ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡದ ಡಾ. ಜಾನ್‌ಗೆ ಅಮೆರಿಕನ್‌ ಸಂಸ್ಥೆಯ ಪುರಸ್ಕಾರ

By Staff
|
Google Oneindia Kannada News

ಧಾರವಾಡ : ಇಲ್ಲಿನ ಕಿಟ್ಟೆಲ್‌ ಕಾಲೇಜಿನ ಪ್ರಾಧ್ಯಾಪಕ ಡಾ. ಜಾನ್‌ ಬಳ್ಳಾರಿ ಅವರು ದಕ್ಷಿಣ ಕ್ಯಾಲಿಫೋರ್ನಿಯಾದ ಅಮೆರಿಕನ್‌ ಬಯೋಗ್ರಫಿಕಲ್‌ ಸಂಸ್ಥೆಯ ‘ಮ್ಯಾನ್‌ ಆಫ್‌ ದ ಇಯರ್‌- 2001’ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಧಾರವಾಡದ ರೋಟರಿ ಕ್ಲಬ್‌ನ ಸಕ್ರಿಯ ಸದಸ್ಯರಾಗಿರುವ ಡಾ. ಜಾನ್‌ ಅವರು ಕಿಟ್ಟೆಲ್‌ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಉಪನ್ಯಾಸಕರು. ಜಾನ್‌ ಅವರ ಸಮಾಜ ಸೇವೆ ಮತ್ತು ಸಂಘಟಕರಾಗಿ ಅವರ ಕರ್ತವ್ಯ ಪರತೆಯನ್ನು ಗುರುತಿಸಿ ಅಮೆರಿಕನ್‌ ಬಯೋಗ್ರಫಿಕಲ್‌ ಸಂಸ್ಥೆ ಈ ಪುರಸ್ಕಾರ ನೀಡಿದೆ. ಡಾ. ಜಾನ್‌ ಅವರು ಭಾರತದ ರಾಷ್ಟ್ರೀಯ ಕುಟುಂಬ ಯೋಜನಾ ಸಂಘದ ಉಪಾಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X