ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜು ವಿಭಾಗ ಮುಚ್ಚಲು ಸುತ್ತೋಲೆ
ಬೆಂಗಳೂರು : ಬೆಂಗಳೂರು ವಿಶ್ವ ವಿದ್ಯಾಲಯದ ಮಾನ್ಯತೆ ಪಡೆದ ಅನುದಾನಿತ ಪ್ರಥಮದರ್ಜೆ ಕಾಲೇಜುಗಳಲ್ಲಿ ತಲಾ 120 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳನ್ನು ಮುಚ್ಚುವಂತೆ ಸರಕಾರ ಆದೇಶ ಹೊರಡಿಸಿದೆ.
120 ವಿದ್ಯಾರ್ಥಿಗಳಿಲ್ಲದ ವಿಭಾಗಗಳನ್ನು ಮುಚ್ಚಲು ಆದೇಶಿಸಿದ್ದರೂ ಆ ಕಾಲೇಜಿನ 15ರಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಬೇರೆ ಯಾವುದೇ ಕಾಲೇಜು ಇಲ್ಲದೇ ಇದ್ದಲ್ಲಿ, ಅಂತಹ ಕಾಲೇಜಿನ ವಿಭಾಗಗಳಿಗೆ ಈ ಆದೇಶದಿಂದ ವಿನಾಯಿತಿ ಇದೆ.
ವಿವಿಧ ವಿಭಾಗಗಳನ್ನು ಮುಚ್ಚಿರುವ ಕಾಲೇಜುಗಳು : ಭಗವಾನ್ ಬುದ್ಧ ಕಾಲೇಜು( ಕಲೆ ಮತ್ತು ವಾಣಿಜ್ಯ), ಬಿಎನ್ಎಂ ಕಾಲೇಜು( ಕಲೆ), ದಯಾನಂದ ಕಾಲೇಜು (ವಿಜ್ಞಾನ ಮತ್ತು ವಾಣಿಜ್ಯ), ಹಸನತ್ ಬಾಲಕರ ಕಾಲೇಜು(ವಾಣಿಜ್ಯ), ಎಚ್ಕೆಎಸ್ ವೀರೇಂದ್ರ ಪಾಟೀಲ್ ಕಾಲೇಜು(ಕಲೆ ಮತ್ತು ವಾಣಿಜ್ಯ), ವಿದ್ಯಾವರ್ಧಕ ಸಂಘ ಕಾಲೇಜು(ವಿಜ್ಞಾನ), ಅಬ್ಬಾಸ್ ಖಾನ್ ಮಹಿಳಾ ಕಾಲೇಜು (ಕಲೆ), ಎಪಿಎಸ್ಕಾಲೇಜು (ವಿಜ್ಞಾನ), ಆಲ್ಆಮೀನ್ ಕಾಲೇಜು( ಕಲೆ), ನ್ಯಾಷನಲ್ ಕಾಲೇಜು, ಜಯನಗರ (ವಿಜ್ಞಾನ).
ಪಿಇಎಸ್ ಕಾಲೇಜು, ಎಸ್ಎಸ್ಎಂಆರ್ವಿ ಕಾಲೇಜು ಮತ್ತು ವಿವಿಪುರಂ ಕಾಲೇಜುಗಳ ವಿಜ್ಞಾನ ವಿಭಾಗ, ಗೌರಿಬಿದನೂರಿನ ಆಚಾರ್ಯ ಕಾಲೇಜು (ವಾಣಿಜ್ಯ) ಮತ್ತು ನ್ಯಾಷನಲ್ ಕಾಲೇಜು (ವಿಜ್ಞಾನ ಮತ್ತು ವಾಣಿಜ್ಯ), ಚೆನ್ನಪಟ್ಟಣದ ಕುವೆಂಪು ಕಾಲೇಜು (ವಾಣಿಜ್ಯ), ತುಮಕೂರಿನ ಯೂನಿಯನ್ ಕ್ರಿಶ್ಚಿಯನ್ ಕಾಲೇಜು( ವಾಣಿಜ್ಯ) , ಸಿದ್ಧಾರ್ಥ ಕಾಲೇಜು (ವಾಣಿಜ್ಯ) ಮತ್ತು ಸಿದ್ಧಗಂಗಾ ಕಲಾ ವಾಣಿಜ್ಯ ಹಾಗೂ ಮಹಿಳಾ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗಗಳನ್ನು ಮುಚ್ಚಲಾಗುವುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications