Get Updates
Get notified of breaking news, exclusive insights, and must-see stories!

‘ಐಬಿಎಂ’ ನಿಂದ ಸಾವಿರ ಮಂದಿ ಉದ್ಯೋಗಿಗಳು ಔಟ್‌!

ನ್ಯೂಯಾರ್ಕ್‌ : ಇಂಟರ್‌ನ್ಯಾಶನಲ್‌ ಬಿಸಿನೆಸ್‌ ಮೆಷಿನ್ಸ್‌ ಕೋರ್ಪೋರೇಷನ್‌(ಐಬಿಎಂ) ತನ್ನ ಪ್ರತಿಷ್ಠಿತ ಶಾಖೆಯಾದ ಗ್ಲೋಬಲ್‌ ಸರ್ವೀಸಸ್‌ ಗ್ರೂಪ್‌ನ 1 ಸಾವಿರ ಮಂದಿ ನೌಕರರನ್ನು ಉದ್ಯೋಗದಿಂದ ತೆಗೆದುಹಾಕಿದೆ.

ಈ ನೌಕರರಲ್ಲಿರುವ ಉದ್ಯೋಗ ನಿರ್ವಹಣಾ ಕೌಶಲ್ಯಗಳ ಅಗತ್ಯ ಪ್ರಸ್ತುತ ಕಂಪೆನಿಗಿಲ್ಲದಿರುವುದೇ ಈ ಕ್ರಮಕ್ಕೆ ಕಾರಣ ಎಂದು ಐಬಿಎಂ ಸಮರ್ಥಿಸಿಕೊಂಡಿರುವುದಾಗಿ ನ್ಯೂಯಾರ್ಕ್‌ನ ವಾಲ್‌ಸ್ಟ್ರೀಟ್‌ ಜರ್ನಲ್‌ ಪ್ರಕಟಿಸಿದೆ. ಐಬಿಎಂನ ಗ್ಲೋಬಲ್‌ ಸರ್ವೀಸ್‌ ಸುಮಾರು 150 ಸಾವಿರ ಮಂದಿಗೆ ಉದ್ಯೋಗ ನೀಡುತ್ತಿದ್ದು ಅಮೆರಿಕಾ ಶಾಖೆಯಲ್ಲಿ ಹೆಚ್ಚು ಮಂದಿ ಉದ್ಯೋಗಿಗಳಿದ್ದಾರೆ.

ಕಳೆದ ಮಾರ್ಚ್‌ ತಿಂಗಳಿನಲ್ಲಷ್ಟೇ ಆರು ತಿಂಗಳ ವೇತನವನ್ನು ಮುಂಚಿತವಾಗಿಯೇ ನೀಡಿ ಅನೇಕ ನೌಕರರಿಗೆ ಸ್ವಯಂ ನಿವೃತ್ತಿ ತೆಗೆದುಕೊಳ್ಳುವಂತೆ ಐಬಿಎಂ ಒತ್ತಾಯಿಸಿತ್ತು. ಪ್ರಸ್ತುತ ನೌಕರರನ್ನು ತೆಗೆದು ಹಾಕಿರುವ ಮಾತ್ರಕ್ಕೆ ಕಂಪೆನಿ ನಷ್ಟದಲ್ಲಿದೆ ಎಂದರ್ಥವಲ್ಲ ಅಥವಾ ಈ ಕ್ರಮ ಆರ್ಥಿಕ ಕುಸಿತದ ಪರಿಣಾಮವಲ್ಲ ಎಂದು ಕಂಪೆನಿಯ ವಕ್ತಾರೆ ಜಾನ್‌ ಬಟ್ಲರ್‌ ಪತ್ರಿಕೆಗೆ ನೀಡಿದ ಸಂದರ್ಶದಲ್ಲಿ ಒತ್ತಿ ಹೇಳಿದ್ದಾರೆ.

(ಇನ್ಫೋ ವಾರ್ತೆ)

What do you think about this story ?

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+