ಕಂಪ್ಯೂಟರ್ ವಿದ್ಯಾರ್ಥಿಯಾಗಬೇಕೆ?
ಹೈದರಾಬಾದ್ : ಐಟಿ ಬೂಮು. ಹೆಜ್ಜೆಗೊಂದು ಸವಾಲು. ಬಿಟ್ಟುಕೊಡಲಾರಿರಿ ಹಾಗಂತ. ಯಾಕೆಂದರೆ ಕಲಿಕೆ ಇಲ್ಲಿ ಅನಂತ. ಕೈತುಂಬಾ ಸಂಪಾದಿಸುತ್ತಲೇ ವಿದ್ಯಾರ್ಥಿಯಾಗಲೇಬೇಕು, ಇದು ಸತತ. ಐಟಿ ತುಡಿತ ಇರುವ ಪಕ್ಕಾ ಪರಿಣತರೂ ಯಾವತ್ತೂ ಅಭಿಜ್ಞರಲ್ಲ. ದಿನಕ್ಕೊಂದು ಹೊಸ ಸಾಫ್ಟ್‌ವೇರ್. ಒಂದೇ ವಾರದಲ್ಲಿ ಅದರ ಇನ್ನೊಂದು ಹೊಸ ವರ್ಶನ್.
ಮಿದುಳಿಗೆ ಬಿಡುವೇ ಇಲ್ಲದ ಇಂಥಾ ನಿತ್ಯ ವ್ಯಾಯಾಮಕ್ಕೆ ನೀವು ಮನಸ್ಸೇನೋ ಮಾಡಿದ್ದೀರಿ. ಆದರೆ ಬಗಲಲ್ಲೇ ಇರುವ ಸಹೋದ್ಯೋಗಿ ಎಲ್ಲಿಗೋ ಜಿಗಿದು ಬಿಟ್ಟಿರುತ್ತಾನೆ. ಅರೆ, ಅವ ಹೇಗೆ ಕಲಿತ ? ಸದಾ ನನ್ನ ಪಕ್ಕದಲ್ಲೇ ಕೂರುತ್ತಿದ್ದನಲ್ಲ ಅನಿಸುವುದು ಸಹಜ. ನೆನಪಿಡಿ, ಆತ ನಿಮ್ಮಂತೆ ಕೆಲಸದ ರುಟೀನಿನಲ್ಲಿ ಕಳೆದು ಹೋಗಿಲ್ಲ. ಚಿಂತೆ ಬೇಡ, ಇನ್ನೂ ಕಾಲ ಮಿಂಚಿಲ್ಲ. ಕುಂತಲ್ಲೇ ವಿದ್ಯಾರ್ಥಿಯಾಗುವ ಠರಾವು ಮಾಡಿ. ಇಲ್ಲಿ ಓದಿ...
ವಿದ್ಯಾರ್ಥಿಯಾಗ ಬನ್ನಿ : ಇಂಡಿಯಾ ಲರ್ನಿಂಗ್ ಕಂಪನಿ ಲಿಮಿಟೆಡ್ (ಐಸಿಐಎಲ್) ಹೊಸ ಹೊಸ ಕೋರ್ಸುಗಳ ಕಲಿಸುತ್ತದೆ. ವಯೋಮಾನದ ಮಿತಿಯೇನೂ ಇಲ್ಲ. ಶಾಲೆ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳೇ ಆಗಬೇಕೆಂದೇನೂ ಇಲ್ಲ. ನೀವು ಯಾವುದೇ ಆಫೀಸರ್ ಅಥವಾ ಕಾರ್ಪೊರೇಟ್ ಆಗಿದ್ದರೂ ಸರಿ. ಕಂಪನಿ ಕಲಿಸಲು ಸೈ. ಕ್ಯೂ ನಿಲ್ಲಬೇಕಿಲ್ಲ. ಸೀಟು ಸಿಕ್ಕದಿದ್ದರೆ... ಅನ್ನುವ ಆತಂಕ ಇಲ್ಲವೇ ಇಲ್ಲ. ಹ್ಞಾಂ, ಹಾಗಂತ ಇದು ಕೇವಲ ಹಣ ಮಾಡಲು ಬುರ್ನಾಸು ಕೋರ್ಸುಗಳ ಹೇಳುವುದಿಲ್ಲ. ದೇಶದ ಕೆಲವು ಹೆಸರು ಮಾಡಿರುವ ವಿಶ್ವ ವಿದ್ಯಾಲಯಗಳ ಒಡಂಬಡಿಕೆಯಡಿ ಕೆಲವು ಕೋರ್ಸುಗಳು ಇಲ್ಲುಂಟು. ಅಷ್ಟೇ ಅಲ್ಲ, ಪ್ರಸಿದ್ಧ ಸಂಸ್ಥೆಗಳೂ ಕಂಪನಿಯಾಟ್ಟಿಗೆ ಕೈಜೋಡಿಸಿವೆ.
ಏನೆಲ್ಲಾ ಕಲಿಯಬಹುದು ಗೊತ್ತೆ ? : ಮ್ಯಾನೇಜ್‌ಮೆಂಟ್‌ನಿಂದ ಹಿಡಿದು ಕ್ಯಾಪಿಟಲ್ ಮಾರ್ಕೆಟ್ಸ್, ಕಾನೂನು, ವಿಮೆ, ವಿತ್ತ ಪರಿಚಯ, ಎಂಜಿನಿಯರಿಂಗ್ ಹಾಗೂ ಸಾಫ್ಟ್ ತಂತ್ರ ಮೊದಲಾದ ಕೋರ್ಸುಗಳು ನಿಮ್ಮ ಆಯ್ಕೆಗಾಗಿ ಕಾದಿವೆ. ಈ ಮೂಲಕ ಕೋರ್ಸುಗಳು ನಾನ್ ಐಟಿ ವಲಯವನ್ನೂ ಕಟ್ಟಿಕೊಡಲಿವೆ. ಪ್ರಮಾಣ ಪತ್ರ ಖಂಡಿತ ಕೆಲಸಕ್ಕೆ ಬಾರದ್ದಲ್ಲ. ನೋಂದಾಯಿತ ಸಂಸ್ಥೆಗಳ ಮುದ್ರೆ ಅವುಗಳ ಖಾತ್ರಿಗೆ ಸಿದ್ಧ. ಕೆಲಸದಲ್ಲಿ ನೀವು ಬೆನ್ನು ತಟ್ಟಿಸಿಕೊಳ್ಳುವುದರ ಜೊತೆಗೆ ಹೊಸದಾಗಿ ಕಲಿತ ಹೆಮ್ಮೆ ನಿಮ್ಮದಾಗಲಿದೆ.
www.atlearn.com ಕ್ಲಿಕ್ಕಿಸಿ. ದಾರಿ ತಾನಾಗೇ ತೋರಲಿದೆ. ಅರ್ಜಿ ಹಾಕುವುದು, ಫೀಸು ಕಟ್ಟುವುದು, ಪಾಠ ಕೇಳುವುದು, ಅನುಮಾನ ಹೇಳುವುದು, ಪರಿಹಾರ ಪಡೆಯುವುದು, ಸೃಜನಶೀಲತೆ ಮೆರೆಯುವುದು, ವಾದ- ಚರ್ಚೆ , ಯೋಜನೆ ಎಲ್ಲಾ ಆನ್‌ಲೈನ್ ಮೂಲಕ; ಕುಂತಲ್ಲೇ. ನೀವು ಮನಸ್ಸು ಮಾಡಬೇಕಷ್ಟೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications