ದೇಶದಲ್ಲೇ ಪ್ರಥಮ : ಹುಟ್ಟಲಿದೆ ಬೆಂಗಳೂರಲ್ಲಿ ಜೀವಾನಿಲ ಕೋಣೆ !
ಬೆಂಗಳೂರು : ಈ ಕೋಣೆಯಲ್ಲಿ ಶುದ್ಧ ಜೀವಾನಿಲ ಲಭ್ಯ !
ಬೆಂಗಳೂರು ಮಹಾನಗರ ಪಾಲಿಕೆ ಹ್ಞೂಂ ಅನ್ನಬೇಕಷ್ಟೆ. ದಿ ಇನ್ನರ್ ವ್ಹೀಲ್ ಕ್ಲಬ್ ನಗರದ ಎರಡು ಕಡೆ ಶುದ್ಧಾನಿಲ ಚೇಂಬರ್‌ಗಳನ್ನು ಸ್ಥಾಪಿಸಲು ಸಿದ್ಧವಿದೆ. ಇದು ಸರ್ವೇ ಜನಕ್ಕಲ್ಲ. ಹಾಳುಮೂಳು ಗಾಳಿ ಕುಡಿದು ಉಸ್ಸಪ್ಪಾ ಅನ್ನುತ್ತಿರುವ ಪೊಲೀಸರಿಗೆ ಮಾತ್ರ. ಅದೇ ಸ್ವಾಮಿ, ಟ್ರಾಫಿಕ್ ಪೊಲೀಸರಿಗೆ. ಟೈಮ್ಸ್ ಆಫ್ ಇಂಡಿಯಾ ಡಾಟ್ ಕಾಂ, ಭಾರತದಲ್ಲೇ ಮೊದಲು ಎನ್ನಲಾದ ಈ ಅಪರೂಪದ ಸುದ್ದಿ ಹೆಕ್ಕಿದೆ.
ದಿ ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷರಾದ ಗೀತ ಗುರುನಾಥ್ ಮಾತಾಡುತ್ತಾರೆ. ಕೇಳಿ.....
ಯಶವಂತಪುರ ವೃತ್ತ, ಮೇಖ್ರಿ ವೃತ್ತ, ಬಾಳೆಗುಂಡಿ ವೃತ್ತ, ಕ್ವೀನ್ಸ್ ವೃತ್ತ, ಸಿದ್ಧಲಿಂಗಯ್ಯ ವೃತ್ತ, ಜೆ.ಸಿ.ರಸ್ತೆ, ಸಿಟಿ ಮಾರುಕಟ್ಟೆ, ಕಲಾಸಿಪಾಳ್ಯಂ, ಬಸಪ್ಪ ವೃತ್ತ, ಮಿನರ್ವ ವೃತ್ತ, ಲಾಲ್‌ಬಾಲ್ ಮುಖ್ಯದ್ವಾರ, ಡೈರಿ ವೃತ್ತ, ಮೈಕೋ ಲೇ ಔಟ್ ವೃತ್ತ, ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಟ್ರಿನಿಟಿ ವೃತ್ತ - ಈ ಎಲ್ಲಾ ಕಡೆ ಕೆಲಸ ಮಾಡುವ ಟ್ರಾಫಿಕ್ ಪೊಲೀಸರನ್ನು ಆಮ್ಲಜನಕ ಪ್ರಮಾಣ ಪರೀಕ್ಷೆಗೆ ಒಳಪಡಿಸಿದ್ದೇವೆ.
ಡಾ.ರಂಗನಾಥ್ ಹಾಗೂ ಡಾ.ಸಂಪತ್ ಕುಮಾರ್ ರಕ್ತದಲ್ಲಿದ ಆಮ್ಲಜನಕದ ಮಟ್ಟ ಎಷ್ಟೆಂದು ಪತ್ತೆ ಮಾಡಿದ್ದಾರೆ. 111 ಟ್ರಾಫಿಕ್ ಪೊಲೀಸರ ಪೈಕಿ 70 ಮಂದಿ ಆರಾಮಿದ್ದಾರೆ. ಆದರೆ 41 ಪೊಲೀಸರ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಅಗತ್ಯಕ್ಕೆ ತಕ್ಕಂತೆ ಇಲ್ಲ. ಈ ಪೈಕಿ 24 ಪೊಲೀಸರು ಧೂಮಪಾನಿಗಳಲ್ಲ. ಅಂದ ಮೇಲೆ ಈ ಪೊಲೀಸರಿಗೆ ಆಮ್ಲಜನಕ ಬೇಕಲ್ಲವೇ? ಅದಕ್ಕಾಗೇ ಪ್ರತಿಶತ 90ರಷ್ಟು ಶುದ್ಧ ಜೀವಾನಿಲ ತುಂಬಿದ ಕೋಣೆಗಳನ್ನು ಸಿದ್ಧಪಡಿಸಲು ನಾವು ಸಿದ್ಧ. ಬಿಸಿಸಿ ಒಪ್ಪಿಗೆ ಬೇಕಷ್ಟೆ.
ಜೂನ್ 5ರಂದೇ ಈ ಏರ್ ಚೇಂಬರ್‌ಗಳನ್ನು ಉದ್ಘಾಟಿಸಬೇಕೆಂಬುದು ನಮ್ಮ ಆಸೆಯಾಗಿತ್ತು. ಯಾಕೆಂದರೆ ಅಂದೇ ವನಮಹೋತ್ಸವ. ಅದು ಈಡೇರಲಿಲ್ಲ. ಬಿಸಿಸಿ ದೊಡ್ಡ ಮನಸ್ಸು ಮಾಡಲು ಸಮಯ ತೆಗೆದುಕೊಳ್ಳುತ್ತಿದೆ. ಬಿಸಿಸಿ ಆಯುಕ್ತ ಅಶೋಕ್ ದಳವಾಯಿ ಒಪ್ಪಿದ್ದೇವೆ ಅಂತ ಒಂದು ಪತ್ರ ಕೊಟ್ಟಲ್ಲಿ ನಮ್ಮ ಉದ್ದಿಶ್ಯ ಈಡೇರಲಿದೆ. ಪೊಲೀಸರ ಶ್ವಾಸಕೋಶಗಳು ನಗಲಿವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications