ನಾನು ಶ್ರೀಲಂಕಾ ಪ್ರವಾಸಕ್ಕೆ ಹೋಗುವಷ್ಟು ಫಿಟ್ ಆಗಿಲ್ಲ - ಕುಂಬ್ಳೆ
(ಇನ್ಫೋ ವಿಶೇಷ)
ಬೆಂಗಳೂರು : ಜುಲೈ 18ರಿಂದ ಶ್ರೀಲಂಕಾದಲ್ಲಿ ಪ್ರಾರಂಭವಾಗುವ ಕ್ರಿಕೆಟ್ ಸರಣಿಯಲ್ಲಿ ಕರ್ನಾಟಕದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಆಡುವುದಿಲ್ಲ.
ಬಲಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕುಂಬ್ಳೆ ಸತತ ಅಭ್ಯಾಸ ನಡೆಸಿದ್ದಾರೆ. ಆದರೂ ಅವರಿಗೆ ತಮ್ಮ ಫಿಟ್‌ನೆಸ್ ಮೇಲೆ ಇನ್ನೂ ಪೂರ್ಣ ವಿಶ್ವಾಸ ಬಂದಿಲ್ಲ. ದಟ್ಸ್ ಕ್ರಿಕೆಟ್ ಡಾಟ್ ಕಾಂನ ವಿಶೇಷ ಪ್ರತಿನಿಧಿಯಾಂದಿಗೆ ಅವರು ಮಾತಾಡಿದ್ದಾರೆ- ‘ನಾನು ನೆಟ್ ಪ್ರಾಕ್ಟೀಸ್ ನಡೆಸಿರುವುದೇನೋ ನಿಜ. ಆಟಕ್ಕೆ ಸಾಕಷ್ಟು ಕುದುರಿಕೊಂಡಿದ್ದೇನೆ. ಶ್ರೀಲಂಕಾ ಪ್ರವಾಸ ಪ್ರಾರಂಭವಾಗಲು ಇನ್ನು 15 ದಿನ ಮಾತ್ರ ಉಳಿದಿದೆ. ತಂಡದ ಆಯ್ಕೆ ಜುಲೈ 8ರಂದು ನಡೆಯಲಿದೆ. ಟೈಂ ತುಂಬಾ ಕಡಿಮೆ ಇದೆ. ನಾನು ಆಪರೇಶನ್ ಆದ ನಂತರ ಯಾವುದೇ ಪಂದ್ಯ ಆಡಿಲ್ಲ. ಪ್ರಸ್ತುತ ಶ್ರೀಲಂಕಾದಲ್ಲಿ ಆಡುವ ಸ್ಥಿತಿಯಲ್ಲಿ ನಾನಿಲ್ಲ.
ನಾನು ಪೂರ್ಣ ಫಿಟ್ ಆದ ನಂತರ ಬಿಸಿಸಿಐಗೆ ಹೋಗಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಸಿದ್ಧ ಎಂದು ಅಧಿಕಾರಿಗಳಿಗೆ ತಿಳಿಸಬೇಕು. ಆಗ ಮಾತ್ರ ನನ್ನನ್ನು ಆಯ್ಕೆಗೆ ಪರಿಗಣಿಸುವರು. ನನ್ನ ರಿಹೆಬಿಲಿಟೇಷನ್ ಪ್ರೋಗ್ರಾಂ ಇನ್ನೂ ನಡೆಯುತ್ತಿರುವುದರಿಂದ ಯಾವಾಗ ಕ್ರಿಕೆಟ್ಟಿಗೆ ಮರಳುತ್ತೇನೆ ಎಂಬುದನ್ನು ಈಗಲೇ ಖಡಾಖಂಡಿತವಾಗಿ ಹೇಳಲಾರೆ’.
ಭಾರತ ತಂಡ ಜಿಂಬಾಬ್ವೆ ಪ್ರವಾಸ ಮುಗಿದ ನಂತರ ಭಾರತಕ್ಕೆ ಮರಳಿ, ನಂತರ ಶ್ರೀಲಂಕಾ ಪ್ರವಾಸ ಕೈಗೊಳ್ಳುವುದು. ಜುಲೈ 18ರಿಂದ ತ್ರಿಕೋನ ಒಂದು ದಿನದ ಸರಣಿ ನಡೆಯಲಿದ್ದು, ನ್ಯೂಜಿಲೆಂಡ್ ತಂಡ ಕೂಡ ಆಡಲಿದೆ. ನಂತರ ಶ್ರೀಲಂಕಾದೊಟ್ಟಿಗೆ 3 ಟೆಸ್ಟ್ ಪಂದ್ಯಗಳನ್ನು ಭಾರತ ಆಡಲಿದೆ. ಶ್ರೀಲಂಕಾ ಪ್ರವಾಸಕ್ಕೆ ಜುಲೈ 8 ಅಥವಾ 9ರಂದು ಭಾರತ ತಂಡವನ್ನು ಪ್ರಕಟಿಸಲಾಗುವುದು.
ವಾರ್ತಾ ಸಂಚಯ
‘ಕುಂಬ್ಳೆ ಅಗ್ನಿಪರೀಕ್ಷೆಗಳಲ್ಲಿ ಪಾಸಾಗಬೇಕಿದೆ’ - ಜಾನ್‌ರೈಟ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications