ಹಾರ್ಡ್‌ವೇರ್ ಮೇಲಿನ ಸುಂಕ ಇಳಿಸಿ, ತೆರಿಗೆ ರದ್ದು ಮಾಡಿ- ಅಜೀಂ
ಬೆಂಗಳೂರು : ಐಟಿಯಲ್ಲಿ ನಾವು ಹೋಗುತ್ತಿರುವ ವೇಗಕ್ಕೆ ಸ್ಪಂದಿಸಲು, ಹಾರ್ಡ್‌ವೇರ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿಶತ 16ರಿಂದ 8ಕ್ಕೆ ಇಳಿಸಬೇಕು ಹಾಗೂ ಪ್ರತಿಶತ 4 ಇರುವ ಮಾರಾಟ ತೆರಿಗೆಯನ್ನು ರದ್ದು ಮಾಡಬೇಕು ಎಂದು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
‘ಐಟಿ ಉತ್ಪನ್ನಗಳ ಸವಾಲು ಮತ್ತು ಅವಕಾಶ’ ಎಂಬ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಶುಕ್ರವಾರ ಅವರು ಮಾತಾಡುತ್ತಿದ್ದರು. ಭಾರತ ವಿಶ್ವದ ಐಟಿ ಮಹಾಶಕ್ತಿಯಾಗಬೇಕು ಎಂಬ ಪ್ರಧಾನಿ ವಾಜಪೇಯಿ ಮಾತು ನಿಜವಾಗಬೇಕಾದರೆ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್ ಎರಡೂ ಕ್ಷೇತ್ರಗಳು ಬೆಳೆಯಬೇಕು. 2008ರ ಹೊತ್ತಿಗೆ ಭಾರತ 87 ಶತಕೋಟಿ ಡಾಲರ್ ಬೆಲೆಯ ಸಾಫ್ಟ್‌ವೇರ್ ರಫ್ತು ಮಾಡುವ ಗುರಿಯಿದೆ. ಇದು ಈಡೇರಲು 50 ಶತಕೋಟಿ ಡಾಲರ್ ಬೆಲೆಯ ಹಾರ್ಡ್‌ವೇರ್‌ಗಳು ಬೇಕು ಎಂದು ಪ್ರೇಂಜಿ ವಿವರಿಸಿದರು.
ಚೀನಾ, ಇಸ್ರೇಲ್ ನಮಗೆ ಮಾದರಿಯಾಗಲಿ : ಹಾರ್ಡ್‌ವೇರ್ ಕ್ಷೇತ್ರದಲ್ಲಿ ಆಮದು ರಕ್ಷಣೆ ನಮಗೆ ಬೇಕಿಲ್ಲ. ಚೀನಾ ಮತ್ತು ಇಸ್ರೇಲ್‌ಗಳಿಂದ ಪಾಠ ಕಲಿತುಕೊಳ್ಳಬೇಕು. ಪ್ರಸ್ತುತ ಭಾರತದ ಹಾರ್ಡ್‌ವೇರ್ ಉದ್ಯಮದ ವಹಿವಾಟು ಕೇವಲ 2.5 ಶತಕೋಟಿ ಡಾಲರ್ ಇದೆ. ಇದನ್ನು 6 ಶತಕೋಟಿ ಡಾಲರ್‌ಗೆ ಏರಿಸಿಕೊಳ್ಳಬೇಕು. ಪರ್ಸನಲ್ ಕಂಪ್ಯೂಟರ್ ಮಾರಾಟ ಈಗಿರುವ 17 ಲಕ್ಷದಿಂದ 36 ಲಕ್ಷದಷ್ಟಾಗಬೇಕು. ನಮ್ಮ ದೇಶದ ಇಂಟರ್ನೆಟ್ ಬಳಕೆದಾರರು 25 ಲಕ್ಷ ಇದ್ದಾರೆ. ಇದು 1.1 ಕೋಟಿಗೆ ಏರಬೇಕು. ಹೀಗಾದಲ್ಲಿ ಮಾತ್ರ ನಾವು ಚೀನಾ ಜೊತೆ ಪೋಟಿಗೆ ಇಳಿಯಲು ಸಾಧ್ಯ ಎಂದರು.
ಅಮೆರಿಕೆಯ ಆರ್ಥಿಕ ವಿಗತಿಯಿಂದ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಯಾವುದೇ ಪೆಟ್ಟಿಲ್ಲ. ನಮ್ಮ ಸಾಫ್ಟ್‌ವೇರ್ ರಫ್ತಿನಲ್ಲಿ ಈ ವರ್ಷ ಶೇ.45ಕ್ಕೂ ಹೆಚ್ಚು ಪ್ರಗತಿಯಾಗಲಿದೆ. ದೇಶೀ ಮಾರುಕಟ್ಟೆಯ ವಹಿವಾಟು ಕೂಡ ಸಾಕಷ್ಟು ವೃದ್ಧಿಸಲಿದೆ ಎಂದು ಅಜೀಂ ಪ್ರೇಂಜಿ ಆಶಾವಾದ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications