ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಲಾರ್‌ ವಿದ್ಯುತ್‌ ಸಂಶೋಧನೆಯಲ್ಲಿ ಧಾರವಾಡ ವಿಜ್ಞಾನಿಯ ವಿಕ್ರಮ

By Staff
|
Google Oneindia Kannada News

ಬೆಂಗಳೂರು : ಅಮೆರಿಕಾದ ಪರ್ಡ್ಯೂ ವಿಶ್ವ ವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಧಾರವಾಡದ ಡಾ. ಶ್ರೀಪಾದ್‌ ರೇವಣಕರ್‌, ಸೋಲಾರ್‌ ಆಧಾರಿತ ಉಪಕರಣ ಪರೀಕ್ಷೆಗಾಗಿ ಹೊಸ ವಿಧಾನವೊಂದನ್ನು ಕಂಡುಹಿಡಿದಿದ್ದಾರೆ.

ಈ ಹೊಸ ವಿಧಾನದ ಸಹಾಯದಿಂದ ಅಮೆರಿಕನ್‌ ಸ್ಪೇಸ್‌ ಏಜೆನ್ಸಿ ಮತ್ತು ನಾಸಾಗೆ ಮಿಲಿಯನ್‌ಗಟ್ಟಲೆ ಡಾಲರ್‌ ಹಣ ಉಳಿತಾಯವಾಗಲಿದೆ. ಬಾಹ್ಯಾಕಾಶದಲ್ಲಿ ಸೋಲಾರ್‌ ಆಧಾರಿತ ಉಪಕರಣಗಳ ಪರೀಕ್ಷೆಗೆ ತಗಲುವ ವೆಚ್ಚಕ್ಕಿಂತ ತುಂಬಾ ಕಡಿಮೆ ಖರ್ಚಿನಲ್ಲಿ ಭೂಮಿ ಮೇಲೆಯೇ ಪರೀಕ್ಷೆ ನಡೆಸಬಹುದು ಎಂದು ರೇವಣಕರ್‌ ತೋರಿಸಿಕೊಟ್ಟಿದ್ದು, ವಿಜ್ಞಾನಿಗಳ ವಲಯ ರೇವಣಕರ್‌ ಸಾಧನೆಯನ್ನು ಶ್ಲಾಘಿಸಿದೆ.

ಹೊಸ ಅನ್ವೇಷಣೆಯು ಭೂಮಿಯ ಮಾದರಿಯಲ್ಲಿರುವ ಉಪಗ್ರಹಗಳಿಗೆ ಉಪಯುಕ್ತವಾಗಿದ್ದು, ಈ ವಿಧಾನದ ಮೂಲಕ ಸೋಲಾರ್‌ ಆಧಾರಿತ ಉಪಕರಣ ಕತ್ತಲಲ್ಲೂ ವಿದ್ಯುತ್‌ ಉತ್ಪಾದಿಸಬಲ್ಲುದು. ವಿಧಾನದಲ್ಲಿ ದೊಡ್ಡ ಗಾತ್ರ ಮತ್ತು ಸಾಮರ್ಥ್ಯದ ಬ್ಯಾಟರಿಗಳನ್ನು ಬಳಸಬೇಕಾಗಿಲ್ಲ. ಇದೇ ಪ್ರಯೋಗವನ್ನು ಪ್ರಯೋಗಾಲಯದಲ್ಲಿ ಹತ್ತು ಸಾವಿರಕ್ಕೂ ಕಡಿಮೆ ಡಾಲರ್‌ ವೆಚ್ಚದಲ್ಲಿ ನಡೆಸಿದ್ದೇನೆ ಎನ್ನುತ್ತಾರೆ ರೇವಣಕರ್‌.

ಪ್ರಸ್ತುತ ರೇವಣಕರ್‌ ಅಮೆರಿಕಾದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ನ್ಯೂಕ್ಲಿಯರ್‌ ಇಂಜಿನಿಯರಿಂಗ್‌ನ ಸಹ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ರೇವಣಕರ್‌ ಅವರ ‘ಫೇಸ್‌ಚೇಂಜ್‌ ಸೋಲಾರ್‌ ಎನರ್ಜಿ ಸಿಸ್ಟಮ್‌’, ಫೇಸ್‌ ಚೇಂಜ್‌ ಮೆಟೀರಿಯಲ್‌ ತತ್ವದ ಪ್ರಕಾರ ಕೆಲಸ ನಿರ್ವಹಿಸುತ್ತದೆ.

ಕನ್ನಡ ಮಾಧ್ಯಮದಲ್ಲಿ ಓದಿರುವ ರೇವಣಕರ್‌ ಅವರು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ವಿದ್ಯಾರ್ಥಿ. ನಂತರ ನ್ಯೂಕ್ಲಿಯರ್‌ ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಅಧ್ಯಯನಕ್ಕಾಗಿ ಅಮೆರಿಕಾಕ್ಕೆ ತೆರಳಿದವರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X