ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರುಣಾನಿಧಿ ಬಂಧನ : ಪ್ರಧಾನಿ ವಾಜಪೇಯಿ ದಿಗ್ಭ್ರಮೆ

By Staff
|
Google Oneindia Kannada News

*ಪಿ.ಜಯರಾಂ

ನವದೆಹಲಿ : ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಬಂಧನ ಹಾಗೂ ಕೇಂದ್ರ ಸಚಿವರ ಮೇಲಿನ ಪೊಲೀಸ್‌ ದೌರ್ಜನ್ಯದ ಬಗೆಗೆ ಪ್ರಧಾನಿ ವಾಜಪೇಯಿ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಶನಿವಾರ ಮೊದಲ ಜಾವ ಬೆಳಗ್ಗೆ 2 ಗಂಟೆ ಸುಮಾರಿಗೆ ಗೋಪಾಲಪುರಂ ನಿವಾಸದಿಂದ ಕರುಣಾನಿಧಿ ಅವರನ್ನು ಪೊಲೀಸರು ಒರಟಾಗಿ ಹೊತ್ತೊಯ್ದ ಪ್ರಕರಣವನ್ನು ಪ್ರಧಾನಿ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಅಧಿಕೃತ ವಕ್ತಾರರು ಹೇಳಿದ್ದಾರೆ. ಕೇಂದ್ರ ಸಚಿವರಾದ ಮುರಸೋಳಿ ಮಾರನ್‌ ಹಾಗೂ ಟಿ.ಆರ್‌. ಬಾಲು ಅವರ ಮೇಲೆ ನಡೆದಿರುವ ಪೊಲೀಸ್‌ ಹಲ್ಲೆಯನ್ನು ಪ್ರಧಾನಿ ಖಂಡಿಸಿದ್ದಾರೆಂದೂ ವಕ್ತಾರ ಅಶೋಕ್‌ ಟಂಡನ್‌ ತಿಳಿಸಿದ್ದಾರೆ.

ಟಿವಿಯಲ್ಲಿ ಪೊಲೀಸ್‌ ಆತಿಥ್ಯ ವೀಕ್ಷಿಸಿದ ವಾಜಪೇಯಿ
ಬೆಳಗ್ಗೆ 4 ಗಂಟೆ ವೇಳೆಗೆ ಕರುಣಾನಿಧಿ ಬಂಧನದ ಪ್ರಕರಣವನ್ನು ತಿಳಿದ ಪ್ರಧಾನಿ, ಕರುಣಾನಿಧಿ ಅವರನ್ನು ಪೊಲೀಸರು ಎಳೆದೊಯ್ಯುವುದನ್ನು ಹಾಗೂ ಕೇಂದ್ರ ಸಚಿವರಿಗೆ ಪೊಲೀಸ್‌ ಆತಿಥ್ಯದ ದೃಶ್ಯಗಳನ್ನು ಟಿವಿಯಲ್ಲಿ ವೀಕ್ಷಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ, ಪ್ರಕರಣದ ಬಗ್ಗೆ ಸಮಗ್ರ ವರದಿ ನೀಡುವಂತೆ ಹಾಗೂ ಪ್ರತಿ ಕ್ಷಣದ ಬೆಳವಣಿಗೆಗಳನ್ನು ವರದಿ ಮಾಡುವಂತೆ ತಮಿಳುನಾಡು ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ ಎಂದು ಅಶೋಕ್‌ ಹೇಳಿದ್ದಾರೆ.

ವಿಧಾನಸಭೆಯ ಮಾಜಿ ಸ್ಪೀಕರ್‌ ಸೇರಿದಂತೆ ತಮಿಳುನಾಡಿನಲ್ಲಿ ಡಿಎಂಕೆ ನಾಯಕರನ್ನು ಬಂಧಿಸುತ್ತಿರುವ ವಿಷಯದ ಬಗ್ಗೆ ಮಾಹಿತಿ ಹೊಂದಿರುವ ಪ್ರಧಾನಿ, ಮುಖ್ಯಮಂತ್ರಿ ಜಯಲಲಿತಾ ಅವರನ್ನು ಸಂಪರ್ಕಿಸುವ ತೀವ್ರ ಪ್ರಯತ್ನದಲ್ಲಿದ್ದಾರೆ ಎಂದೂ ಟಂಡನ್‌ ತಿಳಿಸಿದ್ದಾರೆ.

(ಐಎಎನ್‌ಎಸ್‌)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X