Get Updates
Get notified of breaking news, exclusive insights, and must-see stories!

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ 31 ಹೊಸ ಸಿಂಹಗಳು

ಬೆಂಗಳೂರು : ನಗರದ ಹೊರ ವಲಯದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೀಗ ಅಪರೂಪದ ಸದಸ್ಯರನ್ನು ಮನೆ ತುಂಬಿಸಿಕೊಂಡ ಸಂತಸ. ಏಳು ದಿನಗಳ ಕಾಲ ಪ್ರಯಾಣ ಬೆಳೆಸಿದ 31 ಸಿಂಹಗಳು ಹಾಗೂ 1 ಹಿಮಾಲಯನ್‌ ಕರಡಿ ಶನಿವಾರವಷ್ಟೇ ಬನ್ನೇರುಘಟ್ಟ ಉದ್ಯಾನಕ್ಕೆ ದೆಹಲಿಯಿಂದ ಬಂದಿಳಿದಿವೆ.

ಉತ್ತರಭಾರತದ ಸರ್ಕಸ್‌ ಕಂಪನಿಗಳಿಂದ ಮುಕ್ತಗೊಳಿಸಲಾದ ಈ ಸಿಂಹಗಳನ್ನು ವಿಶೇಷ ಪಂಜರಗಳಲ್ಲಿ ಇಡಲಾಗಿದ್ದು , 2300 ಕಿಲೋ ಮೀಟರ್‌ಗಳ ಪ್ರಯಾಣದ ಆಯಾಸದ ಹೊರತು ಎಲ್ಲ ಪ್ರಾಣಿಗಳೂ ಸಂಪೂರ್ಣ ಆರೋಗ್ಯವಾಗಿವೆ. 7 ಟ್ರಕ್‌ಗಳಲ್ಲಿ ಆಗಮಿಸಿದ 15 ಗಂಡು, 13 ಹೆಣ್ಣು ಹಾಗೂ ನಾಲ್ಕು ಮರಿಸಿಂಹಗಳ ಆಹಾರ ಮತ್ತು ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ.

ಸರ್ಕಸ್‌ನಲ್ಲಿ ಸಿಂಹ, ಕರಡಿ, ಕೋತಿ ಹಾಗೂ ಚಿರತೆಗಳ ಪ್ರದರ್ಶನದ ವಿರುದ್ಧ ಸುಪ್ರಿಂಕೋರ್ಟ್‌ ಹೇರಿರುವ ನಿಷೇಧದ ಹಿನ್ನೆಲೆಯಲ್ಲಿ ಈ ಕರಡಿ ಹಾಗೂ ಸಿಂಹಗಳನ್ನು ವಿಮುಕ್ತಗೊಳಿಸಲಾಗಿದೆ. ಪ್ರಯಾಣದ ಆಯಾಸ ನೀಗಿದ ನಂತರ ಸಿಂಹಗಳನ್ನು ಅರಣ್ಯ ಪ್ರದೇಶಕ್ಕೆ ಮುಕ್ತವಾಗಿ ಸಂಚರಿಸಲು ಬಿಡಲಾಗುವುದು ಎಂದು ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಬನ್ನೇರುಘಟ್ಟಕ್ಕೆ ಬಂದಿರುವ ಸಿಂಹಗಳು ಏಷ್ಯಾ ಅಥವಾ ಆಫ್ರಿಕಾ ಸಿಂಹಗಳ ಮೈಕಟ್ಟನ್ನು ಹೋಲದೆ ಹೈಬ್ರಿಡ್‌ ಮಾದರಿಯಲ್ಲಿ ಇರುವುದರಿಂದ ಅವುಗಳ ಸಂತಾನೋತ್ಪತ್ತಿಗೆ ಅವಕಾಶ ನೀಡುವುದಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+