ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ವಿವಿ : ಗಲ್ಫ್‌ನಲ್ಲಿ ಭಾರತೀಯ ಸಂಸ್ಕೃತಿಯ ತರಗತಿಗಳು

By Staff
|
Google Oneindia Kannada News

ಬೆಂಗಳೂರು : ಮೈಸೂರು ವಿಶ್ವ ವಿದ್ಯಾಲಯವು ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಕೋರ್ಸುಗಳನ್ನು ಪ್ರಾರಂಭಿಸಲು ನಿರ್ಧರಿಸುವುದರೊಂದಿಗೆ ವಿದೇಶೀ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವತ್ತ ಹೊಸ ಹೆಜ್ಜೆ ಇಡಲಿದೆ.

ಮೈಸೂರು ವಿವಿಯ ಉಪ ಕುಲಪತಿ ಎಸ್‌. ಎನ್‌. ಹೆಗಡೆ ಈ ವಿಷಯವನ್ನು ಬುಧವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ಗಲ್ಫ್‌ ಪ್ರದೇಶಗಳಲ್ಲಿ ವಿವಿಯು ಆಯ್ದ ಕೆಲವು ವಿಷಯಗಳ ಬಗ್ಗೆ ವಿಶೇಷ ಕೋರ್ಸುಗಳನ್ನು ಆರಂಭಿಸಲು ಉದ್ದೇಶಿಸಿದೆ ಎಂದರು.

ಭಾರತೀಯ ವಿಶ್ವ ವಿದ್ಯಾಲಯಗಳ ಒಕ್ಕೂಟದ ಸದಸ್ಯತ್ವ ಹೊಂದಿರುವ ಮೈಸೂರು ವಿವಿಯು ಇತರ ದೇಶಗಳಲ್ಲಿನ ವಿಶ್ವ ವಿದ್ಯಾಲಯಗಳ ಸಹಯೋಗದೊಂದಿಗೆ ಹೆಚ್ಚು ಹೆಚ್ಚು ಕೋರ್ಸುಗಳನ್ನು ಆರಂಭಿಸಲಿದೆ. ಶಿಕ್ಷಣ ಕ್ಷೇತ್ರಕ್ಕೂ ಜಾಗತೀಕರಣ ಹೊರತಲ್ಲ ಎಂದು ಹೆಗಡೆ ಅಭಿಪ್ರಾಯ ಪಟ್ಟರು.

ವಿದೇಶೀ ವಿದ್ಯಾರ್ಥಿಗಳಿಗೆ, ಸಣ್ಣ ಅವಧಿಯ ಕೋರ್ಸುಗಳನ್ನು ಆರಂಭಿಸಲಾಗುವುದು. ಭಾರತೀಯ ತತ್ವ ಶಾಸ್ತ್ರ, ಯೋಗ, ಧ್ಯಾನ, ಭಾರತೀಯ ಸಂಸ್ಕೃತಿ, ಭಾಷೆಯಂತಹ ವಿಷಯಗಳಲ್ಲಿ ವಿದ್ಯಾರ್ಥಿಗಳನ್ನು ಪ್ರವೀಣರನ್ನಾಗಿ ಮಾಡುವುದು ಹೊಸದಾಗಿ ಆರಂಭಿಸುವ ಕೋರ್ಸುಗಳ ಧ್ಯೇಯವಾಗಿರುತ್ತದೆ ಎಂದು ಹೆಗಡೆ ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X