ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ ವಿಶ್ವೇಶ್ವರಯ್ಯ ಕನ್ನಂಬಾಡಿಯ ಕಟ್ಟೋಕೆ ಮುನ್ನವೇ ಸಾವಿರಾರು ಕೆರೆಗಳಿದ್ದವು’

By Staff
|
Google Oneindia Kannada News

ಬೆಂಗಳೂರು : ವಿಶ್ವೇಶ್ವರಯ್ಯನವರು ಕನ್ನಂಬಾಡಿ ಅಣೆಕಟ್ಟೆಯನ್ನು ನಿರ್ಮಿಸುವ ಮುನ್ನವೇ ರಾಜ್ಯದಲ್ಲಿ ಸಾವಿರಾರು ಕೆರೆಗಳಿದ್ದವು ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ , ಕಾವೇರಿ ಜಲಾನಯನ ಪ್ರದೇಶದಲ್ಲಿ ಕೆರೆಗಳ ಹೂಳೆತ್ತುವುದನ್ನು ನಿರ್ಬಂಧಿಸಿರುವ ಕೇಂದ್ರದ ಕ್ರಮವನ್ನು ಗೇಲಿ ಮಾಡಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆಶ್ರಯದಲ್ಲಿ ಜರುಗಿದ ಕೃಷಿ ಹವಾಗುಣ ಯೋಜನೆ ಮತ್ತು ಮಾಹಿತಿ ಬ್ಯಾಂಕ್‌ ಕುರಿತ ಕಾರ್ಯಾಗಾರದ ಪ್ರಾಯೋಗಿಕ ಮಾಹಿತಿ ಸೇವೆಗಳ ಪ್ರಾರಂಭೋತ್ಸವಕ್ಕೆ ಸೋಮವಾರ ಚಾಲನೆ ನೀಡಿ ಮುಖ್ಯಮಂತ್ರಿ ಮಾತನಾಡುತ್ತಿದ್ದರು. ಕಾವೇರಿ ವಿವಾದಕ್ಕೂ ಕೆರೆಗಳ ಹೂಳೆತ್ತುವುದಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ ಅವರು, ಹೂಳೆತ್ತುವ ಕಾರ್ಯ ಮುಂದುವರಿಸುವುದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಕೇಂದ್ರ ಜಲ ಸಂಪನ್ಮೂಲ ಇಲಾಖೆ ರಾಜ್ಯಕ್ಕೆ ತಜ್ಞರ ತಂಡವನ್ನು ಕಳುಹಿಸಿಕೊಟ್ಟಲ್ಲಿ ಅವರಿಗೆ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಡಲು ನಾವು ಸಿದ್ಧರಿದ್ದೇವೆ. ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಲು ತೀರ್ಮಾನಿಸಿದ್ದೇನೆ. ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್‌ ಅವರನ್ನು ಭೇಟಿ ಮಾಡುವ ತುರ್ತಿನಲ್ಲಿ ಪ್ರಧಾನಿ ಇರುವುದರಿಂದ, ವಾಜಪೇಯಿ ಅವರೊಂದಿಗಿನ ಭೇಟಿ ವಿಳಂಬವಾಗಬಹುದು ಎಂದು ಕೃಷ್ಣ ಹೇಳಿದರು.

ಕೃಷಿ ಸಚಿವ ಜಯಚಂದ್ರ, ಇಸ್ರೋ ಅಧ್ಯಕ್ಷ ಕಸ್ತೂರಿರಂಗನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X