ಪಿಯುಸಿ ಸಂಜೆ ಕಾಲೇಜುಗಳಿಗೆ ಮರು ಜೀವ !
ಬೆಂಗಳೂರು : ಶಿಕ್ಷಣ ಇಲಾಖೆ ಕಾಲೇಜುಗಳನ್ನು ಮುಚ್ಚುವ ತನ್ನ ಹೆಜ್ಜೆಯನ್ನು ಮತ್ತೊಮ್ಮೆ ಹಿಂತೆಗೆದಿದೆ. ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜು ಇಲಾಖೆಗಳನ್ನು ಮುಚ್ಚುವ ನಿರ್ಧಾರ ಹೊರಡಿಸಿದ ಮರು ದಿನವೇ ಆ ಆದೇಶವನ್ನು ಹಿಂದಕ್ಕೆ ಪಡೆಯಿತು. ಈಗ ವಿವಾದಿತ ನಿರ್ಧಾರವಾಗಿದ್ದ ಸಂಜೆ ಕಾಲೇಜುಗಳನ್ನು ಮುಚ್ಚುವ ನಿರ್ಧಾರವನ್ನೂ ಶಿಕ್ಷಣ ಇಲಾಖೆ ವಾಪಸ್ಸು ಪಡೆದಿದೆ.
ಕಾಲೇಜು ಶಿಕ್ಷಣದ ಕಮಿಷನರ್ ಮಂಗಳವಾರ ಹೊರಡಿಸಿರುವ ಆದೇಶದಲ್ಲಿ 2001-2002ನೇ ಸಾಲಿಗಾಗಿ ಪ್ರಥಮ ಪಿಯುಸಿ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಂತೆ ಸಂಜೆ ಕಾಲೇಜುಗಳಿಗೆ ತಿಳಿಸಿದೆ. ಸಂಯುಕ್ತ ಸಂಜೆ ಕಾಲೇಜುಗಳು ಇನ್ನು ಮುಂದೆ ಸ್ವಾಯತ್ತ ಸಂಜೆ ಕಾಲೇಜುಗಳಾಗಿ ಕಾರ್ಯ ನಿರ್ವಹಿಸಲಿದ್ದು, ಪ್ರಥಮ ಪಿಯುಸಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬಹುದಾಗಿದೆ ಎಂದು ಕಾಲೇಜು ಶಿಕ್ಷಣದ ಕಮಿಷನರ್ ಕೆ.ಎ.ಬೆಳ್ಳಿಯಪ್ಪ ಆದೇಶ ಹೊರಡಿಸಿದ್ದಾರೆ.
ಪಿಯು ಕಾಲೇಜುಗಳನ್ನು ಪದವಿ ಕಾಲೇಜುಗಳಿಂದ ಪ್ರತ್ಯೇಕಿಸುವ ಹಾಗೂ ಸಂಜೆ ಕಾಲೇಜುಗಳನ್ನು ಮುಚ್ಚುವ ಆದೇಶವನ್ನು ಸರ್ಕಾರ ಈ ಮೊದಲು ಹೊರಡಿಸಿತ್ತು. ರಾಜ್ಯಾದ್ಯಂತ ಸರ್ಕಾರದ ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕೆಲವು ಕಡೆ ಪ್ರತಿಭಟನೆ, ಸಂಪುಗಳೂ ನಡೆದಿದ್ದವು.
ಇನ್ನು ಮುಂದೆ ಸಂಜೆ ಕಾಲೇಜುಗಳಲ್ಲಿ ಪಿಯುಸಿ ಬೋಧನೆ ಇರುವುದಿಲ್ಲ ಎಂಬ ಫಲಕ ಎಷ್ಟೋ ಕಾಲೇಜುಗಳಲ್ಲಿ ಕಾಣುತ್ತಿತ್ತು. ಈಗ ಸರ್ಕಾರದ ಆದೇಶದಿಂದ ಈ ಬೋರ್ಡನ್ನು ಅಳಿಸಬೇಕಾಗಿದೆ. ಸರ್ಕಾರ ಹೀಗೇಕೆ ಮಾಡುತ್ತದೆ. ಈ ನಿರ್ಧಾರವನ್ನು ಮೊದಲೇ ಬದಲಿಸಿದ್ದರೆ ಎಷ್ಟು ಚೆನ್ನಾಗಿತ್ತು. ಈಗ ಪ್ರಸ್ತುತ ಶೈಕ್ಷಣಿಕ ವರ್ಷದ ಬೋಧನಾ ಕ್ರಮದಲ್ಲಿ ಏರುಪೇರು ಮಾಡುವುದು ಅನಿವಾರ್ಯವಾಗಿದೆ. ಯಾಕೆಂದರೆ ತರಗತಿಗಳು ಈಗಾಗಲೇ ಶುರುವಾಗಬೇಕಿತ್ತು ಎನ್ನುತ್ತಾರೆ ನಗರದ ಕಾಲೇಜೊಂದರ ಪ್ರಾಂಶುಪಾಲ.
ಒಟ್ಟಿನಲ್ಲಿ, ಸರ್ಕಾರದ ಬದಲಾದ ಈ ನಿಲುವನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಆದರೆ ವಿಳಂಬ ನೀತಿಗೆ ಏನನ್ನುವುದು? ಸರ್ಕಾರವೇ ಹಾಗೇ ಅನ್ನೋಣವಾ!
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications