ಮಾಲೂರು : ಸಾಲ ತೀರಿಸಲಾರದ ರೈತ ಕುಟುಂಬ ಸರ್ವನಾಶ
ಮಾಲೂರು : ಬೆಳೆಗೆ ತಕ್ಕ ಬೆಲೆ ದಕ್ಕದೆ, ಸಾಲದಿಂದ ಬೆಂದ ರೈತನೊಬ್ಬ ಪತ್ನಿ ಹಾಗೂ 6 ತಿಂಗಳ ಹಸುಳೆ ಸೇರಿದಂತೆ ಮೂವರು ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಲ್ಲೂಕಿನ ದೊಡ್ಡಶಿವಾರದ ಕೃಷ್ಣಾರೆಡ್ಡಿ (45) ಆಲೂಗಡ್ಡೆ ಬೆಳೆದಿದ್ದ. ಕೈಸಾಲ, ಗ್ರಾಮೀಣ ಬ್ಯಾಂಕಿನ ಸಾಲ, ಅವುಗಳಿಗೆ ಬಡ್ಡಿ ಸೇರಿದಂತೆ ಸುಮಾರು 2.5 ಲಕ್ಷ ರುಪಾಯಿ ತೀರಿಸಬೇಕಿತ್ತು. ಕಳೆದ ಎರಡು ವರ್ಷಗಳಿಂದ ಆಲೂಗಡ್ಡೆಗೆ ಬೆಂಬಲ ಬೆಲೆ ದೊರೆಯದ ಕಾರಣ ಸಾಲ ತೀರಿಸಲಾಗಲಿಲ್ಲ. ಬುಧವಾರ ಮುಂಜಾನೆ ಪತ್ನಿ ರಾಮಕ್ಕ (30), ಮಕ್ಕಳಾದ ಅಂಬಿಕಾ (8), ಶುಭಾ (6) ಹಾಗೂ 6 ತಿಂಗಳ ಮಗು ಶ್ರೀನಾಥ್‌ನನ್ನು ತನ್ನ ಚಿಕ್ಕಪ್ಪನ ಜಮೀನಿಗೆ ಕರೆದೊಯ್ದು, ಮಾವಿನ ಮರವೊಂದರ ಕೆಳಗೆ ಅವರೆಲ್ಲರ ಕೊರಳಿಗೆ ಹಗ್ಗ ಬಿಗಿದು ಕೊಂದಿದ್ದಾನೆ.
ನಂತರ ತಾನೂ ಮರಕ್ಕೆ ಹಗ್ಗ ಬಿಗಿದು, ನೇಣು ಹಾಕಿಕೊಂಡಿದ್ದಾನೆ. ಕೊಂಚ ಹೊತ್ತು ಉಸಿರುಗಟ್ಟಿದ ನಂತರ ಹಗ್ಗ ತುಂಡಾಗಿ, ಕೃಷ್ಣಾರೆಡ್ಡಿ ಕೆಳಗೆ ಬಿದ್ದು, ಒದ್ದಾಡಿದ್ದನ್ನು ಗ್ರಾಮದ ಬಾಬು ಎಂಬುವರು ನೋಡಿದ್ದಾರೆ. ಆ ಜಾಗೆಗೆ ಗ್ರಾಮಸ್ಥರನ್ನು ಕರೆ ತರುವ ಹೊತ್ತಿಗೆ ಕೃಷ್ಣಾರೆಡ್ಡಿ ಕೂಡ ಮೃತಪಟ್ಟಿದ್ದ.
ಮೊದಲನೇ ಹೆಂಡತಿ ಮೃತಪಟ್ಟ ನಂತರ ಕೃಷ್ಣಾರೆಡ್ಡಿ ರಾಮಕ್ಕಳನ್ನು ಮದುವೆಯಾಗಿದ್ದ. ಕೃಷ್ಣಾರೆಡ್ಡಿ ಕೊಂದ ಅಂಬಿಕಾ ಹಾಗೂ ಶುಭಾ ಮೊದಲ ಹೆಂಡತಿಯ ಮಕ್ಕಳು. ಯಾರ್ಯಾರಿಗೆ ಎಷ್ಟೆಷ್ಟು ಹಣ ಕೊಡಬೇಕು ಎಂಬುದನ್ನು ಕೃಷ್ಣಾರೆಡ್ಡಿ ಚೀಟಿಯಾಂದರಲ್ಲಿ ಬರೆದಿದ್ದು, ಕುಟುಂಬದ ಶವಗಳು ಪತ್ತೆಯಾದ ಜಾಗದಲ್ಲಿ ಚೀಟಿಯೂ ಸಿಕ್ಕಿದೆ.
ಜಿಲ್ಲಾ ಉಸ್ತುವಾರಿ ಸಚಿವ ವಿ.ಮುನಿಯಪ್ಪ, ಲೋಕಸಭಾ ಸದಸ್ಯ ಕೆ.ಎಚ್.ಮುನಿಯಪ್ಪ, ಪೊಲೀಸ್ ಅದಿಕಾರಿಗಳು ಹಾಗೂ ಇತರೆ ಸ್ಥಳೀಯ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications