ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದಿಂದ ಚಂದ್ರಯಾನ : ಕೆ. ಕಸ್ತೂರಿ ರಂಗನ್‌ ಸಮರ್ಥನೆ

By Staff
|
Google Oneindia Kannada News

ನವದೆಹಲಿ : ಭೂಮಿಯ ಸುತ್ತ ಸುತ್ತುವ ಚಂದ್ರನಲ್ಲಿಗೆ ಅಭಿಯಾನ ಕೈಗೊಳ್ಳುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೋ) ನಿರ್ಧಾರ ಅಛಲವಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಕಸ್ತೂರಿ ರಂಗನ್‌ ಇಲ್ಲಿ ತಿಳಿಸಿದ್ದಾರೆ.

ಭೂಮಿಯ ಉಪಗ್ರಹವಾದ ಚಂದ್ರನ ‘ಮೂಲ’ದ ಬಗ್ಗೆ ಹಲವು ಮೂಲಭೂತ ಪ್ರಶ್ನೆಗಳು ಇವೆ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಇಸ್ರೋ ಈ ನಿರ್ಧಾರ ಕೈಗೊಂಡಿದೆ ಎಂದ ಅವರು ಚಂದ್ರನ ಅಭಿಯಾನದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು.

‘ಬಾಹ್ಯಾಕಾಶದ ಸವಾಲುಗಳು ಮತ್ತು ಚಂದ್ರಯಾನ’ ಎಂಬ ವಿಷಯದ ಕುರಿತು ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಚಂದ್ರನ ಮೂಲದ ಕುರಿತು ಮೂರು ಸಿದ್ಧಾಂತಗಳಿವೆ. ಇದರಲ್ಲಿ ಯಾವ ಸಿದ್ಧಾಂತ ಸರಿ ಎಂದು ಅರಿಯುವುದು ಅಗತ್ಯ ಎಂದರು.

ಪ್ರಥಮ ಹಂತದಲ್ಲೇ ಚಂದ್ರಗ್ರಹಕ್ಕೆ ಗಗನಯಾತ್ರಿಗಳನ್ನು ಕಳುಹಿಸಿಕೊಡುವ ಸಾಧ್ಯತೆಯನ್ನು ತಳ್ಳಿಹಾಕಿದ ಅವರು, ನಮ್ಮಲ್ಲಿ ಲಭ್ಯವಿರುವ ಬಾಹ್ಯಾಕಾಶ ತಂತ್ರಜ್ಞಾನದ ನೆರವಿನಿಂದ ಈ ಅಧ್ಯಯನ ಕೈಗೊಳ್ಳಲು ಚಂದ್ರಯಾನದ ಯೋಜನೆ ರೂಪಿಸಿದ್ದೇವೆ. ಚಂದ್ರಗ್ರಹಕ್ಕೆ ಅತ್ಯಾಧುನಿಕ ಉಪಕರಣವನ್ನು ಕಳುಹಿಸಿ, ಅಧ್ಯಯನ ನಡೆಸಲಾಗುವುದು ಎಂದು ತಿಳಿಸಿದರು.

ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿಯೇ ಕಸ್ತೂರಿ ರಂಗನ್‌ ಅವರು ಇನ್ನಾರು ವರ್ಷದಲ್ಲಿ ಚಂದ್ರಯಾನ ಕೈಗೊಳ್ಳುವ ಸುಳಿವು ನೀಡಿದ್ದರು. ಇದು ಖಂಡಿತ ಕನಸಿನ ಯೋಜನೆಯಲ್ಲ. ಹೆಚ್ಚಿನದನ್ನು ಸಾಧಿಸಲು ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದ್ದರು.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X