Get Updates
Get notified of breaking news, exclusive insights, and must-see stories!

ಪಾಕಿಸ್ತಾನದಲ್ಲಿ ಹಾಡಲಿರುವ ‘ಭಾರತ ರತ್ನ’ ಲತಾ ಮಂಗೇಶ್ಕರ್‌!

ಮುಂಬಯಿ : ಪಾಕಿಸ್ತಾನದ ಸಂಗೀತಾಭಿಮಾನಿಗಳು ಈ ಸುದ್ದಿಯಿಂದ ರೋಮಾಂಚಿತರಾಗಿ ಪುಳಕಿತರಾಗುವುದು ಖಚಿತ. ಪಾಕಿಸ್ತಾನದ ನೂತನ ಅಧ್ಯಕ್ಷ ಮುಷರ್ರಫ್‌ ಭಾರತಕ್ಕೆ ಬರುವ ದಿನ ಹತ್ತಿರವಾಗುತ್ತಿದ್ದಂತೆಯೇ, ಸಂತೋಷದ ಸುದ್ದಿಯಾಂದು ಹೊರಬಿದ್ದಿದೆ. ಲತಾ ಮಂಗೇಶ್ಕರ್‌ ಪಾಕಿಸ್ತಾನದಲ್ಲಿ ಹಾಡಲಿದ್ದಾರೆ!

ಲತಾ ಪಾಕ್‌ನಲ್ಲಿ ಹಾಡುವ ವಿಷಯವನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ (ಪಿಸಿಬಿ) ಮಾರ್ಕೆಟಿಂಗ್‌ ಡೈರೆಕ್ಟರ್‌ ಜಹೀದ್‌ ಬಶೀರ್‌ ಖಚಿತಪಡಿಸಿದ್ದಾರೆ. ಲತಾ ಅವರ ಸೋದರ ಸಂಬಂಧಿ ಯೋಗೇಶ್‌ ಅವರೊಂದಿಗೆ, ಈಗಾಗಲೇ ಮಾತುಕತೆ ನಡೆಸಿರುವ ಜಹೀದ್‌ ಧನಾತ್ಮಕ ಪ್ರತಿಕ್ರಿಯೆಯನ್ನೂ ಪಡೆದಿದ್ದಾರೆ.

ಪ್ರಸ್ತುತ ಯುರೋಪ್‌ ಪ್ರವಾಸದಲ್ಲಿರುವ ಲತಾ ಜುಲೈ ಮೊದಲ ವಾರದ ಹೊತ್ತಿಗೆ ಭಾರತಕ್ಕೆ ವಾಪಸ್ಸಾಗುವ ನಿರೀಕ್ಷೆಯಿದೆ. ತಕ್ಷಣವೇ ಪಾಕಿಸ್ತಾನದಲ್ಲಿ ಹಾಡಲಿಕ್ಕಾಗಿ ಲತಾ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗುವುದು. ಕರಾಚಿ, ಲಾಹೋರ್‌ ಹಾಗೂ ರಾವಲ್ಪಿಂಡಿಗಳಲ್ಲಿ ಲತಾ ಕಾರ್ಯಕ್ರಮಗಳು ನಡೆಯುವ ಸಂಭವವಿದೆ. ಏನೇ ಆಗಲಿ, ಈ ಸಾರಿ ನಮ್ಮ ಆಹ್ವಾನವನ್ನು ಲತಾ ಮನ್ನಿಸುವುದು ಖಚಿತ ಎನ್ನುತ್ತಾರೆ ಜಹೀದ್‌.

ಉಭಯ ದೇಶಗಳ ನಡುವಣ ಸಾಂಸ್ಕೃತಿಕ ಬಾಂಧವ್ಯದ ಸುಧಾರಣೆಗೆ ಲತಾ ಭೇಟಿ ಸಹಾಯಕವಾಗುತ್ತದೆಂದು ನಂಬಿದ್ದೇನೆ. ಅವರ ಕಚೇರಿಗಳಿಂದ ಸಂಗ್ರಹವಾಗುವ ಹಣವನ್ನು ಪಾಕ್‌ ಕ್ರಿಕೆಟ್‌ನ ಅಭಿವೃದ್ಧಿಗೆ ಬಳಸಲಾಗುವುದು ಎನ್ನುತ್ತಾರೆ ಜಹೀದ್‌.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+