Get Updates
Get notified of breaking news, exclusive insights, and must-see stories!

ಕಳ್ಳ- ಪೊಲೀಸ್‌ ಆಟ: ಅಣ್ಣ ಸಿಡಿಸಿದ ಗುಂಡಿಗೆ ತಮ್ಮನ ಬಲಿ

ಬೆಂಗಳೂರು: ಅಣ್ಣತಮ್ಮಂದಿರಿಬ್ಬರು ಲೋಡ್‌ ಆಗಿದ್ದ ಗನ್‌ ಹಿಡಿದು ಕಳ್ಳ ಪೊಲೀಸ್‌ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ತಮ್ಮ ಸಾವಿಗೀಡಾದ ಘಟನೆ ಯಲಹಂಕ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.

ಯಲಹಂಕದ ಅಟ್ಟೂರು ಬಡಾವಣೆಯಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ ವೆಂಕಟೇಶ್‌ ಅವರು ಪುತ್ರ ಮಣಿಕುಮಾರ್‌ (10) ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಬಂದೂಕು ಅಟ್ಟೂರು ಗ್ರಾಮದ ದಲಿತ ಸಂಘರ್ಷ ಸಮಿತಿ ಸಂಚಾಲಕ ಆನಂದ್‌ ಕುಮಾರ್‌ ಅವರಿಗೆ ಸೇರಿದ್ದಾಗಿದೆ.

ಶುಕ್ರವಾರ ರಾತ್ರಿ ಮನೆಯ ಆವರಣದಲ್ಲಿ ಏನೋ ಸದ್ದಾದ ಕಾರಣ ಆನಂದ್‌ ತಮ್ಮ ಡಬ್ಬಲ್‌ ಬ್ಯಾರಲ್‌ ಗನ್‌ ಹಿಡಿದು ಹೊರಬಂದು, ಯಾರು ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ಮನೆಗೆ ಹೋಗಿ ಮಲಗಿದ್ದರು. ಆದರೆ ಗನ್‌ನ ಸೇಫ್ಟೀ ಲಾಕ್‌ ಮಾಡುವುದನ್ನು ಮರೆತರು.

ಬೆಳಗ್ಗೆ ತಮ್ಮ ಪತ್ನಿಯನ್ನು ಬಸ್‌ ನಿಲ್ದಾಣಕ್ಕೆ ಬಿಡುಲು ಹೋಗಿದ್ದಾಗ ಆನಂದ್‌ ಸೋದರ ವೆಂಕಟೇಶ್‌ ಅವರ ಪುತ್ರ ಮಣಿಕುಮಾರ್‌ ಹಾಗೂ ರವಿಕುಮಾರ್‌ ಈ ಗನ್‌ ತೆಗೆದುಕೊಂಡು ವೀರಪ್ಪನ್‌ - ಪೊಲೀಸ್‌ ಆಟವಾಡುತ್ತಿದ್ದರು. ಹುಡುಗಾಟ - ದೊಡ್ಡಾಟ ಆಯ್ತು. 13 ವರ್ಷದ ರವಿಕುಮಾರ್‌ ಕೈಯಲ್ಲಿದ್ದ ಬಂದೂಕಿನಿಂದ ಸಿಡಿದ ಗುಂಡು ಮಣಿಕುಮಾರ್‌ನನ್ನು ಬಲಿತೆಗೆದುಕೊಂಡಿತು ಎಂದು ಪೊಲೀಸರು ಹೇಳಿದ್ದಾರೆ.

ದಿನವೂ ಬೆಳಗ್ಗೆ ಎದ್ದ ಕೂಡಲೇ ಗನ್‌ನಿಂದ ಗುಂಡು ತೆಗೆದಿರಿಸುತ್ತಿದ್ದ ಆನಂದ್‌, ಶಾಲಾ ಶಿಕ್ಷಕಿಯಾದ ತಮ್ಮ ಪತ್ನಿಯನ್ನು ಬಸ್‌ನಿಲ್ದಾಣಕ್ಕೆ ಬಿಡುವ ಅವಸರದಲ್ಲಿ ಶನಿವಾರ ಗುಂಡು ತೆಗೆದಿಡಲು ಮರೆತಿದ್ದರು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+