ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಮಳೆಗಾಲ ! ಬೆಂಗಳೂರಿನಲ್ಲಿ ಹಸಿರು ಉಸಿರಿನ ಬೊಬ್ಬೆ

By Staff
|
Google Oneindia Kannada News

ಬೆಂಗಳೂರು - ಜೂನ್‌ ಜುಲೈ ಬಂದಾಗಲೆಲ್ಲಾ ಹಸಿರು, ಉಸಿರು ಪರಿಸರಗಳ ನೆನಪಾಗುವುದು ಹೊಸತಲ್ಲ. ಒಂದು ತಿಂಗಳ ಕಾಲ ನಗರದಲ್ಲಿ ಸುಮಾರು 60 ಸಾವಿರ ಸಸಿ ನೆಡುವ ಹಸಿರು ಮಾಸ ಕಾರ್ಯಕ್ರಮಕ್ಕೆ ಬುಧವಾರ ಮೇಯರ್‌ ಪ್ರೇಮಾ ಕಾರಿಯಪ್ಪ ಅವರು ಚಾಲನೆ ನೀಡಿದರು.

ಖಾಸಗಿ ಸಂಸ್ಥೆಗಳು, ಮಹಾನಗರ ಪಾಲಿಕೆ ಮತ್ತು ಶಾಲೆಗಳು ಒಟ್ಟಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಿವೆ. ತಿಂಗಳಿಡೀ ನಡೆಯುವ ಈ ಕಾರ್ಯಕ್ರಮ ಪಾಲಿಕೆ ಇತಿಹಾಸದಲ್ಲಿ ಪ್ರಥಮ. ರಸ್ತೆ ಬದಿ, ರಸ್ತೆ ವಿಭಜಕಗಳು, ಶಾಲಾ ಆವರಣ, ಪಾದಚಾರಿ ರಸ್ತೆಗಳ ಬದಿಯಲ್ಲಿ ಸಂಪಿಗೆ, ಹೊಂಗೆ, ಬೇವು ಮುಂತಾದ 12 ಜಾತಿಯ ಗಿಡಗಳನ್ನು ನೆಡಲಾಗುವುದು.

ಹಸಿರು ಉಳಿಸುವ ಮಾತುಗಳು ಬೆಂಗಳೂರಿನಲ್ಲಿ ಆಗಾಗ ಕೇಳಿಬರುತ್ತಿವೆ. ಜೊತೆಗೆ ಪ್ಲಾಸ್ಟಿಕ್‌ ಮಾರಿಯನ್ನು ಓಡಿಸುವ ಉತ್ಸಾಹವೂ ಕಾಣಿಸುತ್ತಿದೆ. ಈಗಾಗಲೇ ಆದಿಚುಂಚನ ಗಿರಿ ಮಠ ರಾಜ್ಯದಲ್ಲಿ 5 ಕೋಟಿ ಗಿಡ ನೆಡುವ ತನ್ನ ಯೋಜನೆಯನ್ನು ಆರಂಭಿಸಿದ್ದರೆ, ಬೆಂಗಳೂರು ಮಹಾ ನಗರ ಪಾಲಿಕೆ ಪ್ಲಾಸ್ಟಿಕ್‌ ನಿಷೇಧಿಸುವ ನಿರ್ಧಾರಗಳನ್ನು ಪರಿಷ್ಕರಿಸುತ್ತಿದೆ.

ಪ್ಲಾಸ್ಟಿಕ್‌ ಲೋಟಗಳಾ... ಬೇಡಿ ..ಪ್ಲೀಸ್‌

ನಗರದ ಖಾಸಗಿ ಕಂಪೆನಿಗಳು ಪ್ಲಾಸ್ಟಿಕ್‌ ನಿಷೇಧ ಘೋಷಣೆಯನ್ನು ಆಗಲೇ ಮೊಳಗಿಸಿಯಾಗಿದೆ. ಲುಕ್‌ ಫಾರ್‌ ಗ್ರೀನ್‌ ಸಂಸ್ಥೆಯು ಪಾಲಿಕೆ ಆರೋಗ್ಯ ಸಮಿತಿಯ ಸಹಯೋಗದೊಂದಿಗೆ ಪ್ಲಾಸ್ಟಿಕ್‌ ನಿರ್ಮೂಲನೆಗೆ ಹೊರಟಿದೆ. ಇನ್ನು ಮುಂದೆ ಕಾಗದದ ಲಕೋಟೆಗಳನ್ನು ಬಳಸುವವರನ್ನು ಪಾಲಿಕೆ ಪ್ರೋತ್ಸಾಹಿಸಲಿದೆ. ಪ್ಲಾಸ್ಟಿಕ್‌ ಲಕೋಟೆಗಳಿಗೆ ಅಂತಹ ಮಾನ್ಯತೆ ಇಲ್ಲ. ಶಾಪಿಂಗ್‌ ಬ್ಯಾಗ್‌ಗಳೆಲ್ಲಾ ಇಕೋ ಫ್ರೆಂಡ್ಲೀ ಆಗಿರಬೇಕು.

ಕಳೆದ ವರ್ಷ ರಾಜ್ಯದ ಹಲವು ಜಿಲ್ಲೆ, ತಾಲ್ಲೂಕುಗಳಲ್ಲಿ ಪ್ಲಾಸ್ಟಿಕ್‌ ನಿಷೇಧಿಸಿ ಆಂದೋಲನಗಳು ನಡೆದಿದ್ದು. ಆಂದೋಲನದ ಆರಂಭಗಳು ಜೋರಾಗಿಯೇ ನಡೆದಿದ್ದರೂ ಪರಿಣಾಮ ಮಾತ್ರ ಸೊನ್ನೆ. ಪ್ಲಾಸ್ಟಿಕ್‌ ಓಡಿಸಿ ಚಳುವಳಿಯನ್ನು ಎಲ್ಲರಿಗಿಂತಲೂ ಮೊದಲೇ ಕೈಗೆತ್ತಿಕೊಂಡಿದ್ದ ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಲಕೋಟೆಗೆ ಸಿಗುವ ಮಾಮೂಲಿ ಸಕಲ ಮರ್ಯಾದೆಗಳಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ.

ಚಿತ್ರದುರ್ಗ, ಶಿವಮೊಗ್ಗ ಕೂಡ ಇದಕ್ಕೆ ಹೊರತಲ್ಲ. ಕೆಲವು ಖಾಸಗಿ ಕಂಪೆನಿ, ಕಚೇರಿ, ಅಂಗಡಿಗಳಲ್ಲಿ ಮಾಲೀಕರು ಅನುಶಾಸನದಿಂದ ಪ್ಲಾಸ್ಟಿಕ್‌ ಬಳಸದೇ ಇರುವ ನಿರ್ಧಾರ ತೆಗೆದುಕೊಂಡಿರುವ ಕಡೆಗಳಲ್ಲಿ ಮಾತ್ರ ಕಟ್ಟು ನಿಟ್ಟಾಗಿ, ಪೇಪರು ಲಕೋಟೆ, ಸ್ಟೀಲ್‌ ಲೋಟಗಳ ಬಳಕೆಯಾಗುತ್ತಿವೆ.

(ಇನ್ಫೋ ವಾರ್ತೆ)

What do you think about this story ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X