ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 5 ಜಿಲ್ಲೆಗಳಲ್ಲಿ ಕೈಕೊಟ್ಟ ಮುಂಗಾರು ಮಳೆ: ಅನಾವೃಷ್ಟಿ ಭೀತಿ

By Staff
|
Google Oneindia Kannada News

ಬೆಂಗಳೂರು : ಮಂಡ್ಯ, ಮೈಸೂರು, ಹಾಸನ, ತುಮಕೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಈಬಾರಿ ಮುಂಗಾರು ದುರ್ಬಲವಾಗಿದೆ. ಕರಾವಳಿ ಹಾಗೂ ರಾಜ್ಯದ ಇನ್ನಿತರೆಡೆಗಳಲ್ಲಿ ಕಳೆದ ಒಂದು ವಾರದಿಂದ ಮುಂಗಾರು ಮಳೆ ವ್ಯಾಪಕವಾಗಿ ಬೀಳುತ್ತಿದ್ದರೂ ಈ ಐದು ಜಿಲ್ಲೆಗಳಲ್ಲಿ ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ.

ಈ ವಿಷಯವನ್ನು ರಾಜ್ಯದ ಕೃಷಿ ಸಚಿವ ಟಿ.ಬಿ. ಜಯಚಂದ್ರ ಮಂಗಳವಾರ ಇಲ್ಲಿ ತಿಳಿಸಿದರು. ಈ 5 ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಜುಲೈ 7ರೊಳಗೆ ಮುಂಗಾರು ಮಳೆ ಇಲ್ಲಿ ಬೀಳಲಿದೆ ಎಂದು ತಜ್ಞರು ಹೇಳಿದ್ದಾರೆ ಎಂದು ಅವರು ತಿಳಿಸಿದರು. ಜುಲೈ 7ರೊಳಗೆ ಅಥವಾ ಆ ನಂತರವೂ ಇಲ್ಲಿ ಮಳೆ ಆಗದಿದ್ದರೆ, ಸರಕಾರ ಪರ್ಯಾಯ ಕಾರ್ಯಕ್ರಮಗಳ ಬಗ್ಗೆ ಯೋಚಿಸಲಿದೆ ಎಂದು ಅವರು ಹೇಳಿದರು.

ಅಡಿಕೆ : ರಾಜ್ಯದಲ್ಲಿ ಬೆಳೆಯುವ ಅಡಿಕೆಯನ್ನು ಚೀನಾ ದೇಶ ಖರೀದಿಸಿದರೆ ರಾಜ್ಯದ ರೈತರ ಸ್ಥಿತಿ ಸುಧಾರಿಸಲಿದೆ ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದರು. ಅಂತಾರಾಷ್ಟ್ರೀಯ ವ್ಯಾಪಾರದ ಸಂಬಂಧ ಕೇಂದ್ರದೊಂದಿಗೆ ತಾವು ಮಾತುಕತೆ ನಡೆಸುವುದಾಗಿಯೂ ಅವರು ಹೇಳಿದರು.

ವಾರ್ತಾ ಸಂಚಯ
ಅರೆರೆರೆ.. ತುಂತುರು
ಬೆಂಗಳೂರಿನಲ್ಲಿ ಧಾರಾಕಾರ ಮಳೆ, ಮೂವರು ಮಳೆಗೆ ಹಾರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X