ಕ್ಷಮಾದಾನ ನೀಡಿದರೆ ವೀರಪ್ಪನ್ ಶರಣಾಗಲು ಸಿದ್ಧ : ಮಣಿಕಂಠನ್
ಬೆಂಗಳೂರು: ಕಾಡುಗಳ್ಳನ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ವಾಲ್ಟರ್ ಥೇವಾರಂ ವೀರಪ್ಪನ್‌ನನ್ನು ಹಿಡಿಯುತ್ತಾರೋ, ಕೊಲ್ಲುತ್ತಾರೋ, ಇಲ್ಲವೇ ವೀರಪ್ಪನ್‌ನೇ ಶರಣಾಗತನಾಗುತ್ತಾನೋ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಆದರೆ, ವೀರಪ್ಪನ್‌ನನ್ನು ಶರಣಾಗಿಸುವ ಪ್ರಯತ್ನಗಳು ಮಾತ್ರ ನಡೆಯುತ್ತಿವೆ ಎಂಬ ಸುಳಿವು ಸಿಕ್ಕಿದೆ.
ಪಟ್ಟಳಿ ಮಕ್ಕಳ ಕಚ್ಚಿ ರಾಮದಾಸ್ ಅವರ ಮೂಲಕ ಮೊದಲು ವೀರಪ್ಪನ್ ಮನವೊಲಿಸಿ ಶರಣಾಗುವಂತೆ ಮಾಡುವ ಪ್ರಯತ್ನ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ವೀರಪ್ಪನ್ ಇದಕ್ಕೆ ಒಪ್ಪದಿದ್ದರೆ, ತೀವ್ರ ಕಾರ್ಯಾಚರಣೆ ನಡೆಯುವುದು ಶತಃಸಿದ್ಧ. ಈಗಾಗಲೇ ಕರ್ನಾಟಕ ಕಾರ್ಯಪಡೆ ಮೆಟ್ಟೂರು ಅರಣ್ಯ ಪ್ರದೇಶದಲ್ಲಿ ತೀವ್ರ ಕಾರ್ಯಾಚರಣೆ ಆರಂಭಿಸಿದೆ.
ಈ ಮಧ್ಯೆ ವೆಲ್ಲಿತಿರಪೂರ್ ಪೊಲೀಸ್ ಠಾಣೆ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ವೀರಪ್ಪನ್ ಸಹಚರನಾಗಿದ್ದ ಎಸ್.ಎ. ಮಣಿಕಂಠನ್ ಕೂಡ ಕ್ಷಮಾದಾನ ನೀಡುವುದಾದರೆ, ವೀರಪ್ಪನ್ ಶರಣಾಗಲು ಸಿದ್ಧನಾಗಿದ್ದಾನೆ ಎಂಬ ಹೇಳಿಕೆ ನೀಡಿದ್ದಾನೆ.
ವೀರಪ್ಪನ್‌ನನ್ನು ಹಿಡಿಯಲು ಕೋಟ್ಯಂತರ ರುಪಾಯಿ ಖರ್ಚು ಮಾಡುವ ಬದಲು ಕಾನೂನಿನ ಚೌಕಟ್ಟಿನಲ್ಲಿ ಆತನಿಗೆ ಕ್ಷಮಾದಾನ ನೀಡುವ ಬಗ್ಗೆ ಚಿಂತಿಸಿ, ಹತ್ತಾರು ವರ್ಷಗಳ ಈ ಸಮಸ್ಯೆಗೆ ಮಂಗಳ ಹಾಡಬೇಕು ಎಂದು ಮಣಿಕಂಠನ್ ಸಲಹೆ ನೀಡಿದ್ದಾನೆ. ವೀರಪ್ಪನ್ ಶರಣಾಗಲು ಸಿದ್ಧನಾಗಿದ್ದಾನೆ. ಹೀಗಾಗೇ ಅವನು ಯಾವುದೇ ದಾಳಿ ನಡೆಸುತ್ತಿಲ್ಲ ಎಂದೂ ಮಣಿಕಂಠನ್ ಹೇಳಿದ್ದಾನೆ.
ಕೊಳತ್ತೂರು ಮಣಿ ಬಂಧನ: ವೀರಪ್ಪನ್ ಡಾ. ರಾಜ್‌ಕುಮಾರ್ ಅವರನ್ನು ಅಪಹರಿಸಿದ್ದ ಸಂದರ್ಭದಲ್ಲಿ ನೆಡುಮಾರನ್ ಜೊತೆ ಕಾಡಿಗೆ ಸಂಧಾನಕ್ಕೆ ತೆರಳಿದ್ದ ಪೆರಿಯಾರ್ ದ್ರಾವಿಡ ಕಳಗಂನ ಮುಖ್ಯಸ್ಥ ಕೊಳತ್ತೂರು ಮಣಿ ಅವರನ್ನು ಸೋಮವಾರ ರಾತ್ರಿ ತಮಿಳುನಾಡಿನಲ್ಲಿ ಬಂಧಿಸಿಲಾಗಿದೆ.
ಮಂಗಳವಾರ ಮಣಿ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಈಗ ಮಣಿ 15 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎಲ್.ಟಿ.ಟಿ.ಇ, ಟಿಎನ್‌ಎಲ್‌ಎ ಹಾಗೂ ಟಿಎನ್‌ಎಲ್‌ಎಫ್ ಉಗ್ರವಾದಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಮಣಿ ಅವರನ್ನು ಬಂಧಿಸಲಾಗಿದೆ.
ಅಪರಾಧಿಗಳಿಗೆ ರಕ್ಷಣೆ ನೀಡಿದ, ಪ್ರಚೋದನಕಾರಿ ಹೇಳಿಕೆ ನೀಡಿದ ಹಾಗೂ ದೇಶದ ಕಾನೂನು ಉಲ್ಲಂಘಿಸಿದ ಆರೋಪಗಳನ್ನೂ ಮಣಿ ಎದುರಿಸುತ್ತಿದ್ದಾರೆ. ಆದರೆ, ಡಾ. ರಾಜ್ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮಣಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪಳ ನೆಡುಮಾರನ್ ಒತ್ತಾಯಿಸಿದ್ದಾರೆ.
ವಿಚಾರಣೆ ಇಲ್ಲ : ಈ ಮಧ್ಯೆ ನರಹಂತಕನ ಒತ್ತೆಯಾಳಾಗಿದ್ದ ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್ ಅವರನ್ನು ಬಂಧನದಿಂದ ಬಿಡುಗಡೆ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ. ಬಾನು, ರಾಮ್‌ಗೋಪಾಲ್, ಷಣ್ಮುಖ ಸುಂದರಂ, ರಾಘವೇಂದ್ರ ಶಾಸ್ತ್ರೀ ಹಾಗೂ ಇತರರನ್ನು ಕರ್ನಾಟಕ ಪೊಲೀಸರು ಯಾವುದೇ ವಿಚಾರಣೆಗೆ ಒಳಪಡಿಸಿಲ್ಲ. ಈ ವಿಷಯವನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಕೆ. ಶ್ರೀನಿವಾಸನ್ ತಿಳಿಸಿದ್ದಾರೆ.
(ಇನ್‌ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications