ಗಣಿಗಾರಿಕೆ ವಿರೋಧಿ ಚಳವಳಿಗೆ ಡಾ.ಯು.ಆರ್.ಅನಂತಮೂರ್ತಿ
ಶಿವಮೊಗ್ಗ : ಕುದುರೆಮುಖ ಕಬ್ಬಿಣ ಅದಿರುಕಾರ್ಖಾನೆಗೆ ಗಣಿಗಾರಿಕೆ ಮುಂದುವರೆಸಲು ಸರಕಾರ ನೀಡಿರುವ ಅನುಮತಿಯನ್ನು ವಿರೋಧಿಸುವ ಹೋರಾಟದ ನೇತೃತ್ವವನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯುಆರ್. ಅನಂತಮೂರ್ತಿ ವಹಿಸುವುದರೊಂದಿಗೆ ಹೋರಾಟ ತಿರುವು ಪಡೆದುಕೊಂಡಿದೆ.
ಮ್ಯಾಗ್ಸಸೆ ಪ್ರಶಸ್ತಿ ವಿಜೇತ ರಂಗಕರ್ಮಿ ಕೆ.ವಿ. ಸುಬ್ಬಣ್ಣ ಹಾಗೂ ಹಿರಿಯ ಸಾಹಿತಿ ಪೂರ್ಣ ಚಂದ್ರ ತೇಜಸ್ವಿ ಜೊತೆಗೆ ಯು.ಆರ್. ಅನಂತಮೂರ್ತಿ ಸೇರ್ಪಡೆಯಿಂದ ಪರಿಸರವಾದಿಗಳಲ್ಲಿ ಮತ್ತೆ ಭರವಸೆ ಮೂಡಿದೆ. ಪರಿಸರ ರಕ್ಷಣಾ ಹೋರಾಟದಲ್ಲಿ ಕಳೆದ ವಾರದಿಂದ ತಮ್ಮನ್ನು ತೊಡಗಿಸಿಕೊಂಡಿರುವ ಅನಂತಮೂರ್ತಿ ಸದ್ಯಕ್ಕೆ ತೀರ್ಥಹಳ್ಳಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದಾರೆ.
ರಾಜಕೀಯದ ನೆರವಿಲ್ಲದೆ, ಎಡ ಮತ್ತು ಬಲ ಪಂಥೀಯ ಧೋರಣೆಗಳಿಂದ ದೂರವಾಗಿ ಈ ಪರಿಸರ ಹೋರಾಟವನ್ನು ಮುಂದುವರೆಸಲಾಗುವುದು ಎಂದು ಅನಂತಮೂರ್ತಿ ಹೇಳಿದ್ದಾರೆ. ಆದರೆ ಎಲ್ಲ ಸಂಘಟನೆಗಳು ಮತ್ತು ಸಮುದಾಯಗಳ ಸಂಪರ್ಕವನ್ನು ಅವರು ಹೊಂದಿದ್ದು, ಸಾರ್ವಜನಿಕ ಬೆಂಬಲ ಪಡೆದುಕೊಳ್ಳಲು ತೀರ್ಥ ಹಳ್ಳಿಯಲ್ಲಿ ಜುಲೈ 9ರಂದು ಸಾರ್ವಜನಿಕ ಸಭೆಯನ್ನು ಕರೆದಿದ್ದಾರೆ.
ಈಗಾಗಲೇ ಕುದುರೆಮುಖ ಗಣಿಗಾರಿಕಾ ಕಂಪೆನಿಗೆ ಎಚ್ಚರಿಕೆ ನೀಡಿದ್ದು, ಸರಕಾರ ತನ್ನ ನಿರ್ಧಾರವನ್ನು ವಾಪಾಸ್ ತೆಗೆದುಕೊಳ್ಳುವವರೆಗೆ ಹೋರಾಟ ಮುಂದುವರೆಯಲಿದೆ. ಈ ತಿಂಗಳ 20 ನೇ ತಾರೀಕಿಗೆ ಕುದುರೆಮುಖ ಕಂಪೆನಿಯ ಗಣಿಗಾರಿಕಾ ಅವಧಿ ಮುಗಿಯಲಿದೆ.
(ಇನ್ಫೋ ವಾರ್ತೆ)
What do you think about this article ?
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications