ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

usa.net

By Staff
|
Google Oneindia Kannada News

ಬೆಂಗಳೂರು : ಯುಎಸ್‌ಎಡಾಟ್‌ ನೆಟ್‌ನಲ್ಲಿ ನಿಮ್ಮ ಅಕೌಂಟ್‌ ಇದೆಯಾ ? ಹಾಗಾದರೆ ಈ ತಿಂಗಳ ಕೊನೆಯವರೆಗೆ ಮಾತ್ರ ನೀವು ಅದನ್ನು ಉಚಿತವಾಗಿ ಬಳಸಬಹುದು. ನಂತರ ನಿಮ್ಮ ಅಕೌಂಟ್‌ ಉಳಿಸಿಕೊಳ್ಳಬೇಕಿದ್ದರೆ ಹಣ ಕಟ್ಟಬೇಕು.

ಉಚಿತ ಈ -ಮೇಯ್ಲ್‌ ಸರ್ವಿಸ್‌ಗೆ ನಮಸ್ಕಾರ ಹೇಳಲು ಯುಎಸ್‌ಎ ಡಾಟ್‌ ನೆಟ್‌ ನಿರ್ಧರಿಸಿದೆ. ಬದಲಾಗಿರುವ ಈ- ಉದ್ಯಮ ವರಸೆಗಳಲ್ಲಿ ರೆವೆನ್ಯೂಗಳಿಕೆಗೆ ಹೊಸ ದಾರಿಗಳನ್ನು ಕಂಡುಕೊಳ್ಳುವುದು ಅನಿವಾರ್ಯ ಎಂದು ಯುಎಸ್‌ಎ ಡಾಟ್‌ನೆಟ್‌ ಹೇಳಿದೆ.

ಈಗಿರುವ ನಿಮ್ಮ ಈ - ಮೇಯ್ಲ್‌ ಅಕೌಂಟನ್ನು ಉಳಿಸಿಕೊಳ್ಳಬೇಕಿದ್ದರೆ ವರ್ಷಕ್ಕೆ 29.9 ಡಾಲರ್‌ ಅಂದರೆ ಸುಮಾರು 1,500 ರೂಪಾಯಿ ಹಣ ಕಟ್ಟಬೇಕು.

29 ಡಾಲರ್‌ ಹಣ ಅಮೆರಿಕಾದಲ್ಲಿ ಅಂತಹ ದೊಡ್ಡ ಮೊತ್ತವೆನಿಸಿಕೊಳ್ಳಲಿಕ್ಕಿಲ್ಲ. ಆದರೆ ಸಿಲಿಕಾನ್‌ ವ್ಯಾಲಿ ಬೆಂಗಳೂರಿಗರ ಪಾಡೇನು ? ಹಣ ಕಟ್ಟಿ ಈ- ಮೇಯ್ಲ್‌ ಅಕೌಂಟ್‌ ಉಳಿಸಿಕೊಳ್ಳುವಂತಹ ವಿಶೇಷ ಗುಣಮಟ್ಟ ವೇನೂ ಈ ಡಾಟ್‌ಕಾಮ್‌ನಲ್ಲಿಲ್ಲ . ವಿಎಸ್‌ಎನ್‌ಎಲ್‌ನಲ್ಲಿಯೂ ನನ್ನ ಮೇಯ್ಲ್‌ ಐಡಿ ಇದೆ. ಈ ಯುಎಸ್‌ಎ ಡಾಟ್‌ನೆಟ್‌ ಹೋಗಲಿ ಬಿಡಿ ಅಂತ ವಿಪ್ರೋ ಉದ್ಯೋಗಿಯಾಬ್ಬರು ಹೇಳುತ್ತಾರೆ.

ಜುಲೈ 31ರಂದು ಯುಎಸ್‌ಎ ಡಾಟ್‌ನೆಟ್‌ನಲ್ಲಿರುವ ಈ- ಮೇಯ್ಲ್‌ ಐಡಿಗಳನ್ನೆಲ್ಲಾ ಪರಿಷ್ಕರಿಸಲಾಗುತ್ತದೆ. ಹಣಕಟ್ಟಲಾಗದವರಿಗೆ, ಈಗಷ್ಟೇ ಈ ಮೇಯ್ಲ್‌ ಮೂಲಕ ಕಂಪ್ಯೂಟರನ್ನು ಪರಿಚಯಿಸಿಕೊಳ್ಳುತ್ತಿರುವ ಗ್ರಾಮೀಣ ಪ್ರದೇಶದವರಿಗೆ ಯುಎಸ್‌ಎ ಡಾಟ್‌ ನೆಟ್‌ ನಿಲುಕುವುದಿಲ್ಲ. ಎಲ್ಲಿಯವರೆಗೆ ಯಾಹೂ, ವಿಎಸ್‌ಎನ್‌ಎಲ್‌ನಂತಹ ಇತರ ಡಾಟ್‌ಕಾಂಗಳು ಉಚಿತ ಈ- ಮೇಯ್ಲ್‌ ಸೇವೆ ಒದಗಿಸುತ್ತವೆಯೋ ಅಲ್ಲಿವರೆಗೆ ಭಾರತೀಯ ಈ- ಮೇಯ್ಲ್‌ ಬಳಕೆದಾರರು ಯುಎಸ್‌ಎ ಡಾಟ್‌ ನೆಟ್‌ನ ಕೈ ಬಿಡುವುದರಲ್ಲಿ ಸಂಶಯವಿಲ್ಲ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X