Get Updates
Get notified of breaking news, exclusive insights, and must-see stories!

ತೆಂಗಿನಮರದಿಂದ ನೀರಾ ಇಳಿಸಲು ಸಚಿವ ಸಂಪುಟದ ಅಸಮ್ಮತಿ

ಬೆಂಗಳೂರು : ತೆಂಗಿನ ಮರದಿಂದ ನೀರಾ ಇಳಿಸಲು ರೈತರಿಗೆ ಅನುಮತಿ ನೀಡುವ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಕೈ ಬಿಟ್ಟಿದೆ.

ನುಸಿಪೀಡೆಯಿಂದ ತೀವ್ರ ಸಂಕಷ್ಟದಲ್ಲಿರುವ ರೈತನಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ನೀರಾ ಇಳಿಸಲು ಅನುಮತಿ ಕೊಡಬೇಕು ಎನ್ನುವ ಮಾತುಗಳು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕೇಳಿಬಂದಿದ್ದವು ಹಾಗೂ ಈ ವಿಷಯವನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಭರವಸೆ ನೀಡಿದ್ದರು. ಆದರೆ, ಗುರುವಾರ ನೀರಾ ಇಳಿಕೆಗೆ ಅನುಮತಿ ನೀಡದಿರಲು ಸಂಪುಟ ತೀರ್ಮಾನಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನೀರಾ ಇಳಿಸುವ ಪ್ರಸ್ತಾಪವನ್ನು ಕೈಬಿಟ್ಟು ನುಸಿಪೀಡೆ ವಿರುದ್ಧ ಔಷಧ ಸಿಂಪರಣೆ ಕೆಲಸ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ. ರಾಜ್ಯದಲ್ಲಿ ಸುಮಾರು 80 ಲಕ್ಷ ತೆಂಗಿನಮರಗಳಿದ್ದು, ಎಲ್ಲಾ ಮರಗಳಿಂದ ಏಕಕಾಲದಲ್ಲಿ ನೀರಾ ಇಳಿಸುವ ಖಾತರಿಯಿಲ್ಲ . ಇದರಿಂದಾಗಿ ನುಸಿಪೀಡೆ ನಿರ್ಮೂಲನೆ ಸಾಧ್ಯವಿಲ್ಲ . ಅಲ್ಲದೆ ಬಹುಕಾಲದವರೆಗೆ ನೀರಾ ಸಂಗ್ರಹಣೆ ಸಾಧ್ಯವಿಲ್ಲ ಎನ್ನುವ ವೈಜ್ಞಾನಿಕ ಕಾರಣಗಳ ಹಿನ್ನೆಲೆಯಲ್ಲಿ ನೀರಾ ಇಳಿಸದಿರುವ ತೀರ್ಮಾನಕ್ಕೆ ಸರ್ಕಾರ ಬಂದಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+