ಮಾನ್‌ಸೂನ್ ಅಧಿವೇಶನದಲ್ಲಿ ಸುರಿಯಲಿದೆತಮಿಳುನಾಡಿನ ಮಳೆ!
ನವದೆಹಲಿ : ತಮಿಳುನಾಡಿನ ಎಐಎಡಿಎಂಕೆ ಹಾಗೂ ಡಿಎಂಕೆ ನಡುವಣ ಟಂಗಾಟುಂಗಿ ಜುಲೈ 23ರಿಂದ ಪ್ರಾರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪ್ರತಿಧ್ವನಿಸಲಿದ್ದು, ತಮ್ಮ ಪಕ್ಷದ ಸಚಿವರ ಮೇಲೆ ನಡೆಸಿರುವ ಹಲ್ಲೆಯ ವಿರುದ್ಧ ಡಿಎಂಕೆ ಸದಸ್ಯರು ದನಿಯೆತ್ತಲಿದ್ದಾರೆ.
ವಿಶೇಷ ಗೊತ್ತುವಳಿ ನಿಲುವು : ಕೇಂದ್ರ ಸಚಿವರಾದ ಮುರಸೋಳಿ ಮಾರನ್ ಹಾಗೂ ಟಿ.ಎನ್.ಬಾಲು, ತಮ್ಮ ಮೇಲೆ ಪೊಲೀ-ಸ-ರು ಕ್ರೌರ್ಯ ತೋರಿದ್ದಾರೆ ಎಂದು ಆಪಾ-ದಿ-ಸು-ತ್ತಿ-ದ್ದು, ಆ ಪೊಲೀಸ್ ಅಧಿಕಾರಿಗಳ ವಿರುದ್ಧ ವಿಶೇಷ ಗೊತ್ತುವಳಿ ನಿಲುವು ಮಂಡಿಸಲಿದ್ದಾರೆ ಎಂದು ಡಿಎಂಕೆ ಪಕ್ಷದ ಅಧಿಕಾರಿಯಾಬ್ಬರು ಹೇಳಿದ್ದಾರೆ. ಡಿಎಂಕೆ ನಾಯಕ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಬಂಧನ ಪ್ರತಿಭಟಿಸಿ, ಹಲ್ಲೆಗೊಳಗಾಗಿರುವ ಮಾರನ್ ಹಾಗೂ ಬಾಲು ಈಗಾಗಲೇ ಪ್ರಧಾನಿ ಎ.ಬಿ.ವಾಜಪೇಯಿ ಹಾಗೂ ಲೋಕಸಭಾ ಸ್ಪೀಕರ್ ಜಿ.ಎಂ.ಸಿ.ಬಾಲಯೋಗಿ ಅವರಿಗೆ ದೂರು ಕೊಟ್ಟಿದ್ದಾರೆ.
ಹಲ್ಲೆ ಮಾಡಿರುವ ಪೊಲೀಸರು ಯಾರ್ಯಾರು ? : ಪ್ರಕರಣ ಕುರಿತ ಪಕ್ಕಾ ದಾಖಲೆಗಳನ್ನು ಒದಗಿಸುವಂತೆ ಲೋಕಸಭಾ ಸ್ಪೀಕರ್ ಬಾಲಯೋಗಿ ತಮಿಳುನಾಡು ಸರ್ಕಾರವನ್ನು ಕೇಳಿದ್ದಾರೆ. ಮಾರನ್ ಸಲ್ಲಿಸಿರುವ ದೂರಿನಲ್ಲಿ ತಮಿಳುನಾಡು ಪೊಲೀಸ್ ಅಧಿಕಾರಿಗಳಾದ ಕ್ರಿಸ್ಟೊಫರ್ ನೆಲ್ಸನ್, ಮೊಹಮ್ಮದ್ ಅಲಿ ಹಾಗೂ ಎಸ್.ಜಾರ್ಜ್ ಹೆಸರುಗಳಿವೆ. ಈ ಅಧಿಕಾರಿಗಳು ನೈತಿಕ ಚೌಕಟ್ಟನ್ನು ಮೀರಿ ಒರಟಾಗಿ ವರ್ತಿಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ತಮ್ಮನ್ನು ಜರೆದಿದ್ದಾರೆ ಎಂದು ಮಾರನ್ ದೂರಿದ್ದಾರೆ. ಪೊಲೀಸ್ ಅಧಿಕಾರಿಗಳ ವಿರುದ್ಧ ಒಮ್ಮೆ ವಿಶೇಷ ಗೊತ್ತುವಳಿ ನಿಲುವಳಿ ಮಂಡಿಸಿದಲ್ಲಿ , ಬಡ್ತಿ ಸೇರಿದಂತೆ ಅವರ ಉದ್ಯೋಗದ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ ಎಂದು ಡಿಎಂಕೆ ಅಧಿಕಾರಿ ತಿಳಿಸಿದ್ದಾರೆ.
