ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ಭ್ರಷ್ಟ ರಾಷ್ಟ್ರಗಳ ಯಾದಿಯಲ್ಲಿ ಭಾರತಕ್ಕೆ 72ನೇ ರ್ಯಾಂಕ್‌

By Staff
|
Google Oneindia Kannada News

ನವದೆಹಲಿ : ಜಗತ್ತಿನ ಅತಿ ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಸ್ಥಾನವೆಷ್ಟು ? ಕೊಂಚ ನೆಮ್ಮದಿ ಪಡಬಹುದು. ಯಾಕೆಂದರೆ ಮೊದಲ ಐವತ್ತು ಭ್ರಷ್ಟಾಚಾರ ಇರುವ ದೇಶಗಳ ಯಾದಿಯಲ್ಲಿ ನಾವಿಲ್ಲ. ಪುಣ್ಯಕ್ಕೆ ಅತಿ ಭ್ರಷ್ಟ ರಾಷ್ಟ್ರಗಳ ಯಾದಿಯಲ್ಲಿ ಭಾರತಕ್ಕೆ 72ನೇ ರ್ಯಾಂಕ್‌. ಅಂತರರಾಷ್ಟ್ರೀಯ ಎನ್‌ಜಿಓ ಬುಧವಾರ ಪ್ರಕಟಿಸಿರುವ ಸಮೀಕ್ಷಾ ವರದಿ ಈ ವಿಷಯ ತಿಳಿಸಿದೆ.

ಕ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ (ಟಿಐ) ಎಂಬ ಬರ್ಲಿನ್‌ ಮೂಲದ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು, ಭ್ರಷ್ಟಾಚಾರದ ಅಬ್ಬರ ಇರುವ ರಾಷ್ಟ್ರಗಳ ಯಾದಿಯಲ್ಲಿ ಒಟ್ಟು 91 ದೇಶಗಳನ್ನು ಸಂಸ್ಥೆ ದಾಖಲಿಸಿದೆ. ಕಳೆದ ವರ್ಷ ಇದೇ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ ಭಾರತ ಭ್ರಷ್ಟಾಚಾರದಲ್ಲಿ 69ನೇ ರ್ಯಾಂಕ್‌ ಪಡೆದಿತ್ತು. ಈ ವರ್ಷ ಸ್ವಲ್ಪ ವಾಸಿ ಎನ್ನುವಷ್ಟು ಭ್ರಷ್ಟಾಚಾರ ಸುಧಾರಿಸಿದೆ.

ಸಮೀಕ್ಷೆ ವರದಿ ಹೊರಗೆಡಹಿರುವ ವಿಷಯಗಳ ಪೈಕಿ ದುರಂತವೆಂದರೆ ಕಡು ಬಡ ರಾಷ್ಟ್ರಗಳಲ್ಲೂ ಲಂಚಕೋರತನ ಅತಿಯಾಗಿರುವುದು ! ಯಾವುದೇ ರಾಷ್ಟ್ರದ ಸರ್ಕಾರ ಬಡತನ ನಿರ್ಮೂಲನೆ ಮಾಡುವ ಹಾದಿಯಲ್ಲಿ ನಿರಾಳ ಸಾಗಬೇಕಾದರೆ ಮಗ್ಗುಲಲ್ಲಿರುವ ಭ್ರಷ್ಟಾಚಾರದ ಕಳೆಗಳನ್ನು ಬುಡ ಸಮೇತ ಕಿತ್ತೆಸೆಯಬೇಕು ಎನ್ನುತ್ತಾರೆ ಟಿಐ ಸಂಸ್ಥೆಯ ಭಾರತದ ಪ್ರಾದೇಶಿಕ ಅಧ್ಯಕ್ಷ ತಹಿಲಿಯಾನಿ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X