Get Updates
Get notified of breaking news, exclusive insights, and must-see stories!

ಮೋಡಗಳದೇ ಕಾರುಬಾರು, ಚಂದ್ರಗ್ರಹಣ ಕಾಣಿಸಲಿಲ್ಲ

ಬೆಂಗಳೂರು : ಮೋಡಗಳ ಕಾರುಬಾರಿನಿಂದಾಗಿ ಗುರುವಾರ ರಾತ್ರಿಯ ಚಂದ್ರಗ್ರಹಣ ವೀಕ್ಷಿಸುವುದು ರಾಜ್ಯದ ಹಲವು ಕಡೆಗಳಲ್ಲಿ ಸಾಧ್ಯವಾಗಲಿಲ್ಲ.

ಶತಮಾನದ ಮೊತ್ತ ಮೊದಲ ಚಂದ್ರಗ್ರಹಣ ಇದಾಗಿದ್ದು, ಬೆಂಗಳೂರಿನಲ್ಲಿ ಅಪರೂಪದ ಗ್ರಹಣ ವೀಕ್ಷಣೆಗೆಂದು ಕಾದಿದ್ದ ಹಲವರು ನಿರಾಶರಾದರು. ಪಟ್ಟು ಬಿಡದೆ ಮೋಡಗಳೆಡೆಯಲ್ಲಿ ಆಗೊಮ್ಮೆ ಈಗೊಮ್ಮೆ ಅರೆಬರೆ ಗೋಚರಿಸುವ ಚಂದ್ರನನ್ನು ಮನೆಯ ತಾರಸಿಯ ಮೇಲೆ ತಮ್ಮ ಬೈನಾಕ್ಯಲರ್‌ನಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದವರು ಹಲವರು.

ಸಂಜೆ 7.05 ಕ್ಕೆ ಆರಂಭವಾದ ಗ್ರಹಣ ರಾತ್ರಿ 9. 44ಕ್ಕೆ ಮುಕ್ತಾಯವಾಯಿತು . ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಗ್ರಹಣ ಗೋಚರಿಸಿದರೂ ಮಳೆಗಾಲವಾದ್ದರಿಂದ ಗ್ರಹಣ ನೋಡುವುದು ತೀರಾ ಕಷ್ಟವಾಯಿತು ಎಂದು ಜಯನಗರದ ಡಾ. ಲೋಕನಾಥ್‌ ಹೇಳುತ್ತಾರೆ. ಚಂದ್ರಗ್ರಹಣದಿಂದಾಗಿ ಬರಬಹುದಾದ ದೋಷನಿವಾರಣೆಗೆ ಬೆಂಗಳೂರಿನ ಹೆಚ್ಚಿನ ದೇವಾಲಯಗಳಲ್ಲಿ ಗ್ರಹಣಾನಂತರ ವಿಶೇಷ ಪೂಜೆ ನಡೆಸಲಾಯಿತು.

ಮೈಸೂರು ಹಾಗೂ ಮಂಗಳೂರಿನಲ್ಲಿ ಗ್ರಹಣ ಗೋಚರಿಸಿದ ಬಗ್ಗೆ ವರದಿಯಾಗಿವೆ. ದೆಹಲಿಯಲ್ಲಿಯೂ ಮೋಡಗಳ ದೆಸೆಯಿಂದ ಚಂದ್ರಗ್ರಹಣವನ್ನು ಸ್ಪಷ್ಟವಾಗಿ ನೋಡುವುದು ಸಾಧ್ಯವಾಗಿಲ್ಲ. ಮುಂದಿನ ಚಂದ್ರಗ್ರಹಣ 2003ರ ನವೆಂಬರ್‌ನಲ್ಲಿ ಹಾಗೂ 2004ರ ಮೇ ತಿಂಗಳಿನಲ್ಲಿ ಗೋಚರಿಸಲಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+