Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ ಆಟೋ ಮುಷ್ಕರ, ಟ್ಯಾಕ್ಸಿಗೆಡಿಮ್ಯಾಂಡೋ ಡಿಮ್ಯಾಂಡು

ಬೆಂಗಳೂರು : ಸೋಮವಾರ ನಗರದ ರಸ್ತೆಗಳಲ್ಲಿ ಆಟೋಗಳು ಎಲ್ಲೋ ಅಲ್ಲೊಂದು ಇಲ್ಲೊಂದು. ಕೆಲವು ಕಡೆ ಅವುಗಳ ಸಂಚಾರಕ್ಕೂ ಇದ್ದಕ್ಕಿದ್ದಂತೆ ಸಂಚಕಾರ. ಚಾಲಕರ ಮೇಲೆ ಪೊಲೀಸರ ದೌರ್ಜನ್ಯ ವಿರೋಧಿಸಿ ಆಟೋರಿಕ್ಷಾಗಳ ಒಕ್ಕೂಟ ಸೋಮವಾರ ಸಂಪೂರ್ಣ ಬಂದ್‌ಗೆ ಕರೆ ನೀಡಿದ್ದು, ಅದು ಸಾಕಷ್ಟು ಯಶಸ್ವಿಯಾಗಿದೆ.

ಇತ್ತೀಚೆಗೆ ಎಂ.ಜಿ.ರಸ್ತೆಯಲ್ಲಿ ರಾತ್ರೋ ರಾತ್ರಿ ಕನ್ನಡ ಸಂಖ್ಯಾ ಫಲಕ ಹಾಕಿದ್ದ ಆಟೋ ಚಾಲಕನೊಬ್ಬನ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದರು. ಇದನ್ನು ವಿರೋಧಿಸಿ ತಕ್ಷಣವೇ ಹಿಂಡುಗಟ್ಟಲೆ ಆಟೋಗಳು ರಸ್ತೆ ರೋಕೋ ಮಾಡಿದ್ದವು. ಈ ಘಟನೆ ನಂತರ ಇಂಥಾ ಪ್ರಕರಣಗಳು ಮರುಕಳಿಸಿದವು. ಈ ಹಿನ್ನೆಲೆಯಲ್ಲಿ ಪೊಲೀಸರ ಗೋಳು ಹೊಯ್ದುಕೊಳ್ಳುವ ಕ್ರಮ ವಿರೋಧಿಸಿ ಆಟೋ ಚಾಲಕರು ಮುಷ್ಕರ ನಡೆಸಿದ್ದಾರೆ.

ಮುಷ್ಕರದ ಕಾರಣ ಎಲ್ಲೋ ಅಲ್ಲೊಂದು ಇಲ್ಲೊಂದು ಆಟೋಗಳು ಕಾಣಿಸುತ್ತಿವೆ. ಅವುಗಳ ಚಾಲಕರು ಬಾಯಿಗೆ ಬಂದಂತೆ ಹಣ ಸುಲಿಯುತ್ತಿದ್ದಾರೆ. ಇನ್ನು ಕೆಲವು ಕಡೆ ಓಡಾಡುತ್ತಿರುವ ಆಟೋಗಳನ್ನು ತಡೆಗಟ್ಟಿ, ಮುಷ್ಕರದಲ್ಲಿ ಭಾಗವಹಿಸುವಂತೆ ಒತ್ತಾಯಿಸುವುದೂ ಉಂಟು. ಮುಂಜಾನೆಯಂತೂ ಆಟೋಗಳನ್ನೇ ನೆಚ್ಚಿಕೊಂಡಿರುವ ಮಂದಿಗೆ ದೊಡ್ಡ ಪೆಟ್ಟು. ಪರಿಣಾಮ ಕಚೇರಿಗೆ ಲೇಟು. ಆಟೋಗಳ ಮುಷ್ಕರದಿಂದ ಟ್ಯಾಕ್ಸಿಗಳಿಗೆ ಸೋಮವಾರ ಎಲ್ಲಿಲ್ಲದ ಡಿಮ್ಯಾಂಡು.

ಇದು ಕಾನೂನು ಬಾಹಿರ : ಈ ಮುಷ್ಕರದ ಬಗ್ಗೆ ಪೊಲೀಸ್‌ ಕಮಿಷನರ್‌ ಟಿ.ಮಡಿಯಾಳ್‌ ಪ್ರತಿಕ್ರಿಯಿಸಿರುವುದು ಹೀಗೆ- ಆಟೋ ಚಾಲಕರೊಂದಿಗೆ ಸಹಕರಿಸುವುದಾಗಿ ಪೊಲೀಸ್‌ ಇಲಾಖೆ ಭರವಸೆ ಕೊಟ್ಟಿದ್ದರೂ ಆಟೋ ಚಾಲಕರು ಮುಷ್ಕರ ನಡೆಸುತ್ತಿರುವುದು ಕಾನೂನು ಬಾಹಿರ. ಅವರ ಅತಿರೇಕಕ್ಕೆ ಸೊಪ್ಪು ಹಾಕುವುದರ ಬದಲು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಜಂಟಿಯಾಗಿ ಅಶುದ್ಧ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸಿ ಸಂಚರಿಸುವ ಆಟೋ ಚಾಲಕರಿಗೆ ತಕ್ಕ ಶಾಸ್ತಿ ಮಾಡಲಿವೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+