ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಗದರ್‌’ ಪ್ರದರ್ಶನ ರದ್ದು ಸರಿಯಲ್ಲ - ಶ್ಯಾಮ್‌ ಬೆನಗಲ್‌

By Staff
|
Google Oneindia Kannada News

ಮಂಗಳೂರು : ‘ಗದರ್‌’ ಹಿಂದಿ ಚಿತ್ರ ವಿರುದ್ಧ ಪ್ರತಿಭಟಿಸಿ ಪ್ರದರ್ಶನವನ್ನೇ ರದ್ದುಗೊಳಿಸಬೇಕೆನ್ನುವುದು ಸರಿಯಲ್ಲ. ಅಲ್ಲದೆ ಪ್ರತಿಭಟನೆಗಳು ನಡೆದಿವೆ ಎಂದ ಮಾತ್ರಕ್ಕೆ ಚಲನಚಿತ್ರ ಕ್ಷೇತ್ರದ ‘ಕೇಸರೀಕರಣ’ ನಡೆದಿದೆ ಎನ್ನುವುದೂ ಸಲ್ಲ ಎಂದು ಪ್ರಸಿದ್ಧ ಚಲನ ಚಿತ್ರ ನಿರ್ದೇಶಕ ಶ್ಯಾಮ್‌ ಬೆನಗಲ್‌ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಮಂಗಳೂರಿನಲ್ಲಿ ಸುದ್ದಿಗಾರರ ಬಳಿ ಮಾತನಾಡುತ್ತಿದ್ದ ಬೆನಗಲ್‌, ಗದರ್‌ ಚಿತ್ರಪ್ರದರ್ಶನವನ್ನೇ ನಿಲ್ಲಿಸಬೇಕು ಎಂದು ಆಗ್ರಹಿಸುತ್ತಿರುವವರನ್ನು ಖಂಡಿಸಿದರು. ಪ್ರತಿಭಟನೆ ವ್ಯಕ್ತ ಪಡಿಸಲು ಸಾಕಷ್ಟು ಬೇರೆ ಮಾರ್ಗಗಳಿವೆ. ಚಿತ್ರ ಪ್ರದರ್ಶನ ರದ್ದುಗೊಳಿಸುವುದೊಂದೇ ದಾರಿಯಲ್ಲ ಎಂದರು.

ಬೆನಗಲ್‌ ಪ್ರಕಾರ-

  • ಯಾವುದೇ ಜನಾಂಗದ ಸಂವೇದನೆಗೆ ನೋವುಂಟಾದಲ್ಲಿ ಕಾನೂನು ಸಮ್ಮತವಾಗಿ ಪ್ರತಿಭಟನೆ ನಡೆಸಬೇಕು.
  • ಇಂಥ ವಿಷಯಗಳನ್ನು ನೋಡಿಕೊಳ್ಳಲೆಂದೇ ಸೆನ್ಸಾರ್‌ ಬೋರ್ಡ್‌ ಇರುತ್ತದೆ. ಅಲ್ಲಿ ಪಾಸಾದ ಚಿತ್ರದ ಪ್ರದರ್ಶನ ನಿಲ್ಲಕೂಡದು.
  • ಭಾರತೀಯ ಚಲನ ಚಿತ್ರೋದ್ಯಮವು ಕೇಂದ್ರ ಸರಕಾರವನ್ನು ಅಲವಂಬಿಸಿಲ್ಲವಾದ್ದರಿಂದ ಕೇಸರೀಕರಣದ ಪ್ರಶ್ನೆಯೇ ಬರುವುದಿಲ್ಲ. ಆ ಬಗ್ಗೆ ಗೊಣಗುವುದು ಸರಿಯಲ್ಲ.
  • ಚಿತ್ರೋದ್ಯಮದಲ್ಲಿ ಕೇವಲ ಸಣ್ಣ ಪ್ರಮಾಣದ ಮಂದಿಗಷ್ಟೇ ಭೂಗತ ಜಗತ್ತಿನ ಕೈವಾಡವಿರಬಹುದು.
  • ಕನ್ನಡ ಸಿನೆಮಾ ಕ್ಷೇತ್ರಕ್ಕೆ ರಾಜ್ಯ ಸರಕಾರ ಸಾಕಷ್ಟು ಸಹಾಯ ಮಾಡಬಹುದು.
(ಮಂಗಳೂರು ಪ್ರತಿನಿಧಿಯಿಂದ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X