟ್ಟ ಬಯಸುವ ಪ್ರತಿಯಾಬ್ಬ ಇಂಟರ್ ನೆಟ್ ಬಳಕೆದಾರನಿಗೆ ಒಂದು ಪಾಸ್ ವರ್ಡ್ ನೀಡಲಾಗುತ್ತದೆ. ಒಂದು ವರ್ಷದವರೆಗಿನ ಬಿಲ್‌ನ್ನು ಕಂಪ್ಯೂಟರ್ ಮೂಲಕ ಪರಿಶೀಲಿಸುವ ಅವಕಾಶ ಇರುತ್ತದೆ. ಬಿಲ್ ಪಾವತಿಯಾಗಿರುವ ಬಗ್ಗೆಯೂ ಕೆಪಿಟಿಸಿಎಲ್, ಐಸಿಐಸಿಐ ಮೂಲಕ ನಿಮಗೆ ಈ ಮೇಯ್ಲ್ ಕಳುಹಿಸುತ್ತದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications