ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಚಾವಾದ ಜಯಲಲಿತಾ, ಎಚ್ಚರಿಕೆ ನೀಡಿ ತೆಪ್ಪಗಾದ ಸಂಪುಟ ಸಭೆ

By Staff
|
Google Oneindia Kannada News

ನವದೆಹಲಿ : ನಿರೀಕ್ಷೆಯಂತೆ ಜಯಲಲಿತಾ ಸರ್ಕಾರ ಕುತ್ತಿನಿಂದ ಪಾರಾಗಿದೆ. ಪ್ರಧಾನಿ ವಾಜಪೇಯಿ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ಸೇರಿದ ಕೇಂದ್ರ ಸಚಿವ ಸಂಪುಟದ ಸಭೆ, ಸಂವಿಧಾನ ವಿರೋಧಿ ಕ್ರಮದ ಹಿನ್ನೆಲೆಯಲ್ಲಿ ಜಯಲಲಿತಾ ಸರ್ಕಾರಕ್ಕೆ ಎಚ್ಚರಿಕೆ ನೀಡುವಷ್ಟಕ್ಕೇ ಸುಮ್ಮನಾಗುವುದರೊಂದಿಗೆ ತಮಿಳುನಾಡಿನ ವಿದ್ಯಮಾನಗಳು ಹೆಚ್ಚುಕಮ್ಮಿ ತಣ್ಣಗಾದಂತಾಗಿದೆ.

ಈ ನಡುವೆ ಕೇಂದ್ರ ಸಚಿವರಾದ ಮುರಸೋಳಿ ಮಾರನ್‌ ಹಾಗೂ ಟಿ.ಆರ್‌. ಬಾಲು ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಿರುವ ತಮಿಳುನಾಡು ಸರ್ಕಾರ, ಸಚಿವರ ವಿರುದ್ಧದ ಎಲ್ಲ ಮೊಕದ್ದಮೆಗಳನ್ನು ವಾಪಸ್ಸು ಪಡೆದಿದೆ. ಈ ನಿರ್ಧಾರದಿಂದಾಗಿಯೇ ಸಂಪುಟ ಸಭೆ ಜಯಲಲಿತಾ ಸರ್ಕಾರದ ವಿರುದ್ಧ ಮೆದು ಧೋರಣೆ ಅನುಸರಿಸಿರಲಿಕ್ಕೂ ಸಾಕು.

ಸಂಪುಟ ಸಭೆ ಕೈಗೊಂಡ ಇತರ ಮುಖ್ಯ ತೀರ್ಮಾನಗಳು ಇಂತಿವೆ-

  • ಜೂನ್‌ 30 ರಂದು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರನ್ನು ಬಂಧಿಸುವ ಸಮಯದಲ್ಲಿ ಒರಟಾಗಿ ನಡೆದುಕೊಂಡ ಪೊಲೀಸ್‌ ಅಧಿಕಾರಿಗಳನ್ನು ಗುರ್ತಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ.
  • ಕಾನೂನು, ಸಂವಿಧಾನ ವಿಧಿ- ವಿಧಾನ, ಮಾನವ ಹಕ್ಕು ಹಾಗೂ ಪತ್ರಿಕಾ ಸ್ವಾತಂತ್ರಗಳನ್ನು ದಮನ ಮಾಡಿದ ತಮಿಳುನಾಡು ಸರ್ಕಾರ, ಅವುಗಳನ್ನು ತಕ್ಷಣವೇ ಪುನರ್‌ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು.
  • ಭವಿಷ್ಯದಲ್ಲಿ ಸಂವಿಧಾನ, ಮಾನವ ಹಕ್ಕು ಹಾಗೂ ಪತ್ರಿಕಾ ಸ್ವಾತಂತ್ರ್ಯಗಳನ್ನು ಉಲ್ಲಂಘಿಸುವುದಿಲ್ಲ ಎನ್ನುವ ಬಗೆಗೆ ತಮಿಳುನಾಡು ಸರ್ಕಾರ ಖಾತರಿ ನೀಡಬೇಕು.
(ಇನ್ಫೋ ವಾರ್ತೆ)

ಮುಖಪುಟ / ತಮಿಳುನಾಡು ಬಿಕ್ಕಟ್ಟು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X