ಬೆಂಗಳೂರಲ್ಲಿ ಸಲಿಂಗ ಕಾಮಿಗಳ ಅಂತರಂಗ ಬಹಿರಂಗ
ಬೆಂಗಳೂರು : ಅಲ್ಲಿ ಮಾತು ಕೇಳಿಸಿಕೊಳ್ಳುತ್ತಿದ್ದ ಬಹುತೇಕರ ಗಲ್ಲದ ಮೇಲಿದ್ದ ಕೈ ಕೆಳಗಿಳಿಯಲೇ ಇಲ್ಲ. ಸಮಾಜದ ಕಟ್ಟು ಪಾಡು, ಪ್ರಮಾಣಕಗಳ ವಿರುದ್ಧ ಈಜುತ್ತಿರುವ ಲೈಂಗಿಕ ವಿಸ್ಮಯಿಗಳು ಮನಬಿಚ್ಚಿದ್ದರು. ಲೆಸ್ಬಿಯಾನ್, ಗೇ, ಹಿಜ್ಡಾ, ಲಿಂಗ ಬದಲಿಸಿಕೊಂಡವರು- ಹೀಗೆ ಕರೆಸಿಕೊಳ್ಳುವ, ಅನೇಕರ ನಗೆಪಾಟಲಿನ ಸರಕುಗಳಾಗಿರುವ ಅಪರೂಪಿಗಳ ಅಂತರಂಗ ಬಹಿರಂಗವಾಗಿತ್ತು.
ಬೆಂಗಳೂರಿನಲ್ಲಿ ಭಾನುವಾರ ನಡೆದ ಭಾರತದ ಪ್ರಥಮ ಸಲಿಂಗ ಕಾಮಿಗಳ ಸಮಾವೇಶ ಇಂತಿತ್ತು. ಹೆಸರು ಫಮಿಲ. ಹುಟ್ಟಿದ್ದು ಗಂಡಾಗಿ. ಆದರಿವತ್ತು ಮರ್ಮಾಂಗ ಬದಲಿಸಿಕೊಂಡು ಹೆಣ್ಣಾಗಿದ್ದಾರೆ. ನಾವೂ ಮನುಷ್ಯರು. ಕಾಂಕ್ಷೆಗೆ ಕಟ್ಟುಬಿದ್ದಿದ್ದೇವೆಯೇ ವಿನಃ ಯಾರನ್ನೂ ಹಾಳುಗೆಡಹಿಲ್ಲ. ನಮ್ಮನ್ನು ಬಂಧಿಸುವ ಪೊಲೀಸರ ವರ್ತನೆ ನರಕ ಸದೃಶವಾಗಿರುತ್ತದೆ. ಬೇಕಂತಲೇ ನಮ್ಮ ಮರ್ಮಾಂಗಕ್ಕೆ ಕೈ ಹಾಕುತ್ತಾರೆ. ಅವರ ಕಿರುಕುಳಕ್ಕೆ ಮಿತಿಯೇ ಇಲ್ಲ... ಫಮಿಲ ಆಡಿದ ಈ ಮುಕ್ತ ಮಾತುಗಳು ಗಲ್ಲದ ಮೇಲಿನ ಜನರ ಕೈಯನ್ನು ಇನ್ನಷ್ಟು ಬಲವಾಗಿಸಿದವು.
ಮಾನವ ಹಕ್ಕುಗಳ ಕಾಪಿಡುವ ಸಂಸ್ಥೆಗಳಿಂದ ಕೂಡ ನಮಗೆ ರಕ್ಷಣೆಯಿಲ್ಲ. ನಾವೇನೂ ತಪ್ಪು ಮಾಡುತ್ತಿಲ್ಲ. ಆದರೆ ಸಮಾಜ ದೌರ್ಜನ್ಯ ಎಸಗುತ್ತದೆ. ಮಜಾ ತೆಗೆದುಕೊಳ್ಳುತ್ತದೆ. ನಮಗೆ ಸಾಮಾಜಿಕ ಹಾಗೂ ಕಾನೂನಾತ್ಮಕ ರಕ್ಷಣೆ ಬೇಕಿದೆ ಎಂದು ಸಲಿಂಗ ಕಾಮಿ ಓವಾಯಿಸ್ ಖಾನ್ ಕೇಳಿಕೊಂಡರು.
ಸೆಕ್ಷನ್ 377ನ್ನು ಕಿತ್ತು ಹಾಕಿ : ಸುದ್ದಿಗಾರರೊಡನೆ ಮಾತಾಡಿದ ಖಾನ್, 1860ರಲ್ಲಿ ಭಾರತೀಯ ದಂಡ ಸಂಹಿತೆಯಲ್ಲಿ ಅಳವಡಿಸಿರುವ 377ನೇ ಸೆಕ್ಷನನ್ನು ತೆಗೆದು ಹಾಕಬೇಕು. ಇದರ ಪ್ರಕಾರ ನಾವು ಮಾಡುವುದು ಅಪರಾಧ. ಆದರೆ ಕಾಲ ಬದಲಾಗಿದೆ. ನಾವು ಖಂಡಿತ ತಪ್ಪು ಮಾಡುತ್ತಿಲ್ಲ. ನಮ್ಮನ್ನು ಸರ್ಕಾರ ಉಳಿಸಲಿ ಎಂದು ಅಲವತ್ತುಕೊಂಡರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications