ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿಗೆ ರಾಷ್ಟ್ರಪತಿ ಆಳ್ವಿಕೆ ಬಗ್ಗೆ ಎನ್‌ಡಿಎಯಲ್ಲಿ ಭಿನ್ನಮತ?

By Staff
|
Google Oneindia Kannada News

ನವದೆಹಲಿ : ತಮಿಳುನಾಡು ವಿದ್ಯಮಾನಗಳನ್ನು ಅಧ್ಯಯನ ಮಾಡಿರುವ ರಾಷ್ರ್ಟೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸತ್ಯಶೋಧಕ ಸಮಿತಿ, ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಸ್ಪಷ್ಟವಾಗಿ ಹೇಳುತ್ತಿದೆ. ಆದರೆ, ಎನ್‌ಡಿಎ ಒಕ್ಕೂಟದಲ್ಲಿ ಸಂವಿಧಾನದ 356 ನೇ ವಿಧಿ ಬಳಕೆಯ ಬಗ್ಗೆ ಅಪಸ್ವರಗಳು ಕೇಳಿಬರುತ್ತಿರುವುದು ಈ ಹೊತ್ತಿನ ವಿಶೇಷ.

ಎರಡು ತಾಸುಗಳ ಕಾಲ ನಡೆದ ಎನ್‌ಡಿಎ ಸಭೆಯ ನಂತರ ಅದರ ಸಂಚಾಲಕ ಜಾರ್ಜ್‌ ಫರ್ನಾಂಡಿಸ್‌ ಅವರೇನೋ, ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಯ ಬಗ್ಗೆ ಸಭೆಯಲ್ಲಿ ಒಮ್ಮತ ಮೂಡಿಬಂತು ಎಂದು ಪ್ರಕಟಿಸಿದರು. ಆದರೆ, ಸಭೆಯಲ್ಲಿ ಭಾಗವಹಿಸಿದ್ದ ಇತರ ನಾಯಕರು ಹೇಳುವುದೇ ಬೇರೆ-

‘ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಕುರಿತು ಸಭೆಯೇನೂ ನಿರ್ಣಯ ಕೈಗೊಂಡಿಲ್ಲ . ಬದಲಿಗೆ ಯಾವುದೇ ಕಠಿಣ ತೀರ್ಮಾನ ಕೈಗೊಳ್ಳುವ ಮುನ್ನ, ರಾಜ್ಯದ ವಿದ್ಯಮಾನಗಳನ್ನು ಸಾಕಷ್ಟು ಎಚ್ಚರದಿಂದ ಗಮನಿಸಲು ಸಭೆ ನಿರ್ಧರಿಸಿತು.’ ಮೂವರು ಸದಸ್ಯರ ಸತ್ಯಶೋಧಕ ಸಮಿತಿಯನ್ನು ಮುನ್ನಡೆಸಿದ್ದ ಜಾರ್ಜ್‌ ಮಾತ್ರ, 356 ನೇ ವಿಧಿಯೇ ತಮಿಳುನಾಡಿಗೆ ಅಂತಿಮ ಹಾಗೂ ಯೋಗ್ಯ ಎಂದು ಈಗಲೂ ಹೇಳುತ್ತಿದ್ದಾರೆ.

ಜಾರ್ಜ್‌ ಯಾವಾಗಲೂ ಹೀಗೇ-
ಕಮ್ಯುನಿಸ್ಟ್‌ ಮುಖಂಡರು ಕೂಡ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಾರೆ. ಜಾರ್ಜ್‌ ಅವರು ರಾಷ್ಟ್ರಪತಿ ಆಡಳಿತ ಹೇರುವಂತೆ ಒತ್ತಾಯಿಸುತ್ತಿರುವುದು ಇದೇ ಮೊದಲೇನಲ್ಲ . ಈ ಮುನ್ನ ಬಿಹಾರ ಹಾಗೂ ಪಶ್ಚಿಮಬಂಗಾಳಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಜಾರ್ಜ್‌ ಒತ್ತಾಯಿಸಿದ್ದರು. ಈಗ ತಮಿಳುನಾಡಿನ ಸರದಿಯಷ್ಟೇ ಎಂದು ಕಮ್ಯುನಿಸ್ಟ್‌ ನಾಯಕರು ಜಾರ್ಜ್‌ರನ್ನು ಗೇಲಿ ಮಾಡುತ್ತಾರೆ.

ಅಡ್ವಾಣಿ ಏನು ಹೇಳುತ್ತಾರೆ-
ಮಂಗಳವಾರ ಸಂಜೆ ನಡೆಯುವ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಅಡ್ವಾಣಿ ಭಾಗವಹಿಸುತ್ತಿದ್ದಾರೆ. ಅಡ್ವಾನಿ ಪಾಲ್ಗೊಳ್ಳಲು ಅನುಕೂಲವಾಗಲೆಂದೇ ಸೋಮವಾರ ಸಂಜೆ ನಡೆಯಬೇಕಿದ್ದ ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿತ್ತು . ಈ ನಡುವೆ ವಿದೇಶ ಪ್ರವಾಸದಲ್ಲಿರುವ ಅಟಾರ್ನಿ ಜನರಲ್‌ ಸೋಲಿ ಸೊರಾಬ್ಜಿ ಅವರಿಗೆ ತಕ್ಷಣ ವಾಪಸ್ಸಾಗುವಂತೆ ಹಾಗೂ ಮಂಗಳವಾರದ ಸಂಪುಟ ಸಭೆಯಲ್ಲಿ ಹಾಜರಿರುವಂತೆ ಸರ್ಕಾರ ಸೂಚಿಸಿದೆ.

(ಏಜೆನ್ಸೀಸ್‌)

ವಾರ್ತಾ ಸಂಚಯ
ದಾರಿ ಯಾವುದಯ್ಯಾ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X