ತಮಿಳುನಾಡಿನ ಮೇಲೆ 355 ಅಥವಾ 356 ನೇ ವಿಧಿ ಪ್ರಯೋಗ
ನವದೆಹಲಿ : ತಮಿಳುನಾಡು ವಿದ್ಯಮಾನಗಳ ಬಗ್ಗೆ ಚರ್ಚಿಸಲು ಸೋಮವಾರ ಸಂಜೆ 6.30 ಕ್ಕೆ ಸೇರುವ ಕೇಂದ್ರ ಸಂಪುಟ ಸಭೆ ತಮಿಳುನಾಡಿನ ಮೇಲೆ ಸಂವಿಧಾನದ 355 ಅಥವಾ 356 ನೇ ವಿಧಿಗಳನ್ನು ಪ್ರಯೋಗಿಸುವ ನಿರೀಕ್ಷೆಯಿದೆ.
355 ನೇ ವಿಧಿಯನ್ವಯ ಕೇಂದ್ರ ಸಚಿವರಾದ ಮುರಸೋಳಿ ಮಾರನ್ ಹಾಗೂ ಟಿ.ಆರ್. ಬಾಲು ಅವರ ಬಿಡುಗಡೆಗೆ ಕೇಂದ್ರ ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಸರ್ಕಾರ ಆದೇಶ ನೀಡಬಹುದಾಗಿದೆ. 356 ನೇ ವಿಧಿಯನ್ವಯ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬಹುದು.
ಎನ್‌ಡಿಎ ಸಮಿತಿಯ ವರದಿ ಮಾತ್ರವಲ್ಲದೆ, ಗೃಹ ಕಾರ್ಯದರ್ಶಿ ಎಂ.ಬಿ. ಕೌಶಲ್ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ವಾಜಪೇಯಿ ನೇತೃತ್ವದ ಸಂಪುಟ ಸಭೆ ಪರಿಶೀಲಿಸುವುದು. ತಮಿಳುನಾಡು ವಿದ್ಯಮಾನಗಳ ಅಧ್ಯಯನಕ್ಕಾಗಿ ಚೆನ್ನೈಗೆ ತೆರಳಿದ್ದ ಕೌಶಲ್ ನೇತೃತ್ವದ ಸಮಿತಿ ಜುಲೈ 1 ಭಾನುವಾರದ ರಾತ್ರಿ ದೆಹಲಿಗೆ ವಾಪಸ್ಸಾಗಿದ್ದು , ಪ್ರಧಾನಿಗೆ ತನ್ನ ವರದಿಯನ್ನು ಸಲ್ಲಿಸಿದೆ.
ಪ್ರಜಾಪ್ರಭುತ್ವದ ಕಗ್ಗೊಲೆ- ಜೇಟ್ಲಿ
ಜಾರ್ಜ್ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಪರಿಶೀಲಿಸಿರುವ ಕೇಂದ್ರ ಕಾನೂನು ಸಚಿವ ಅರುಣ್ ಜೇಟ್ಲಿ - ‘ತಮಿಳುನಾಡಿನ ವಿದ್ಯಮಾನಗಳು ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಬಣ್ಣಿಸಿದ್ದಾರೆ. ನಾವು ಪಡೆದಿರುವ ವರದಿಗಳಿಂದ ರಾಜ್ಯದಲ್ಲಿ ಭಯೋತ್ಪಾದಕತೆ ತಾಂಡವವಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ಜೇಟ್ಲಿ ಹೇಳಿದರು.
356 ನೇ ವಿಧಿಯನ್ನು ಯಾವಾಗ ಬಳಸಬಹುದು -
ಸಂವಿಧಾನ ತಜ್ಞ ಡಾ. ಸುಭಾಷ್ ಕಶ್ಯಪ್ ಅವರ ಪ್ರಕಾರ ಸಂವಿಧಾನದ 356 ನೇ ವಿಧಿ ಎಂಬುದೊಂದು ಬ್ರಹ್ಮಾಸ್ತ್ರ . ಎಲ್ಲ ಪ್ರಯತ್ನಗಳೂ ವಿಫಲವಾದಾಗಷ್ಟೇ 356 ನೇ ವಿಧಿಯನ್ನು ಬಳಸಬಹುದು. ದುರಾದೃಷ್ಟವಶಾತ್ ಕಳೆದ 50 ವರ್ಷಗಳಲ್ಲಿ 356 ನೇ ವಿಧಿ ಅನೇಕ ಬಾರಿ ದುರುಪಯೋಗವಾಗಿದೆ. 356 ನೇ ವಿಧಿಯನ್ನು ಪ್ರಯೋಗಿಸುವ ಮುನ್ನ 256, 257 ಹಾಗೂ 355 ನೇ ವಿಧಿಗಳನ್ನು ಬಳಸಬೇಕು ಎನ್ನುವುದು ಕಶ್ಯಪ್‌ರ ಅಭಿಮತ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications