ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ. ಬಿ.ಜಿ. ಬೆನಕಪ್ಪ ಅವರಿಗೆ ಡಾ. ಬಿ.ಸಿ. ರಾಯ್‌ ಪ್ರಶಸ್ತಿ

By Staff
|
Google Oneindia Kannada News

ನವದೆಹಲಿ : ವೈದ್ಯಕೀಯ ಮತ್ತು ವೈದ್ಯ ವಿಜ್ಞಾನ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಅರ್ಹ ವೈದ್ಯರಿಗೆ ಭಾರತೀಯ ವೈದ್ಯಕೀಯ ಮಂಡಳಿ ಕೊಡಮಾಡುವ ಡಾ. ಬಿ.ಸಿ. ರಾಯ್‌ ಪ್ರಶಸ್ತಿಗೆ ಬೆಂಗಳೂರಿನ ಹೆಸರಾಂತ ಮಕ್ಕಳ ತಜ್ಞ ಡಾ. ಬಿ.ಜಿ. ಬೆನಕಪ್ಪ ಆಯ್ಕೆಯಾಗಿದ್ದಾರೆ.

2000 ಸಾಲಿನ ಈ ಪ್ರಶಸ್ತಿಗಾಗಿ ಭಾರತದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ 20 ತಜ್ಞ ವೈದ್ಯರನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೈದ್ಯ ಮದುರೈನ ಜಿ. ವೆಂಕಟಸ್ವಾಮಿ ಮತ್ತು ಚಂಡೀಗಢದ ಡಾ. ಶಶಾಂಕ ಮೋಹನ್‌ ಬೋಸ್‌ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಖ್ಯಾತ ನಾಮರಾಗಿದ್ದಾರೆ.

ವೈದ್ಯ ಹಾಗೂ ವೈದ್ಯ ವಿಜ್ಞಾನ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ ಭಾರತೀಯ ವೈದ್ಯರಿಗೆ ಭಾರತರತ್ನ ಡಾ. ಬಿ.ಸಿ. ರಾಯ್‌ ಅವರ ಹುಟ್ಟು ಹಬ್ಬದ ದಿನ ಅವರ ಹೆಸರಿನಲ್ಲೇ ನೀಡಲಾಗುವ ಈ ಪ್ರಶಸ್ತಿ ವೈದ್ಯಕೀಯ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.

ಶುಭಾಶಯ: ವೈದ್ಯರ ದಿನಾಚರಣೆ ಅಂಗವಾಗಿ ರಾಜ್ಯದ ಸಮಸ್ತ ವೈದ್ಯರಿಗೆ ವೈದ್ಯ ಶಿಕ್ಷಣ ಸಚಿವೆ ನಫೀಸಾ ಫಜಲ್‌ ಶುಭಾಷಯ ಕೋರಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X