ಕೊಳತ್ತೂರು ಮಣಿ ಬಂಧನ ಎಸ್ಟಿಎಫ್ನ ತಪ್ಪು ನಡೆಯೇ?
* ಪಾಪ್ರಿ ಶ್ರೀರಾಮನ್
ಚೆನ್ನೈ: ನರ ಹಂತಕ ವೀರಪ್ಪನ್ನೊಂದಿಗೆ ಸಂಪರ್ಕ ಹೊಂದಿರುವ ತಮಿಳು ರಾಷ್ಟ್ರೀಯವಾದಿ ಕೊಳತ್ತೂರು ಮಣಿ ಅವರನ್ನು ಬಂಧಿಸುವ ಮೂಲಕ ವಿಶೇಷ ಕಾರ್ಯಾಚರಣೆ ಪಡೆ ತಪ್ಪು ಮಾಡಿದೆಯೇ? ತನ್ನ ಕಾರ್ಯಾಚರಣೆಯಲ್ಲಿ ಅಡ್ಡ ಹೆಜ್ಜೆ ಇಟ್ಟಿದೆಯೇ? ಹೌದೆನ್ನುತ್ತಾರೆ, ವೀರಪ್ಪನ್ ಪ್ರಕರಣವನ್ನು ಆದ್ಯಂತವಾಗಿ ಬಲ್ಲ ವಿಶ್ಲೇಷಕರು.
ವೀರಪ್ಪನ್ ಮರ್ಮವನ್ನು ಬಲ್ಲ ರಾಷ್ಟ್ರೀವಾದಿಗಳ ಮೂಲಕ ಎಸ್ಟಿಎಫ್ ವೀರಪ್ಪನನ್ನು ಉಪಾಯವಾಗಿ ಸೇರಲು ಸಾಧ್ಯವಿತ್ತು . ಆದರೆ, ಜೂನ್ 25 ರಂದು ಕೊಳತ್ತೂರು ಮಣಿಯನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ವೀರಪ್ಪನ್ ಸಂಪರ್ಕ ಸಾಧಿಸಲು ಇದ್ದ ಅವಕಾಶಗಳನ್ನು ಎಸ್ಟಿಎಫ್ ಕೈಯಾರೆ ಹಾಳು ಮಾಡಿಕೊಂಡಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯ.
ಎರಡು ವರ್ಷಗಳ ಹಿಂದೆ ಬಂಧಿತರಾಗಿದ್ದ ಎಸ್.ಎ. ಮಣಿಕಂಠನ್ ಎನ್ನುವ ಮತ್ತೊಬ್ಬ ತಮಿಳು ರಾಷ್ಟ್ರೀಯವಾದಿ , ಸರ್ಕಾರ ಕ್ಷಮಾದಾನ ನೀಡಲು ಮುಂದಾದಲ್ಲಿ ವೀರಪ್ಪನ್ ಶರಣಾಗತಿಗೆ ತಾವು ಹಾಗೂ ಪಿ. ನೆಡುಮಾರನ್ ಪ್ರಯತ್ನಿಸಲು ಸಿದ್ಧ ಎಂದು ಜೂನ್ 26 ರಂದು ನೀಡಿದ ಹೇಳಿಕೆಯನ್ನು ಇಲ್ಲಿ ಗಮನಿಸಬಹುದು.
ಪ್ರಸ್ತುತ ಮಣಿ ಅವರ ಬಂಧನ ನೆಡುಮಾರನ್ ಅವರು ಸೇರಿದಂತೆ ತಮಿಳು ರಾಷ್ಟ್ರೀಯವಾದಿಗಳನ್ನು ಕೆರಳಿಸಿದೆ. ಇದರಿಂದಾಗಿ ಹೆಚ್ಚೂ ಕಡಿಮೆ, ತಮಿಳು ರಾಷ್ಟ್ರೀಯವಾದಿಗಳ ಮೂಲಕ ಸಾಧಿಸಬಹುದಾಗಿದ್ದ ವೀರಪ್ಪನ್ ಸಂಪರ್ಕದ ಬಾಗಿಲುಗಳು ಮುಚ್ಚಿದಂತೆಯೇ. ಎಸ್ಟಿಎಫ್ ಪ್ರಸ್ತುತ ಹೊಸದಾರಿಗಳನ್ನು ಹುಡುಕಿಕೊಳ್ಳುವುದು ಅನಿವಾರ್ಯ.
(ಐಎಎನ್ಎಸ್)
ಮುಖಪುಟ / ವೀರಪ್ಪನ್ ಶಿಕಾರಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications