ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಧಿಗೆ ಮುನ್ನ ಜನನ : ಮಗುವಿಗೆ ಕಲಿಕೆಯಲ್ಲಿ ಸಮಸ್ಯೆಯಾ?

By Staff
|
Google Oneindia Kannada News

ಅವಧಿಗೆ ಮುಂಚಿತವಾಗಿ ಜನಿಸುವ ಮಕ್ಕಳು, ಶಾಲೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರಾ ? ಹೌದೆನ್ನುತ್ತದೆ ಇತ್ತೀಚಿನ ಅಧ್ಯಯನ- ಸಮೀಕ್ಷೆ. 32 ರಿಂದ 35 ವಾರಗಳಲ್ಲಿ ಜನಿಸಿದ 187 ಮಕ್ಕಳ ನಡವಳಿಕೆಗಳನ್ನು ಅಧ್ಯಯನ ಮಾಡಿರುವ ಸಮೀಕ್ಷೆ ಈ ವಿಷಯವನ್ನು ಹೊರಗೆಡವಿದೆ.

ಪೂರ್ಣಾವಧಿಗೆ ಮುನ್ನ ಜನಿಸುವ ಮಕ್ಕಳು 1500 ಗ್ರಾಂಗಳಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತವೆ. ಇಂಥಾ ಮಕ್ಕಳು ಕಲಿಕೆಯ ದಿನಗಳಲ್ಲಿ ಹಿಂದುಳಿಯುವುದು ಸಾಮಾನ್ಯ. ಇಂಥಾ ಮಕ್ಕಳು (ಸಾಮಾನ್ಯವಾಗಿ 7 ವರ್ಷದ ಆಜೂಬಾಜಿನ) ಎದುರಿಸುವ ಸಮಸ್ಯೆಗಳು ಸಾಮಾನ್ಯವಾಗಿ ಇಂತಿರುತ್ತವೆ-

  • ಪಾಠಗಳನ್ನು ಆಲಿಸುವಲ್ಲಿ ಏಕಾಗ್ರತೆಯ ಕೊರತೆ
  • ಕಲಿಕೆಯಲ್ಲಿ ಹಿಂದುಳಿಯುವಿಕೆ
  • ಶಾಲೆಗೆ ಹಾಜರಾಗುವಲ್ಲಿ ಕಿರಿಕಿರಿ
  • ಇತರೆ ವಿದ್ಯಾರ್ಥಿಗಳೊಂದಿಗೆ ಹೊಂದಾಣಿಕೆಯ ಕೊರತೆ
  • ಪಠ್ಯೇತರ ಚಟುವಟಿಕೆಗಳಲ್ಲಿ ಹಿಂದುಳಿಕೆ
ಒಟ್ಟಾರೆ : ಅವಧಿಗೆ ಮುನ್ನ ಜನಿಸುವ ಮಗುವಿನ ಶೈಕ್ಷಣಿಕ ಪ್ರಗತಿ ಅಷ್ಟಕ್ಕಷ್ಟೇ. ಆದರೆ, ಹೀಗೆ ಜನಿಸುವ ಎಲ್ಲಾ ಮಕ್ಕಳು ಈ ರೀತಿಯ ಲಕ್ಷಣಗಳನ್ನು ಹೊಂದಿರುವುದಿಲ್ಲ ಎಂದು ವರದಿ ಒತ್ತಿಹೇಳುತ್ತದೆ.

ಸಮಸ್ಯೆಗಳನ್ನು ಎದುರಿಸುವ ಮಗು ಕೂಡ ನಂತರದ ತರಗತಿಗಳಲ್ಲಿ ಸುಧಾರಿಸುವ ಸಾಧ್ಯತೆಗಳು ಬಹಳಷ್ಟಿರುತ್ತವೆ. ಎಲ್ಲದಕ್ಕೂ ಪೋಷಕರ ಸಹಕಾರ ಅತ್ಯಗತ್ಯ. ಸಮಸ್ಯೆಯ ಮಗುವೆಂದು ಉದಾಸೀನ ಮಾಡುವ ಬದಲು ನಮ್ಮ ಮಗುವೆಂದು ಪ್ರೋತ್ಸಾಹಿಸುವುದು ಜಾಣ ಅಪ್ಪ ಅಮ್ಮಂದಿರ ಲಕ್ಷಣ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X