Get Updates
Get notified of breaking news, exclusive insights, and must-see stories!

ಅಮರನಾಥ ದೇಗುಲ ಆಡಳಿತ ಮಂಡಳಿಗೆ ವೀರೇಂದ್ರ ಹೆಗ್ಗಡೆ ನೇಮಕ

ಬೆಂಗಳೂರು : ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಪವಿತ್ರ ಪುಣ್ಯಕ್ಷೇತ್ರ ಶ್ರೀ ಅಮರನಾಥ ದೇವಾಲಯದ ಆಡಳಿತ ಸಮಿತಿಯ ಗೌರವ ಸದಸ್ಯರನ್ನಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ನೇಮಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾದ ಗಿರೀಶ್‌ಚಂದ್ರ ಸಕ್ಸೇನಾ ಅವರು ಹೆಗ್ಗಡೆ ಅವರನ್ನು ಸಮಿತಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಗುಹಾಂತರ ದೇವಾಲಯದಲ್ಲಿ ಉದ್ಭವಿಸುವ ಹಿಮಲಿಂಗ ದರ್ಶನಕ್ಕಾಗಿ ಅಮರನಾಥಕ್ಕೆ ಹೋಗಬಯಸುವ ಯಾತ್ರಾರ್ಥಿಗಳು ಪರಿಚಯ ಪತ್ರ ಹಾಗೂ ಮಾಹಿತಿಗಳನ್ನು ಧರ್ಮಸ್ಥಳದ ಕಾರ್ಯಾಲಯದಿಂದ ಪಡೆಯಬಹುದಾಗಿದೆ.

ಅಮರನಾಥ ದೇವಾಲಯದ ಬಾಗಿಲು ತೆಗೆಯುವುದು ಯಾವಾಗ, ಇಲ್ಲಿಗೆ ಯಾವಾಗ ಹೇಗಬೇಕು, ಹೇಗೆ ಹೋಗಬೇಕು ಎಂಬ ಎಲ್ಲ ವಿವರಗಳೂ ಇಲ್ಲಿ ಲಭ್ಯ. ಹೆಚ್ಚಿನ ವಿವರಗಳನ್ನು ಧರ್ಮಸ್ಥಳ ಕಾರ್ಯಾಲಯದ ದೂರವಾಣಿ ಸಂಖ್ಯೆ 08256- 77144 ನಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಜಮ್ಮು ವರದಿ: ಬಿಗಿ ರಕ್ಷಣಾ ವ್ಯವಸ್ಥೆಯ ನಡುವೆ ಹಿಂದೂ ಯಾತ್ರಾರ್ಥಿಗಳು ಸೋಮವಾರ ಹಿಮಾಲಯದ ಗುಹಾಂತರ ದೇವಾಲಯ ಅಮರನಾಥ್‌ಗೆ ಯಾತ್ರೆ ಆರಂಭಿಸಿದರು. ಸುಮಾರು 3000 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಸೋಮವಾರ ಮೊದಲ ಹಂತದ ಪ್ರಯಾಣ ಬೆಳೆಸಿದರು.

ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ 14,000 ಅಡಿ ಎತ್ತರದಲ್ಲಿರುವ ಅಮರನಾಥ ಗುಹೆಯ ಹಿಮಲಿಂಗ ದರ್ಶನಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ. ಶಿವನಾಮ ಸಂಕೀರ್ತನೆ ಮಾಡುತ್ತಾ ಭಕ್ತಾದಿಗಳು ಪೆಹಲ್ಗಾಮ್‌ನಿಂದ ಸುಮಾರು 46 ಕಿ.ಮೀಟರ್‌ ನಡೆದೇ ಸಾಗುತ್ತಾರೆ. ಮತ್ತೆ ಕೆಲವರು ಚಂದನವಾರಿಯವರೆಗೆ ಪುಟ್ಟ ವ್ಯಾನ್‌ನಲ್ಲಿ ತೆರಳಿ ಅಲ್ಲಿಂದ ನಡೆದು ದೇವರ ದರ್ಶನ ಮಾಡುತ್ತಾರೆ. ಪುಟ್ಟ ಕುದುರೆಗಳನ್ನೇರಿ ಅಮರನಾಥನ ದರ್ಶನಕ್ಕೆ ಹೋಗುವವರ ಸಂಖ್ಯೆಯೂ ಕಡಿಮೆ ಏನಿಲ್ಲ.

ಎಲ್ಲ ಯಾತ್ರಾರ್ಥಿಗಳನ್ನೂ ಹಾಗೂ ಅವರ ಲಗ್ಗೇಜುಗಳನ್ನು ಕೂಲಂಕಷವಾಗಿ ಪರೀಕ್ಷಿಸಿದ ನಂತರವೇ ದೇವಾಲಯದ ದರ್ಶನಕ್ಕೆ ಬಿಡಲಾಗುತ್ತದೆ. ಸೋಮವಾರ ಕಾಶ್ಮೀರದ ಪ್ರವಾಸೋದ್ಯಮ ಸಚಿವ ಸಕೀನಾ ಇಟ್ಟೋ ಅವರು ಪ್ರಥಮ ತಂಡದ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿದರು.

ಭಂ ಭಂ ಬೋಲೆ, ಜೈ ಬೋಲೆ ಶಂಕರ್‌ ಎನ್ನುತ್ತಾ ಭಕ್ತರು ಅಮರನಾಥನ ಸನ್ನಿಧಿಯತ್ತ ಹೆಜ್ಜೆ ಹಾಕಿದರು. ಆಗಸ್ಟ್‌ 4ನೇ ತಾರೀಖಿನವರೆಗೆ ಈ ಪವಿತ್ರ ಯಾತ್ರೆ ನಡೆಯಲಿದೆ. ಗಡಿ ಭದ್ರತಾ ಪಡೆ, ಭಾರತೀಯ ಸೈನ್ಯಪಡೆಯ ಸಾವಿರಾರು ಯೋಧರ ಬಿಗಿ ರಕ್ಷಣೆಯಲ್ಲಿ ಈ ಯಾತ್ರೆ ನಡೆಯಲಿದೆ.

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+