ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಜನಪದ ಗೀತೆ ಯಾವತ್ತೂ ಪೋಲಿ ಗೀತೆಯಾಗಿರಲಿಲ್ಲ ’

By Staff
|
Google Oneindia Kannada News

ಬೆಂಗಳೂರು : ‘ಜನಪದ ಗೀತೆ ಯಾವತ್ತೂ ಪೋಲಿ ಹಾಡಾಗಿರಲಿಲ್ಲ . ಆದರೆ, ಕೆಲವರು ಜನಪದ ಗೀತೆಯನ್ನು ಪರಿವರ್ತಿಸಿ ಪೋಲಿಗೀತೆಯಾಗಿಸಿದ್ದಾರೆ, ಜನಪದವನ್ನು ವಿಕೃತಗೊಳಿಸಿದ್ದಾರೆ. ಇದೊಂದು ರೀತಿಯ ಮಾನಸಿಕ ಅತ್ಯಾಚಾರ’ - ಎನ್ನುತ್ತಾರೆ ಜಾನಪದ ಅಕಾಡೆಮಿಯ ಅಧ್ಯಕ್ಷ ಡಾ. ಹಿ.ಶಿ. ರಾಮಚಂದ್ರೇಗೌಡ.

ಬಹಳಷ್ಟು ಮಹಿಳೆಯರು ಅಶ್ಲೀಲಗೀತೆಗಳ ಕುರಿತು ಗೌಡರಿಗೆ ದೂರು ಸಲ್ಲಿಸಿದ್ದಾರಂತೆ, ದೂರವಾಣಿ ಕರೆಗಳ ಮೂಲಕ ಆತಂಕ ವ್ಯಕ್ತಪಡಿಸಿದ್ದಾರಂತೆ. ಇವೆಲ್ಲವನ್ನೂ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಗೌಡರು ತೋಡಿಕೊಂಡರು. ನಗರದ ಹೊರವಲಯದಲ್ಲಿ ಅಶ್ಲೀಲ ಗೀತೆಗಳ ಟೆಂಪೋ ಸಾಹಿತ್ಯದ ಬಗ್ಗೆ ಕಿಡಿಕಾರಿದರು.

ಜನಪದವನ್ನು ಅಶ್ಲೀಲಗೊಳಿಸುವ ಮಂದಿಯನ್ನು ಜಾಗೃತಿಗೊಳಿಸುವ ಯೋಚನೆಯಲ್ಲಿ ಸದ್ಯಕ್ಕೆ ಗೌಡರಿದ್ದಾರೆ. ಅಶ್ಲೀಲ ಗೀತೆಗಳನ್ನು ಹಾಡುವವರಿಗಾಗಿ ಹಾಗೂ ಅಂತ ಗೀತೆಗಳ ಕ್ಯಾಸೆಟ್‌ ತರುವವರಿಗಾಗಿ ಕಮ್ಮಟವೊಂದನ್ನು ಅಕಾಡೆಮಿ ಮೂಲಕ ನಡೆಸುವ ಕನಸು ಅವರದು. ಕಮ್ಮಟ ಜುಲೈ ತಿಂಗಳಲ್ಲಿಯೇ ಬೆಂಗಳೂರಿನಲ್ಲಿ ನಡೆಯುತ್ತದೆ.

ಜಾನಪದವನ್ನು ಬದಲಿಸಬಹುದಾ ?

ತಪ್ಪಿಲ್ಲ ಅನ್ನುತ್ತಾರೆ. ಜಾನಪದ ಅನ್ನುವಂತದ್ದು ನಿಂತ ನೀರಲ್ಲ . ಜಾನಪದ ಸದಾ ಚಲನಶೀಲ. ಆ ಕಾರಣ ಜಾನಪದವನ್ನು ಬದಲಿಸುವುದು ತಪ್ಪಲ್ಲ , ಆದರೆ ಬದಲಿಸುವ ಹೆಸರಿನಲ್ಲಿ ಅಶ್ಲೀಲವಾಗಿಸುವುದು ಸಲ್ಲ ಅನ್ನುವುದು ರಾಮಚಂದ್ರಗೌಡರ ಅಭಿಮತ.

ಮುಂದಿನ ಮೂರು ವರ್ಷಗಳಲ್ಲಿ ಸ್ಥಳೀಯ ಉಡುಗೆ ತೊಡುಗೆ ಹಾಗೂ ಜನಪದ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಉದ್ದೇಶದ ಆದಿ ದಿನೋತ್ಸವ ಕಾರ್ಯಕ್ರಮಗಳನ್ನು ಜಿಲ್ಲಾಮಟ್ಟದಲ್ಲಿ ಆಚರಿಸುವ ಯೋಚನೆಯೂ ಗೌಡರಿಗಿದೆ. ಕನ್ನಡದೊಂದಿಗೆ ತಮಿಳು, ತೆಲುಗು, ಮರಾಠಿ, ಉರ್ದು ಮತ್ತಿತರ ಭಾಷೆಗಳ ಸಂಸ್ಕೃತಿಯ ಅಧ್ಯಯನಕ್ಕಾಗಿ ಜಾನಪದ ಸೌಹಾರ್ದ ಎನ್ನುವ ಹೆಸರಿನ ಯೋಜನೆಯೂ ಅವರ ತಲೆಯಲ್ಲಿದೆ.

ಒಟ್ಟಿನಲ್ಲಿ ತಮ್ಮ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಜಾನಪದವನ್ನು ಪರ್ಯಾಯ ಜ್ಞಾನ- ವಿಜ್ಞಾನವಾಗಿ ರೂಪಿಸುವ ಸವಾಲನ್ನು ರಾಮಚಂದ್ರಗೌಡರು ತಮಗೊಡ್ಡಿಕೊಂಡಿದ್ದಾರೆ. ಶುಭವಾಗಲಿ!

(ಇನ್ಫೋ ವಾರ್ತೆ)

What do you think about this story ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X