ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಸೆಂಟ್ರಲ್‌ ಜೈಲ್‌ನಿಂದ ಎಂ. ಕರುಣಾನಿಧಿ ಬಿಡುಗಡೆ

By Staff
|
Google Oneindia Kannada News

ಚೆನ್ನೈ : ಫ್ಲೈಓವರ್‌ ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ಬಂಧಿಸಲ್ಪಟ್ಟಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಬುಧವಾರ ಸಂಜೆ ಚೆನ್ನೈ ಸೆಂಟ್ರಲ್‌ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದಿದ್ದಾರೆ.

ಕರುಣಾನಿಧಿ ಅವರ ವೃದ್ಧಾಪ್ಯ, ಆರೋಗ್ಯ ಹಾಗೂ ಹಿರಿತನವನ್ನು ಗಮನಿಸಿ ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಜಯ-ಲ-ಲಿ-ತಾ ಬುಧವಾರ ಮಧ್ಯಾಹ್ನ ಆದೇಶಿಸಿದ್ದರು. ಆದ-ರೆ, 78 ವರ್ಷ-ದ ಕರು-ಣಾ-ನಿ-ಧಿ ಅವರ ವಿರು-ದ್ಧ-ದ ಎಲ್ಲ ಭ್ರಷ್ಟಾ-ಚಾ-ರ ಮೊಕ-ದ್ದ-ಮೆ-ಗ-ಳ ತನಿ-ಖೆ ಮುಂದು-ವ-ರಿ-ಯ-ಲಿ-ದೆ.

ಸರಕಾರ ತಮ್ಮನ್ನು ಬಿಡುಗಡೆ ಮಾಡಲು ಕೈಗೊಂಡ ನಿರ್ಧಾರವನ್ನು ಒಪ್ಪಿಕೊಂಡ ಕರುಣಾನಿಧಿ ಅವರು ಜೈಲಿನಿಂದ ಹೊರಬರಲು ನಿರ್ಧರಿಸಿದರು. ಬುಧವಾರ ಸಂಜೆ 5.20ರಲ್ಲಿ ಕರುಣಾನಿಧಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಸಾವಿರಾರು ಅಭಿಮಾನಿಗಳು, ಡಿ.ಎಂ.ಕೆ. ಕಾರ್ಯಕರ್ತರು ಸೆರೆಮನೆಯ ಮುಂಭಾಗದಲ್ಲಿ ಸೇರಿ, ತಮ್ಮ ನಾಯಕನಿಗೆ ಜಯಘೋಷ ಮಾಡಿದರು.

ನಾಲ್ಕು ದಿನಗಳ ಸೆರೆವಾಸದಿಂದ ಬಳಲಿದ್ದ ಕರುಣಾನಿಧಿ ಅವರು ಗಾಲಿಕುರ್ಚಿಯ ಮೇಲೆ ಕುಳಿತು ಹೊರಬಂದದ್ದನ್ನು ಕಂಡ ಅಭಿಮಾನಿಗಳು ಕಣ್ಣೀರು ಗರೆದರು. ಜಯಲಲಿತಾ ವಿರುದ್ಧ ಘೋಷಣೆ ಕೂಗಿದರು. ಜೈಲಿನ ಬಳಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಕರುಣಾನಿಧಿ ಅವರು, ತಮ್ಮ ಪಕ್ಷದ ಕಾರ್ಯಕರ್ತರ ಒತ್ತಡಕ್ಕೆ ಮಣಿದು, ಸರಕಾರ ತಮ್ಮನ್ನು ಬಿಡುಗಡೆ ಮಾಡಿತು ಎಂದರು.

ತಮ್ಮ ಬಗ್ಗೆ ವಿಶ್ವಾಸವಿಟ್ಟಿರುವ ತಮಿಳುನಾಡಿನ ಜನತೆಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಅವರು ವಂದಿಸಿ. ನೇರವಾಗಿ ತಮ್ಮ ನಿವಾಸಕ್ಕೆ ತೆರಳಿದರು. ವಿಶ್ರಾಂತಿಯ ಬಳಿಕ ಬುಧವಾರ ರಾತ್ರಿ 8 ಗಂಟೆಗೆ ಕರುಣಾನಿಧಿ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಕರುಣಾನಿಧಿ ಕೊಲೆ ಸಂಚು - ಆರೋಪ: ಇದಕ್ಕೂ ಮುನ್ನ ಪೊಲೀಸ್‌ ಕಸ್ಟಡಿಯಿಂದ ಬಿಡುಗಡೆಯಾಗಿ ಆಸ್ಪತ್ರೆಯಿಂದ ಹೊರಬಂದ ಕೇಂದ್ರ ಸಚಿವ ಮುರಸೋಳಿ ಮಾರನ್‌ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಕರುಣಾನಿಧಿ ಅವರ ಬಂಧನದ ಹಿಂದೆ ಡಿಎಂಕೆ ನಾಯಕನನ್ನು ಮುಗಿಸಿಬಿಡುವ ಸಂಚು ಇತ್ತು ಎಂಬ ಶಂಕೆಯನ್ನು ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲಿ ವಿಪರೀತ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಮಾಡುವುದೊಂದೇ ಪರಿಹಾರ ಎಂದೂ ಹೇಳಿದರು. ಕರುಣಾನಿಧಿ ಅವರನ್ನು ಬಂಧಿಸಿದ್ದರ ಹಿಂದೆ ಅವರನ್ನು ಕೊಲೆ ಮಾಡುವ ಸಂಚೂ ಇತ್ತು ಎಂದು ನನಗನ್ನಿಸುತ್ತದೆ. ಪೊಲೀಸರ ಈ ಅಕೃತ್ಯಕ್ಕೆ ನಾನು ಪ್ರತ್ಯಕ್ಷ ಸಾಕ್ಷಿ ಆಗಿದ್ದು ಅವರಿಗೆ ಇರುಸುಮುರುಸಾಯಿತು. ಹೀಗಾಗಿ ಪೊಲೀಸರು ನನ್ನನ್ನೂ ಕೊಲ್ಲಲು ಸಂಚು ಮಾಡಿದ್ದರು ಎಂದು ತಾವು ಶಂಕಿಸುವುದಾಗಿ ಮಾರನ್‌ ಆರೋಪಿಸಿದರು.

ಮುಖಪುಟ / ತಮಿಳುನಾಡು ಬಿಕ್ಕಟ್ಟು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X