Get Updates
Get notified of breaking news, exclusive insights, and must-see stories!

ಜೀವಮಾನದಲ್ಲೇ ಇಂಥಾ ಯಾತನೆ ಅನುಭವಿಸಿರಲಿಲ್ಲ- ಕರುಣಾನಿಧಿ

ಚೆನ್ನೈ : ಪೊಲೀಸರು ನನ್ನನ್ನು ಈ ಹಿಂದೆ ಹಲವಾರು ಬಾರಿ ಬಂಧಿಸಿದ್ದಾರೆ. ಆದರೆ ಜೂನ್‌ 30ರ ಶನಿವಾರ ಅನುಭವಿಸಿದ ನರಕ ಯಾತನೆ ಜೀವಮಾನದಲ್ಲೇ ಆಗಿರಲಿಲ್ಲ. ಐದು ದಿನಗಳ ಸೆರೆವಾಸದಿಂದ ಬುಧವಾರ ಬಿಡುಗಡೆಯಾದ 78ರ ಇಳಿ ವಯಸ್ಸಿನ ಕರುಣಾನಿಧಿ ಕಷ್ಟ ಪಟ್ಟು ಕೈ ಮಡಚುತ್ತಾ , ಕಣ್ಣಲ್ಲಿ ನೀರು ತುಂಬಿಕೊಂಡು ಆಡಿದ ಮಾತಿದು.

ಕಿಕ್ಕಿರಿದ ಸುದ್ದಿಗೋಷ್ಠಿ ಅದು. ಕರುಣಾನಿಧಿ ಮನಸ್ಸಲ್ಲಿ ಅದೇ ಘಟನೆ ಅವುಡುಗಚ್ಚುತ್ತಿರುವುದು ಸ್ಪಷ್ಟವಾಯಿತು. ತಳ್ಳಿದರು, ಹಿಸುಕಿದರು, ಮೆಟ್ಟಿಲುಗಳ ಮೇಲೆ ದರದರನೆ ಎಳೆದಾಡಿದರು, ಫುಟ್‌ಬಾಲಿನಂತೆ ಒದ್ದರು. ಬಲಗೈ ನೋವಿನ ಯಮ ಯಾತನೆ ಅನುಭವಿಸುತ್ತಿದ್ದರೂ, ಸಿಬಿ- ಸಿಐಡಿ ಡಿಐಜಿ ಮೊಹಮ್ಮದ್‌ ಅಲಿ ಬಲವಂತವಾಗಿ ಹೊತ್ತೊಯ್ದರು... ಇಷ್ಟು ಹೇಳುವಷ್ಟರಲ್ಲಿ ಭಾರವೋ ಎಂಬಂತೆ ಬಲಗೈಯನ್ನು ಮೆತ್ತಗೆ ಆಡಿಸಿದ ಕರುಣಾನಿಧಿ ಕಣ್ಣುಗಳಲ್ಲಿ ಮತ್ತೆ ತೇವ ಆಡಿತು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+