ಜಯಲಲಿತಾ ವಿರುದ್ಧ ಸಿಡಿಯಲಿದೆ ಎನ್‌ಡಿಎ ದನಿ
ಮಾರನ್ ಹಾಗೂ ಬಾಲು ಅವರ ಮೇಲಿನ ಹಲ್ಲೆಯನ್ನು ಎನ್‌ಡಿಎ ಈಗಾಗಲೇ ಖಂಡಿಸಿದೆ. ಕರುಣಾನಿಧಿ ಅವರ ಮೇಲಿನ ಹಲ್ಲೆಯನ್ನು ತಮಿಳುನಾಡು ಪೊಲೀಸರ ಮಾನವ ಹಕ್ಕುಗಳ ಉಲ್ಲಂಘನೆಯ ನಿದರ್ಶನ ಎಂದು ಬಣ್ಣಿಸಿದೆ. ತಾವು ತಪ್ಪಿಸಿಕೊಳ್ಳಬಹುದು ಎಂದು ಜಯಲಲಿತಾ ತಿಳಿದಿದ್ದರೆ ಅದು ಶುದ್ಧ ಸುಳ್ಳಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಹಾಗೂ ಸಮತಾ ಪಕ್ಷದ ಮುಖಂಡ ನಿತೀಶ್ ಕುಮಾರ್ ಹೇಳಿದ್ದಾರೆ.
ತಾವು ಮುಖ್ಯಮಂತ್ರಿ ಗದ್ದುಗೆ ಏರಿದ ಮೊದಲ ದಿನದಿಂದ ಡಿಎಂಕೆ ವಿರುದ್ಧ ಸೇಡು ತೀರಿಸಿಕೊಳ್ಳುವ ನಡಾವಳಿಗಳನ್ನೇ ಜಯಲಲಿತಾ ತೋರಿದ್ದಾರೆ. ಯಾವುದೂ ತೆರೆಮರೆಯಲ್ಲಿಲ್ಲ, ಟಿವಿ ಕೆಮೆರಾಗಳು ಸುಳ್ಳು ಹೇಳುವುದಿಲ್ಲ. ಜಯಲಲಿತಾ ಸರ್ಕಾರವನ್ನು ಕಿತ್ತು ಹಾಕುವುದಷ್ಟೇ ಅಲ್ಲದೆ, ಡಿಎಂಕೆ ನಾಯಕರುಗಳ ಮೇಲೆ ನಡೆದ ಕ್ರೌರ್ಯಕ್ಕೆ ಕಾರಣರಾದ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬುದು ಕೇಂದ್ರ ವಾರ್ತಾ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರ ಅಭಿಪ್ರಾಯ.
ಒಟ್ಟಿನಲ್ಲಿ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸುರಿಯಲಿರುವುದು ತಮಿಳುನಾಡಿನ ಟಂಗಾಟುಂಗಿಯ ಮಳೆಯೇ!
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications