Get Updates
Get notified of breaking news, exclusive insights, and must-see stories!

ತಮಿಳುನಾಡು ಹಂಗಾಮಿ ರಾಜ್ಯಪಾಲರಾಗಿ ರಂಗರಾಜನ್‌ ಪ್ರಮಾಣವಚನ

ಚೆನ್ನೈ: ಆಂಧ್ರಪ್ರದೇಶದ ರಾಜ್ಯಪಾಲ ಡಾ. ಸಿ.ರಂಗರಾಜನ್‌ ತಮಿಳುನಾಡಿನ ಹಂಗಾಮಿ ರಾಜ್ಯಪಾಲರಾಗಿ ಮಂಗಳವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದರು.

ರಾಜಭವನ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಎನ್‌.ಕೆ. ಜೈನ್‌ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನವನ್ನು ರಂಗರಾಜನ್‌ ಅವರಿಗೆ ಬೋಧಿಸಿದರು. ಫಾತಿಮಾ ಬೀವಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನವನ್ನು ಹೆಚ್ಚುವರಿ ಹೊಣೆಯಾಗಿ ರಂಗರಾಜನ್‌ ತುಂಬಿದ್ದಾರೆ.

ಮುಖ್ಯಮಂತ್ರಿ ಜಯಲಲಿತಾ ಹಾಗೂ ಆಕೆಯ ಸಂಪುಟದ ಸದಸ್ಯರು, ವಿಧಾನಸಭಾ ಸ್ಪೀಕರ್‌ ಕಾಳಿಮುತ್ತು , ನ್ಯಾಯಾಧೀಶರು ಹಾಗೂ ಇತರೆ ಉನ್ನತಮಟ್ಟದ ಅಧಿಕಾರಿಗಳು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+